ಬೆಂಗಳೂರಿನಿಂದ ತಿರುಪತಿಗೆ ಪುಷ್ಪಕ ವಿಮಾನ

Air India to launch flights between Bangalore and Tirupati
ಬೆಂಗಳೂರು, ಮಾ.28: ಪ್ರವಾಸಿಗರ ಬೇಡಿಕೆಗೆ ಸ್ಪಂದಿಸಿರುವ ಏರ್ ಇಂಡಿಯಾ ಸಂಸ್ಥೆ ಭಕ್ತಾದಿಗಳ ಅನುಕೂಲಕ್ಕಾಗಿ ಬೆಂಗಳೂರು ತಿರುಪತಿ ನಡುವೆ ನೇರ ವಿಮಾನಯಾನ ಸಂಪರ್ಕ ಒದಗಿಸಿದೆ.

ರಜಾ ದಿನಗಳನ್ನು ನೋಡಿಕೊಂಡು ವಾರದಲ್ಲಿ ಮೂರು ಸಲ ಬೆಂಗಳೂರು -ತಿರುಪತಿ ನಡುವೆ ಅಲೈಯನ್ಸ್ ಏರ್ ಸಹಯೋಗದೊಂದಿಗೆ ಏರ್ ಇಂಡಿಯಾ ವಿಮಾನ ಸಂಚರಿಸಲಿದೆ. ಈ ಹೊಸ ವಿಮಾನಯಾನ ಏ.1ರಿಂದ ಆರಂಭಗೊಳ್ಳಲಿದೆ ಎಂದು ಏರ್ ಇಂಡಿಯಾ ಪ್ರಕಟಿಸಿದೆ.

ATR 42 ಏರ್ ಕ್ರಾಫ್ಟ್ ನಿಂದ ನಿರ್ವಹಿಸಲ್ಪಡುವ ಹೊಸ ವಿಮಾನ AI 9509 ಬೆಂಗಳೂರನ್ನು ಸಂಜೆ 4 ಗಂಟೆಗೆ ಬಿಟ್ಟು ತಿರುಪತಿಯನ್ನು ಸಂಜೆ 5 ಗಂಟೆಗೆ ತಲುಪಲಿದೆ. ಸೋಮವಾರ, ಬುಧವಾರ ಹಾಗೂ ಶುಕ್ರವಾರ ಈ ವಿಮಾನಯಾನ ಸೌಲಭ್ಯ ಲಭ್ಯವಿರುತ್ತದೆ ಎಂದು ಏರ್ ಇಂಡಿಯಾ ವಕ್ತಾರರು ಹೇಳಿದ್ದಾರೆ.

ತಿರುಪತಿಯಿಂದ ಪ್ರತ್ಯೇಕ ವಿಮಾನ AI 9510 ಸಂಜೆ 5.30ಕ್ಕೆ ಹೊರಟು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 6.25ಕ್ಕೆ ತಲುಪಲಿದೆ. ರಿಟನ್ ಫ್ಲೈಟ್ ಕೂಡಾ ಮೇಲ್ಕಂಡ ಮೂರು ದಿನಗಳಲ್ಲಿ ಮಾತ್ರ ಸೇವೆ ಒದಗಿಸುತ್ತದೆ ಎಂದು ಏರ್ ಇಂಡಿಯಾ ಹೇಳಿದೆ. ಪ್ರವಾಸಿ ಕೇಂದ್ರಗಳಿಗೆ ಅನುಕೂಲವಾಗುವಂತೆ ಹೆಚ್ಚೆಚ್ಚು ವಿಮಾನಯಾನ ಸಂಪರ್ಕ ಒದಗಿಸಲು ಏರ್ ಇಂಡಿಯಾ ಬದ್ಧವಾಗಿದೆ ಎಂದು ವಕ್ತಾರರು ಹೇಳಿದರು.

ಸಂಪರ್ಕ ವ್ಯವಸ್ಥೆ : ರೇನಿಗುಂಟಾ ವಿಮಾನ ನಿಲ್ದಾಣ ತಿರುಪತಿಯಿಂದ 15 ಕಿ.ಮೀ. ದೂರದಲ್ಲಿದೆ. ದೆಹಲಿ, ಬೆಂಗಳೂರು, ಹೈದ್ರಾಬಾದ್‌, ಚೆನ್ನೈ ಮತ್ತಿತರ ಭಾಗದಿಂದ ರೇನಿಗುಂಟಾಗೆ ನಿರಂತರ ವಿಮಾನ ಸಂಪರ್ಕ ಇದೆ.

ದೇಶದ ಎಲ್ಲಾ ನಗರಗಳಿಂದ ನೇರಸಂಪರ್ಕ ಹೊಂದಿರುವ ಉತ್ತಮ ರೈಲು ನಿಲ್ದಾಣ ತಿರುಪತಿಯಲ್ಲಿಯೇ ಇದೆ. ಖಾಸಗಿ ಹಾಗೂ ಸರ್ಕಾರಿ ಬಸ್‌ಗಳಿಗಂತೂ ಕೊರತೆ ಇಲ್ಲ. ಚೆನ್ನೈ, ಬೆಂಗಳೂರು, ವೈಜಾಗ್‌, ಹೈದ್ರಾಬಾದ್‌ಗಳಿಂದ ಇಲ್ಲಿಗೆ ಸಂಪರ್ಕ ಇದೆ.

ನಗರದ ಒಳಗೆ ಸಂಚರಿಸುವುದು ಕೂಡ ಆರಾಮದಾಯಕವಾಗಿದೆ. ಕಾರು, ಬಸ್‌ಗಳು ಸಾಕಷ್ಟು ಇವೆ. ಒಂದು ದಿನದ ಬಾಡಿಗೆ ರೂಪದಲ್ಲಿ ನಗರ ಸುತ್ತಲು ಕಾರುಗಳು ಕೂಡ ಇಲ್ಲಿ ಸಿಗುತ್ತವೆ. ಸಾಮಾನ್ಯ ದರದಲ್ಲಿ ಇವು ಸಿಗುವುದು ವಿಶೇಷ.

ಡಿಸೆಂಬರ್‌ನಿಂದ ಫೆಬ್ರವರಿ ನಡುವಿನ ಅವಧಿ ತಿರುಪತಿ ಭೇಟಿಗೆ ವರ್ಷದಲ್ಲೇ ಉತ್ತಮ ಕಾಲ. ಆದರೆ, ತಿಮ್ಮಪ್ಪನ ಹರಕೆ ತೀರಿಸಲು ವರ್ಷವಿಡಿ ಭಕ್ತಾದಿಗಳು ತಿರುಪತಿ ಪ್ರವಾಸ ಕೈಗೊಳ್ಳುವುದು ಮಾಮೂಲಿ. ಹೆಚ್ಚಿನ ಮಾಹಿತಿಯನ್ನು ನೇಟಿವ್ ಪ್ಲಾನೇಟ್ ನಲ್ಲಿ ಓದಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+