ಅಮೆರಿಕ ಹಸುಗಳ ಮೂಲ ಭಾರತದ ಕಾಮಧೇನು!
ನವದೆಹಲಿ, ಮಾ.27: ಭಾರತದ ಪೂಜನೀಯ ಗೋಮಾತೆಯು ಅಮೆರಿಕದ ಹಸುವಿಗೆ ಮೂಲ ಎಂದು ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಈ ಸಂಬಂಧ ವಂಶವಾಹಿ ಅಧ್ಯಯನ ಕೈಗೊಂಡಿರುವ ಅಮೆರಿಕದ ವಿಜ್ಞಾನಿಗಳು ಟೆಕ್ಸಾಸ್ ಲಾಂಗ್ ಹಾರ್ನ್ ನಂತಹ ಅತ್ಯುತ್ಕೃಷ್ಟ ತಳಿಯ ಮೂಲವೂ ಭಾರತದ್ದೇ ಆಗಿದೆ ಎಂಬ ಕುತೂಹಲಕಾರಿ ಸಂಗತಿ ತಿಳಿದುಬಂದಿದೆ.
ಭಾರತದ ಹಸುಗಳು ಪೂರ್ವ ಆಫ್ರಿಕಾಕ್ಕೆ ವಲಸೆ ಹೋದವು. ಅಲ್ಲಿ ಸ್ಥಳೀಯ ತಳಿ ಜತೆ ಸಮ್ಮಿಲವಾದವು. ಅದು ಉತ್ತರ ಆಫ್ರಿಕಾದ ಕರಾವಳಿವರೆಗೂ ಈ ವಿದ್ಯಮಾನ ಹಬ್ಬಿತ್ತು. ಅಲ್ಲಿಂದ ಮುಂದಕ್ಕೆ ಸ್ಪೇನ್ ತಳಿ ಜತೆಗೂ ಸಮ್ಮಿಲನ ಮಾಡಿಲಾಸಲಾಯಿತು.

1493ರಲ್ಲಿ ಕ್ರಿಸ್ಟಾಫರ್ ಕೊಲಂಬಸ್ ಎರಡನೆಯ ವಿಶ್ವಪರ್ಯಟನೆಯಲ್ಲಿದ್ದಾಗ ಈ ತಳಿಗಳನ್ನು ಕೆರೇಬಿಯನ್ ದ್ವೀಪಗಳಿಗೆ ಕೊಂಡೊಯ್ದ. ಅಲ್ಲಿಂದ ಮುಂದಕ್ಕೆ ಮೆಕ್ಸಿಕೋ ಮತ್ತು ಟೆಕ್ಸಾಸ್ ವರೆಗೂ ಆ ಭಾರತೀಯ ಮೂಲದ ಹಸುಗಳನ್ನು ಕರೆದುಕೊಂಡು ಹೋಗಲಾಯಿತು. 1860ರಲ್ಲಿ ಈ ವಿದ್ಯಮಾನಗಳು ಹೆಚ್ಚಾಗಿ ನಡೆದವು.
Texas (Austin) ಮತ್ತು Missouri (Columbia) ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಕೈಗೊಂಡಿದ್ದ ಈ ಸಂಶೋಧನಾ ವರದಿಯು ಇತ್ತೀಚೆಗೆ ವೈಜ್ಞಾನಿಕ ನಿಯಕತಕಾಲಿಕದಲ್ಲಿ ಪ್ರಕಟಗೊಂಡಿದೆ.
ಭಾರತ ಮತ್ತು ಟರ್ಕಿಯಲ್ಲಿ 10,000 ವರ್ಷಗಳಿಂದ ಹಸುಗಳನ್ನು ಮನುಷ್ಯ ಸಾಕುತ್ತಿದ್ದ ಎಂಬುದು ಗಮನಾರ್ಹ. ಇಂದಿಗೂ ಗರಿಷ್ಠ ಹಸುಗಳು (300 ದಶಲಕ್ಷ) ಭಾರತದಲ್ಲೇ ಇವೆ. ನಂತರದ ಸ್ಥಾನಗಳು ಬ್ರೆಜಿಲ್, ಚೀನಾ ಮತ್ತು ಅಮೆರಿಕದ್ದಾಗಿದೆ.
ಆದರೆ ಆಧುನಿಕತೆಯ ಭರಾಟೆಗೆ ಸಿಲುಕಿದ ಭಾರತದ ರೈತರು ಅಮೆರಿಕದ ಹೈಬ್ರೀಡ್ ತಳಿಗೇ ಶರಣಾಗುತ್ತಿರುವುದು ಪರಿಸ್ಥಿತಿಯ ವ್ಯಂಗ್ಯವೇ ಸರಿ.












Click it and Unblock the Notifications