ಬೆಳಗಾವಿ : ಸಿಲಿಂಡರ್ ಸ್ಪೋಟ ಎರಡು ಸಾವು

ಗುರುವಾರ ಬೆಳಗ್ಗೆ ಸುಮಾರು 8 ಗಂಟೆಯ ಸುಮಾರಿಗೆ ಸ್ಪೋಟ ಸಂಭವಿಸಿದೆ. ಮೃತರನ್ನು ತೃಪ್ತಿ (8) ಹಾಗೂ ಪದ್ಮಾವತಿ (45) ಎಂದು ಗುರುತಿಸಲಾಗಿದೆ. ಮೂರು ಅಂತಸ್ತಿನ ಮನೆಯ ನೆಲಮಹಡಿಯಲ್ಲಿ ಸಿಲಿಂಡರ್ ಸ್ಪೋಟಿಸಿದೆ, ಸ್ಪೋಟದ ತೀವ್ರತೆಗೆ ಕಟ್ಟಡ ಕುಸಿದು ಬಿದ್ದಿದೆ.
ಕಟ್ಟಡದ ಅವಶೇಷಗಳ ಅಡಿ ಕೆಲವರು ಸಿಲುಕಿಕೊಂಡಿರುವ ಶಂಕೆಯಿದ್ದು, ಸ್ಥಳಕ್ಕಾಮಿಸಿದ ಅಗ್ನಿ ಶಾಮಕ ದಳದ ಅಧಿಕಾರಿಗಳು ಅವಶೇಷಗಳನ್ನು ತೆರವುಗೊಳಿಸಿ ಸಿಲುಕಿದವರನ್ನು ರಕ್ಷಿಸುತ್ತಿದ್ದಾರೆ. ಏಳು ಮಂದಿಯನ್ನು ಕಟ್ಟಡದ ಅವಶೇಷದಿಂದ ರಕ್ಷಿಸಲಾಗಿದ್ದು, ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೂರು ಮಹಡಿಗಳ ಈ ಮನೆಯಲ್ಲಿ ನೆಲಮಹಡಿಯಲ್ಲಿ ಕಟ್ಟಡದ ಮಾಲೀಕರು ವಾಸಿಸುತ್ತಿದ್ದು, ಉಳಿದ ಮನೆಗಳನ್ನು ಬಾಡಿಗೆಗೆ ನೀಡಿದ್ದರು. ನೆಲ ಅಂತಸ್ತಿನಲ್ಲಿ ಗುರುವಾರ ಬೆಳಗ್ಗೆ 7.30ರ ಸುಮಾರಿನಲ್ಲಿ ಬೆಳಗ್ಗೆ ಟೀ ಮಾಡಲಾಗಿದೆ. ನಂತರ 7.45ರ ವೇಳೆಗೆ ಸಿಲೆಂಡರ್ ಸ್ಪೋಟಗೊಂಡಿದೆ. ಇದರಿಂದಾಗಿ ಮನೆಯು ಕುಸಿದು ಬಿದ್ದಿದೆ.
ನೆಲಮಹಡಿಯಲ್ಲಿದ್ದವರು ಕಿಟಕಿ ಗಾಜುಗಳನ್ನು ಒಡೆದು ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವಶೇಷಗಳ ಅಡಿ ಸಿಲುಕಿದ್ದ ಇಬ್ಬರು ಮೃತಪಟ್ಟಿದ್ದಾರೆ. ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಪಾಟೀಲ್ ಮತ್ತು ಇತರ ಅಧಿಕಾರಿಗಳು ಆಗಮಿಸಿ ಪರಿಹಾರ ಕಾರ್ಯದ ಉಸ್ತುವಾರಿ ಕೈಗೊಂಡಿದ್ದರು.
ನೀವೇ ಆಗರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications