ಉಡುಪಿ:ಬಿಜೆಪಿ, ಕಾಂಗ್ರೆಸ್ ಟಿಕೆಟಿಗೆ ಎಲ್ಲಿಲ್ಲದ ಡಿಮಾಂಡ್

ಉಡುಪಿ, ಮಾ 18: ಸ್ಥಳೀಯ ಸಂಸ್ಥೆ ಚುನಾವಣೆಗೆ ಮುನ್ನವೇ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕಮಲ ದಳದಳವಾಗಿ ಉದುರಿ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿರುವುದಕ್ಕೆ ಕಾರಣ ಹಲವಾರು.

ಅದರಲ್ಲಿ ಪ್ರಮುಖ ಕಾರಣಗಳೆಂದರೆ ರಾಜ್ಯ ಮಟ್ಟದಲ್ಲಿ ಕಳೆಗುಂದಿದ ಪಕ್ಷದ ವರ್ಚಸ್ಸು, ಉಡುಪಿ ನಗರಸಭೆಯಲ್ಲಿನ ವ್ಯಾಪಕ ಭ್ರಷ್ಟಾಚಾರ, ಪತ್ನಿ ಸಾವಿನ ನಂತರದ ಶಾಸಕ ರಘುಪತಿ ಭಟ್ರ ಇಮೇಜು.

ಕರಾವಳಿ ಜಿಲ್ಲೆಯಲ್ಲಿ ಬಿಜೆಪಿ ವತಿಯಿಂದ ಟಿಕೆಟ್ ಯಾರಿಗೆ ಕೊಡಬೇಕು ಎನ್ನುವುದನ್ನು ನಿರ್ಧರಿಸುವುದು ಪಕ್ಷಕ್ಕಿಂತ ಹೆಚ್ಚಾಗಿ ಸಂಘ ಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅನ್ನೋ ವಿಚಾರ ಈ ಭಾಗದ ಜನರಿಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ.

ಉಡುಪಿ ಅಷ್ಠ ಮಠಾಧೀಶರಿಗೆ ಸಿಗುವ ಎಲ್ಲಾ ಗೌರವಗಳು ಕಲ್ಲಡ್ಕ ಭಟ್ರಿಗೂ ಬಿಜೆಪಿ ಮುಖಂಡರು ನೀಡುತ್ತಿದ್ದಾರೆ, ನೀಡಲೇ ಬೇಕಾದ ಅನಿವಾರ್ಯತೆ ಕೂಡಾ ಬಿಜೆಪಿ ಮುಖಂಡರಿಗಿದೆ.

ಕಲ್ಲಡ್ಕ ಪ್ರಭಾಕರ್ ಭಟ್ರು ರಘುಪತಿ ಭಟ್ರಿಗೆ ನೀಡಿದ ಸಂದೇಶವೇನು? ಕಾಂಗ್ರೆಸ್ ಸ್ಥಳೀಯ ಸಂಸ್ಥೆಗೆ ಆಖಾಡಕ್ಕೆ ಇಳಿದಿದ್ದು ಹೇಗೆ? ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿಗಳು ಯಾರು? ಸ್ಲೈಡಿನಲ್ಲಿ ನೋಡಿ?

ಕಲ್ಲಡ್ಕ ಪ್ರಭಾಕರ ಭಟ್ ಸಂದೇಶ

ಕಲ್ಲಡ್ಕ ಪ್ರಭಾಕರ ಭಟ್ ಸಂದೇಶ

ಮೂಲಗಳ ಪ್ರಕಾರ ಹಾಲಿ ಶಾಸಕ ರಘುಪತಿ ಭಟ್ ಅವರನ್ನು ಕಲ್ಲಡ್ಕ ಭಟ್ರು ಪುತ್ತೂರಿಗೆ ಕರೆಸಿಕೊಂಡು ನಿಮಗೆ ಈ ಬಾರಿ ಉಡುಪಿಯಲ್ಲಿ ಟಿಕೆಟ್ ಸಿಗುವುದಿಲ್ಲ, ಬೇರೆ ಯಾವುದಾದರೂ ಕ್ಷೇತ್ರಗಳನ್ನು ನೋಡಿಕೊಳ್ಳಿ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ ಎನ್ನುವು ಸುದ್ದಿ ಸಿಕ್ಕಾಪಟ್ಟೆ ಚಾಲ್ತಿಯಲ್ಲಿದೆ.

ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು ಕಾಂಗ್ರೆಸ್

ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು ಕಾಂಗ್ರೆಸ್

ಇನ್ನು ಉಡುಪಿಯಲ್ಲಿ ಕಾಂಗ್ರೆಸ್ ಕಥೆಯೇ ಬೇರೆ. ಶತಾಯುಗತಾಯು ಬಿಜೆಪಿಗೆ ಈ ಬಾರಿ ಮಣ್ಣು ಮುಕ್ಕಿಸಲೇ ಬೇಕೆಂದು ಜಿದ್ದಿಗೆ ಬಿದ್ದ ಉಡುಪಿ ಜಿಲ್ಲಾ ಕಾಂಗ್ರೆಸ್ ಸ್ಥಳೀಯ ಸಂಸ್ಥೆಯ ಚುನಾವಣೆ ಮೂಲಕ ಬಿಜೆಪಿಗೆ ಎಚ್ಚರಿಕೆ ಗಂಟೆ ಭಾರಿಸಿದೆ. ಮನೆ ಮನೆಗೂ ತೆರಳಿ ಬಿಜೆಪಿಯ ಭ್ರಷ್ಟಾಚಾರ, ಆಂತರಿಕ ಕಲಹವನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದೆ.

ಕಾಂಗ್ರೆಸ್ ಮತ್ತು ನೋಟು

ಕಾಂಗ್ರೆಸ್ ಮತ್ತು ನೋಟು

ಅಂತೆ, ಕಂತೆಗಳ ನಡುವೆ ನಂಬಲರ್ಹ ಮೂಲಗಳಿಂದ ತಿಳಿದು ಬಂದ ಪ್ರಕಾರ ಕೆಲವೊಂದು ವಾರ್ಡ್ ಗಳಲ್ಲಿ ಒಂದು ಮತಕ್ಕೆ ಐದು ಸಾವಿರದಂತೆ ಕಾಂಗ್ರೆಸ್ ಹಣ ಚೆಲ್ಲಿದೆ ಎನ್ನುವ ಸುದ್ದಿಯಿದೆ. ಕೋಟಿ ಕೋಟಿ ಹಣವನ್ನು ಸ್ಥಳೀಯ ಯುವ ಕಾಂಗ್ರೆಸ್ ಮುಖಂಡ 'ಮುಂದಿನ ಭವಿಷ್ಯ' ಗಮನದಲ್ಲಿ ಇಟ್ಟುಕೊಂಡು ಖರ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ.

ಉಡುಪಿ ಬಿಜೆಪಿ ಟಿಕೆಟ್ ಯಾರಿಗೆ?

ಉಡುಪಿ ಬಿಜೆಪಿ ಟಿಕೆಟ್ ಯಾರಿಗೆ?

ಈ ಬಾರಿ ಬಿಜೆಪಿ ಬಿ ಫಾರಂ ಕಲ್ಲಡ್ಕ ಭಟ್ರ ಕೃಪಾಕಟಾಕ್ಷದಿಂದ ಉಡುಪಿ ಹೊರವಲಯದ ನಿವಾಸಿ ದೇವರ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಒಲಿಯಲಿದೆ ಎನ್ನುವ ಸುದ್ದಿಯಿದೆ. ಜನರೊಂದಿಗೆ ಬೆರೆಯುವ, ಕ್ಲೀನ್ ಇಮೇಜ್ ಹೊಂದಿರುವ ಪೂಜಾರಿಗೆ ಈ ಬಾರಿ ಉಡುಪಿ ಬಿಜೆಪಿ ಟಿಕೆಟ್ ಕನ್ಫರ್ಮ್ ಎನ್ನಲಾಗುತ್ತಿದೆ.

ಉಡುಪಿ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ - 1

ಉಡುಪಿ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ - 1

ಸ್ಥಳೀಯ ಸಂಸ್ಥೆ ಚುನಾವಣೆಗೆ ಕೋಟಿ ಕೋಟಿ ಖರ್ಚು ಮಾಡಿದ್ದು ಪ್ರಮೋದ್ ಮಧ್ವರಾಜ್. ಇವರು ಮಾಜಿ ಉಡುಪಿ ಸಂಸದೆ ಮನೋರಮಾ ಮಧ್ವರಾಜ್ ಅವರ ಪುತ್ರ. ಮೊಗವೀರ ಪಂಗಡಕ್ಕೆ ಸೇರಿರುವ ಇವರು ಕಾಂಗ್ರೆಸ್ ಟಿಕೆಟಿಗೆ ಹರಸಾಹಸ ಪಡುತ್ತಿದ್ದಾರೆ. ಮಲ್ಪೆ ವಡಭಾಂಡೇಶ್ವರನ ದಯೆಯಿಂದ ಟಿಕೆಟ್ ಸಿಕ್ಕರೂ ಸಿಗಬಹುದು.

ಉಡುಪಿ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ - 2

ಉಡುಪಿ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ - 2

ಜೆಡಿಎಸ್, ಕಾಂಗ್ರೆಸ್ ದೋಣಿಯ ನಡುವೆ ರಾಜಕೀಯ ಭವಿಷ್ಯದ ಹುಡುಕಾಟದಲ್ಲಿರುವ ಮತ್ತೊಬ್ಬ ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಯು ಆರ್ ಸಭಾಪತಿ. ಕಳೆದ ಬಾರಿ ಜೆಡಿಎಸ್ ಟಿಕೆಟಿನಿಂದ ನಿಂತು ಸೋತಿದ್ದ ಸಭಾಪತಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಸಿಕ್ಕರೆ ಆಶ್ಚರ್ಯ ಪಡಬೇಕಾಗಿಲ್ಲ. ಯಾಕೆಂದರೆ ದೂರದ ದೆಹಲಿಯಲ್ಲಿರುವ ಸೋನಿಯಾ ಮೇಡಂ ಅವರಿಗೆ ಪರಮಾಪ್ತರಾಗಿರುವ ಆಸ್ಕರ್ ಫೆರ್ನಾಂಡಿಸ್ ಅವರ 'ಅಭಯ ಹಸ್ತ' ಸಭಾಪತಿ ಮೇಲಿದೆ ಎನ್ನುವುದೇ ಇಂಟರೆಸ್ಟಿಂಗ್ ಪಾಯಿಂಟ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+