ಅವಮಾನಿತ ರಘುಪತಿ ಭಟ್ ಚುನಾವಣೆಯಿಂದ ಔಟ್

ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಚುನಾವಣೆಯ ಈ ಸಂದರ್ಭದಲ್ಲಿ ನನ್ನಿಂದ ಪಕ್ಷಕ್ಕೆ ಮುಜುಗರ ಅಥವಾ ಹಿನ್ನಡೆಯಾಗುವುದು ಬೇಡ ಎನ್ನುವ ಉದ್ದೇಶದಿಂದ ಕಣದಿಂದ ಹಿಂದಕ್ಕೆ ಸರಿಯುತ್ತಿದ್ದೇನೆ ಎಂದು ರಘುಪತಿ ಭಟ್ ಹೇಳಿದ್ದಾರೆ.
ರಾಜಧಾನಿ ಬೆಂಗಳೂರಿನ ಮಾಧ್ಯಮ ಕಚೇರಿಗೆ ಬ್ಲೂಫಿಲಂ ಅನ್ನು ಅನಾಮಧೇಯ ವ್ಯಕ್ತಿಗಳು ತಲುಪಿಸಿದ್ದಾರೆ. ನೇರವಾಗಿ ಬಿಜೆಪಿಯನ್ನು ಕ್ಷೇತ್ರದಲ್ಲಿ ಎದುರಿಸಲಾಗದ ರಣಹೇಡಿಗಳ ಕೃತ್ಯವಿದು.
ನನ್ನ ತೇಜೋವಧೆಗೆ ಮಾಡಿದ ವ್ಯವಸ್ಥಿತಿತ ಷಡ್ಯಂತ್ರವಿದು. ಕ್ಷೇತ್ರದ ಮತ್ತು ರಾಜ್ಯದ ಜನತೆಗೆ ನಾನು ಹೇಳುವುದಿಷ್ಟೇ ಆ ಸಿಡಿಯಲ್ಲಿರುವ ವ್ಯಕ್ತಿ ನಾನವನಲ್ಲ..ನಾನವನಲ್ಲ..ನಾನವನಲ್ಲ..
ಬುಧವಾರ (ಮಾ 28) ರಾತ್ರಿ ನಾನು ಈ ಸಿಡಿಯನ್ನು ನೋಡಿದೆ. ಇದನ್ನು ನೋಡಿ ನನಗೆ ದಿಗ್ಭ್ರಮೆಯಾಗಿದೆ. ಸಿಡಿಗೆ ಸಂಬಂಧಪಟ್ಟ ತನಿಖೆ ಮುಗಿಯುವವರೆಗೆ ನಾನು ರಾಜಕೀಯದಲ್ಲಿರುವುದಿಲ್ಲ ಎಂದು ರಘುಪತಿ ಭಟ್ ಹೇಳಿದ್ದಾರೆ.
ಈ ಸಿಡಿ ಬಹಿರಂಗವಾಗುವ ಮುನ್ನವೇ ಖಚಿತ ಮೂಲಗಳಿಂದ ನಮಗೆ ಸಿಕ್ಕ ಮಾಹಿತಿ ಪ್ರಕಾರ ರಘುಪತಿ ಭಟ್ ಅವರಿಗೆ ಈ ಬಾರಿ ಟಿಕೆಟ್ ನೀಡದೇ ಇರಲು ಪಕ್ಷ ನಿರ್ಧರಿಸಿತ್ತು ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಟಿಕೆಟ್ ಸಿಗಲಿದೆ ಎನ್ನುವ ಸುದ್ದಿ ಚಾಲ್ತಿಯಲ್ಲಿದೆ.












Click it and Unblock the Notifications