ಇಂದು ಮಧ್ಯಾಹ್ನ ಕೇಂದ್ರ ನೌಕರರ DA ಹೆಚ್ಚಳ

ಇದು ಅಂಗೀಕಾರವಾದರೆ ಸುಮಾರು 50 ಲಕ್ಷ ಉದ್ಯೋಗಿಗಳು, 30 ಲಕ್ಷ ಪಿಂಚಣಿದಾರರು ಇದರ ಲಾಭ ಪಡೆಯಲಿದ್ದಾರೆ. ಇದರಿಂದ ಸಂಬಳಗಳು ತಲಾ ಕನಿಷ್ಠ 560 ರೂ. ಏರಿಕಯಾಗಲಿದೆ.
ಶೇ. 72ರಷ್ಟಿರುವ ಹಾಲಿ ತುಟ್ಟಿಭತ್ಯೆಯನ್ನು ಶೇ. 8ಷ್ಟು ಏರಿಸಿ, ಶೇ. 80ಕ್ಕೆ ಮುಟ್ಟಿಸುವ ಕುರಿತು ವಿತ್ತ ಮಂತ್ರಿಗಳ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಇಂದು ಪರಿಶೀಲಿಸಲಿದೆ ಎಂದು ಮೂಲಗಳು ಹೇಳಿವೆ.
ಜನವರಿ 1, 2013 ರಿಂದಲೇ ಈ ಏರಿಕೆ ಪೂರ್ವಾನ್ವಯವಾಗುತ್ತದೆ. ಆದ್ದರಿಂದ ಉದ್ಯೋಗಿಗಳು ಹಿಂದಿನ ತಿಂಗಳ ಬಾಕಿ ಹಣ ಪಡೆದುಕೊಳ್ಳಲು ಅರ್ಹರು ಎಂದು ಹೇಳಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೇಂದ್ರ ತುಟ್ಟಿಭತ್ಯೆಯನ್ನು ಶೇ. 72ಕ್ಕೆ ಏರಿಸಿತ್ತು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications