ಮತ್ತೆ ಬಿಜೆಪಿ ಮಡಿಲಿಗೇ ಮರಳಿದ ನಾಗರಾಜ ಶೆಟ್ಟಿ

ಈ ಬೆಳವಣಿಗೆಯ ನಂತರ ಯಡಿಯೂರಪ್ಪನವರ ಪುರಾತನ ಗೆಳೆಯ ನಾಗರಾಜ ಶೆಟ್ಟರು ಕೆಜೆಪಿ ಸೇರಲಿದ್ದಾರೆ ಎಂಬ ವದಂತಿ ಕೇಳಿಬಂದಿತ್ತು. ಅದಕ್ಕೆಲ್ಲ ತೆರೆ ಎಳೆದಿರುವ ನಾಗರಾಜ ಶೆಟ್ಟರು ಇದೀಗ ಬಿಜೆಪಿ ಕೈಹಿಡಿದಿದ್ದಾರೆ.
ಈ ಹಿಂದೆ ನಾಗರಾಜ ಶೆಟ್ಟರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.ಇಂದು ಶುಕ್ರವಾರ ನೆಹರೂ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ನಾಗರಾಜ ಶೆಟ್ಟರು ಭಾರತೀಯ ಜನತಾ ಪಕ್ಷಕ್ಕೆ ಮರಳಿ ಸೇರ್ಪಡೆಯಾಗಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಸಮಿತಿ ತಿಳಿಸಿದೆ.
ಇವರ ಜತೆಗೆ ಎಂಜಿ ಹೆಗ್ಡೆ ಹಾಗೂ ಇತರೆ ಹತ್ತಾರು ನಾಯಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಮುಜುಗರ ಉಂಟುಮಾಡಬೇಕೆಂದೇ ನಾಗರಾಜ ಶೆಟ್ಟಿ ಅವರು ಜೆಡಿಎಸ್ಸಿಗೆ ಬಂದು, ಈಗ ಬಿಜೆಪಿಗೇ ಮರಳಿದ್ದಾರೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಶೀಲ್ ನರೋನ್ಹಾ ಪ್ರತಿಕ್ರಿಯಿಸಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications