ಏಪ್ರಿಲ್ ಫೂಲ್ ಅಲ್ಲ: ಪೆಟ್ರೋಲ್ ಬೆಲೆ ಕಡಿಮೆಯಾಯ್ತಲ್ಲ

ಪ್ರಸ್ತುತ, ಲೀಟರಿಗೆ 85 ಪೈಸೆ ಇಳಿಕೆಯಾಗಿದೆ. ಕಳೆದೆರಡು ವಾರಗಳಲ್ಲಿ ಎರಡನೆಯ ಬಾರಿಗೆ ಪೆಟ್ರೋಲ್ ಬೆಲೆ ಕಡಿಮೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಕುಸಿತದಿಂದಾಗಿ ಈ ಇಳಿಕೆ ಸಾಧ್ಯವಾಗಿದೆ. ಅಲ್ಲಿಗೆ ಮೂರು ವಾರಗಳಲ್ಲಿ 2.85 ಪೈಸೆಯಷ್ಟು ಇಳಿಕೆ ಕಂಡುಬಂದಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಧಾರಣೆ: ಇನ್ನು ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ಧಾರಣೆ ಲೀಟರಿಗೆ 75 ರೂಪಾಯಿಯಿದೆ. ಅಂದರೆ ಇಲ್ಲಿ ಲೀಟರಿಗೆ 1 ರೂಪಾಯಿ 11 ಪೈಸೆ ಕಡಿಮೆ ಮಾಡಲಾಗಿದೆ.
ಮಾ. 16ರಂದು ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 2 ರೂ. ಇಳಿಸಲಾಗಿತ್ತು. ಇದು ಕಳೆದ 9 ತಿಂಗಳುಗಳ ಅವಧಿಯಲ್ಲಿ ಮಾಡಲಾದ ಅತಿ ಹೆಚ್ಚು ಪ್ರಮಾಣದ ಇಳಿಕೆಯಾಗಿದ್ದು ವ್ಯಾಟ್ ಸೇರಿ ಲೀಟರ್‌ಗೆ 2.40 ರೂ. ಕಡಿಮೆಯಾಗಿತ್ತು. ಪೆಟ್ರೋಲ್‌ನ ಪರಿಷ್ಕೃತ ಬೆಲೆ ಮುಂಬಯಿಯಲ್ಲಿ 74.14 ರೂ, ಕೋಲ್ಕತಾದಲ್ಲಿ 74.72 ರೂ. ಮತ್ತು ಚೆನ್ನೈಯಲ್ಲಿ 70.34 ರೂ. ಆಗಿದೆ.
ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 68.34 ರೂ. ಗಳಿಂದ 67.29 ರೂ. ಗೆ ಇಳಿಕೆಯಾಗಿದ್ದು ಪ್ರತಿ ಲೀಟರ್‌ಗೆ 1.02 ರೂ. ಕಡಿಮೆಯಾಗಿದೆ.












Click it and Unblock the Notifications