ಅತ್ಯಾಚಾರಿಯನ್ನು ಸುಟ್ಟು ಕೊಂದ ದಿಟ್ಟ ಮಹಿಳೆ

ಪಾರ್ಸಾ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸೂಯಿಯನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಿಧವೆಯಾಗಿರುವ 45 ವರ್ಷದ ಮಹಿಳೆ ತನ್ನ ಮನೆಯಲ್ಲಿ ಮಲಗಿದ್ದಾಗ, ಬಲವಂತವಾಗಿ ಪ್ರವೇಶಿಸಿದ ಭೋಲಾ ಠಾಕುರ್ ಎಂಬಾತ ಆಕೆಯನ್ನು ಬಲಾತ್ಕರಿಸಿದ್ದಾನೆ.
ಸಿಕ್ಕಾಪಟ್ಟೆ ಕುಡಿದಿದ್ದ ಭೋಲಾ ಠಾಕೂರ್ ಅತ್ಯಾಚಾರ ನಡೆಸಿದ ನಂತರ ಆಕೆಯ ಮನೆಯಲ್ಲಿಯೇ ಪ್ರಜ್ಞೆತಪ್ಪಿ ಬಿದ್ದಿದ್ದಾನೆ. ರೊಚ್ಚಿಗೆದ್ದ ಮಹಿಳೆ ಸೀಮೆಎಣ್ಣೆ ಸುರುವಿ ರೂಮಿಗೆ ಬೆಂಕಿಹಚ್ಚಿ ಮನೆಯಿಂದ ಹೊರಗೆ ಓಡಿದ್ದಾಳೆ. ಮನೆಗೆ ಹೊರಗಿನಿಂದ ಅಗುಳಿ ಹಾಕಿ ಗ್ರಾಮಸ್ಥರಿಗೆ ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಹೇಳಲು ಹೋಗಿದ್ದಾಳೆ.
ಗ್ರಾಮಸ್ಥರು ಬಂದು ನೋಡುವಷ್ಟರಲ್ಲಿ ಮನೆಯೇ ಧಗಧಗನೆ ಉರಿಯುತ್ತಿತ್ತು ಮತ್ತು ಅತ್ಯಾಚಾರಿ ಭೋಲಾ ಠಾಕುರ್ ಸುಟ್ಟು ಹೋಗಿದ್ದ. ಆತನನ್ನು ಪಟ್ನಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಕಳೆದ ಸಂಜೆ ಅಸುನೀಗಿದ.
ಭೋಲಾ ಠಾಕೂರ್ ವಿಧವೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪವನ್ನು ಭೋಲಾನ ಹೆಂಡತಿ ತಳ್ಳಿಹಾಕಿದ್ದು, ವಿನಾಕಾರಣ ಮಹಿಳೆ ತನ್ನ ಗಂಡನನ್ನು ಕೊಂದುಹಾಕಿದ್ದಾಳೆ ಎಂದು ಪ್ರತ್ಯಾರೋಪ ಮಾಡಿದ್ದಾಳೆ. ಭೋಲಾನ ಹೆಂಡತಿ ಅತ್ಯಾಚಾರಕ್ಕೊಳಗಾದ ಮಹಿಳೆ ಮೇಲೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ ಅಥವಾ ಮಹಿಳೆ ಹತ್ಯೆಯಾದರೆ ಮರಣದಂಡನೆ ಶಿಕ್ಷೆ ನೀಡುವ ಅತ್ಯಾಚಾರ ವಿರೋಧಿ ಕಾನೂನಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಂಕಿತ ಹಾಕಿದರು.












Click it and Unblock the Notifications