ಸಿಂಧ್ಯಾ ಕೈಗೆ ಸಿಕ್ಕಿಬಿದ್ದ ಡಿಕೆ ಶಿವಕುಮಾರ್ ಕಳ್ಳಮಾಲು

ಕನಕಪುರ, ಮಾ.27: ಚುನಾವಣೆ ಅಕ್ರಮಗಳ ಮೂಲ ಶುರುವಾಗುವುದೇ ಮತದಾರನಿಗೆ ಆಮಿಷವೊಡ್ಡುವ ಮೂಲಕ. ಪ್ರಜಾಪ್ರಭುತ್ವದ ಮಹಾಪ್ರಭು ಎನಿಸಿಕೊಂಡ ಈ ಮತದಾರನನ್ನು ಆ ಪಕ್ಷ ಈ ಪಕ್ಷ ಎನ್ನದೆ ಎಲ್ಲರೂ ಆಮಿಷವೊಡ್ಡುವ ಮೂಲಕ ತಮ್ಮ ಕಬ್ಜಾಗೆ ತೆಗೆದುಕೊಳ್ಳಲು ಹೊಂಚುಹಾಕುತ್ತಾರೆ.

ಆದರೆ ಇಂತಹ ಆಮಿಷಗಳನ್ನು ವಿರೋಧಿ ಪಕ್ಷಗಳು ಕಾಲಕಾಲಕ್ಕೆ ಜಗತ್ತಿಗೆ ಪರಿಚಯಿಸುವ ಕಾರ್ಯದಲ್ಲಿ ತೊಡಗುತ್ತವೆ. ಈ ನಿಟ್ಟಿನಲ್ಲಿ, ಕನಕಪುರದಲ್ಲಿ ನಡೆದ ಚುನಾವಣೆ ಅಕ್ರಮವನ್ನು ಜೆಡಿಎಸ್ ಪಕ್ಷ ಪ್ರಪಂಚಕ್ಕೆ ಎತ್ತಿ ತೋರಿಸಿದೆ.

ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರು ಮತದಾರರಿಒಗೆ ಹಂಚಲು ಶೇಖರಿಸಿಟ್ಟಿದ್ದ ಅಕ್ರಮ ಮಾಲುಗಳನ್ನು ಜೆಡಿಎಸ್ ಪಕ್ಷದ ಹಿರಿಯ ನಾಯಕ ಪಿಜಿಆರ್ ಸಿಂಧ್ಯಾ ಅವರು ಹಿಡಿದುಹಾಕಿದ್ದಾರೆ.

ಮುಖ್ಯ ಚುನಾವಣಾ ಅಧಿಕಾರಿಗೆ ಈ ಕುರಿತು ಜೆಡಿಎಸ್ ದೂರು ಸಲ್ಲಿಸಿದ್ದು, ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಶಿವಕುಮಾರ್‌ ಅವರಿಗೆ ನೋಟಿಸ್‌ ನೀಡಬೇಕು ಮತ್ತು ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ ಎಂದು ಸಿಂಧ್ಯಾ ಹೇಳಿದರು.

ಕಾಂಗ್ರೆಸ್ಸಿನ ಡಿಕೆ ಶಿವಕುಮಾರ್ ಚುನಾವಣಾ ಅಕ್ರಮಗಳಲ್ಲಿ ತಲ್ಲೀನರಾಗಿದ್ದಾರೆ ಎಂಬುದನ್ನು ನಿರೂಪಿಸಲು ಜೆಡಿಎಸ್ ರಹಸ್ಯ ಕಾರ್ಯಾಚರಣೆ ನಡೆಸಿದ್ದು, ಶಿವಕುಮಾರ್ ಅವರ (ಅಕ್ರಮ) ಮಾಲುಗಳನ್ನು ವಶಪಡಿಸಿಕೊಂಡು ಇಡೀ ಜಗತ್ತಿಗೆ ತೋರಿಸಿದೆ. ಬನ್ನಿ ಆ ಅಕ್ರ, ವಸ್ತುಗಳತ್ತ ಒಂದು ನೋಟ ಬೀರೋಣ.

ಚುನಾವಣಾ ಅಕ್ರಮದ ಒಂದು ಝಲಕ್:

ಚುನಾವಣಾ ಅಕ್ರಮದ ಒಂದು ಝಲಕ್:

ಕಾಂಗ್ರೆಸ್ಸಿನ ಡಿಕೆ ಶಿವಕುಮಾರ್ ಮತದಾರರನ್ನು ಪ್ರಲೋಭೆಗೊಡ್ಡುವ ಸಲುವಾಗಿ ಸಿದ್ಧಪಡಿಸಿಟ್ಟುಕೊಂಡಿದ್ದ ವಸ್ತುಗಳು.
ಕನಕಪುರದಲ್ಲಿ ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್ ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘಿಸಿ, ಮತದಾರರಿಗೆ ಸೀರೆ, ವಾಚು ಹಂಚಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಜೆಡಿಎಸ್‌ ದೂರು ಸಲ್ಲಿಸಿದೆ.

 ಕಾಂಗ್ರೆಸ್ ಅಕ್ರಮ ಮಾಲು

ಕಾಂಗ್ರೆಸ್ ಅಕ್ರಮ ಮಾಲು

ಜೆಡಿಎಸ್ ಪಕ್ಷದ ಕಾರ್ಯಕಾರಿ ಅಧ್ಯಕ್ಷ ಪಿಜಿಆರ್ ಸಿಂಧ್ಯಾ ಅವರು ಕಾಂಗ್ರೆಸ್ಸಿನ ಡಿಕೆ ಶಿವಕುಮಾರ್ ಅವರ ಹೆಸರು ಹೊತ್ತ ಅಕ್ರಮ ಮಾಲುಗಳನ್ನು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು.
ಅಲ್ಲದೆ, ಅಧಿಕಾರಿಗಳೊಂದಿಗೆ ಸೇರಿಕೊಂಡು ಮತದಾರರ ಪಟ್ಟಿಯಲ್ಲಿಯೂ ತಿದ್ದುಪಡಿ ಮಾಡುತ್ತಿದ್ದಾರೆ ಎಂದು ಸಿಂಧ್ಯಾ ಆರೋಪಿಸಿದ್ದಾರೆ.

ಕಾಂಗೈ ಅಕ್ರಮ ವಿರುದ್ಧ ಜೆಡಿಎಸ್ ಕಾರ್ಯಾಚರಣೆ:

ಕಾಂಗೈ ಅಕ್ರಮ ವಿರುದ್ಧ ಜೆಡಿಎಸ್ ಕಾರ್ಯಾಚರಣೆ:

ಜೆಡಿಎಸ್ ಪಕ್ಷದ ಕಾರ್ಯಕಾರಿ ಅಧ್ಯಕ್ಷ ಪಿಜಿಆರ್ ಸಿಂಧ್ಯಾ ಮತ್ತು ಪಕ್ಷದ ಮತ್ತೊಬ್ಬ ನಾಯಕ ವಿಶ್ವನಾಥ್ ಅವರು ಕಾಂಗ್ರೆಸ್ಸಿನ ಡಿಕೆ ಶಿವಕುಮಾರ್ ಅವರ ಹೆಸರು ಹೊತ್ತ ಅಕ್ರಮ ಮಾಲುಗಳನ್ನು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು.

ಮಾಧ್ಯಮದೆದುರು ಡಿಕೆಶಿ ಅಕ್ರಮಗಳ ಹರಾಜು

ಮಾಧ್ಯಮದೆದುರು ಡಿಕೆಶಿ ಅಕ್ರಮಗಳ ಹರಾಜು

ಕಾಂಗ್ರೆಸ್ಸಿನ ಡಿಕೆ ಶಿವಕುಮಾರ್ ಅವರು ಕನಕಪುರದಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಅಕ್ರಮ ಮಾಲುಗಳನ್ನು ಜೆಡಿಎಸ್ ಪಕ್ಷದ ಕಾರ್ಯಕಾರಿ ಅಧ್ಯಕ್ಷ ಪಿಜಿಆರ್ ಸಿಂಧ್ಯಾ ಮತ್ತು ಪಕ್ಷದ ಮತ್ತೊಬ್ಬ ನಾಯಕ ವಿಶ್ವನಾಥ್ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು.

ಕನಕಪುರದಲ್ಲಿ ಕಾಂಗ್ರೆಸ್ಸಿನ ಅಕ್ರಮಗಳು

ಕನಕಪುರದಲ್ಲಿ ಕಾಂಗ್ರೆಸ್ಸಿನ ಅಕ್ರಮಗಳು

ಕಾಂಗ್ರೆಸ್ಸಿನ ಡಿಕೆ ಶಿವಕುಮಾರ್ ಅವರು ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಸೀರೆಗಳು, ಟಿ ಷರ್ಟುಗಳು, ಕೈಗಡಿಯಾರಗಳು, ನೀರಿನ ಟ್ಯಾಂಕುಗಳು ಇವೇ ಮುಂತಾದ ವಸ್ತುಗಳನ್ನು ಮಾಧ್ಯಮದೆದುರು ಪ್ರದರ್ಶನಕ್ಕಿಟ್ಟ ಪಿಜಿಆರ್ ಸಿಂಧ್ಯಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+