ಎಂಥಾ ಕಾಂಡೋಮ್ ಬೇಕು ಐಡಿಯಾ ಕೊಡಿ: ಬಿಲ್ ಗೇಟ್ಸ್
ಹೋಸ್ಟನ್, ಮಾ.26: ಗೇಟ್ಸ್ ಆರ್ ಓಪನ್ಡ್... ಇಂದಿನ ಏಡ್ಸ್ ಯುಗದಲ್ಲಿ ಕಾಂಡೋಮ್ ಬಳಕೆ ಅತ್ಯಗತ್ಯ/ ಅನಿವಾರ್ಯ. ಆದರೆ ಎಂಥಾ ಕಾಂಡೋಮ್ ಬಳಸಬೇಕು, ಅದರ ಸ್ವರೂಪ ಹೇಗಿರಬೇಕು ಎಂಬುದನ್ನು ಹೇಳಿ. ಉತ್ತರ ಇಡೀ ಹಗತ್ತಿಗೆ ಸಮ್ಮತವಾಗುವಂತಿದ್ದರೆ ನಿಮಗೆ ಕೋಟ್ಯಂತರ ರೂಪಾಯಿ ಬಹುಮಾನ ರೂಪವಾಗಿ ಕೊಡಲಾಗುವುದು ಎಂದು ಬಿಲ್ ಗೇಟ್ಸ್ ಘೋಷಿಸಿದ್ದಾರೆ.
ಶ್ರೀಮಂತರ ಶ್ರೀಮಂತ, ಮಾಹಿತಿ ತಂತ್ರಜ್ಞಾನದ ಐಕಾನ್ ಬಿಲ್ ಗೇಟ್ಸ್ ಅವರ ಸಾಮಾಜಿಕ ಕಳಕಳಿ ಇಡೀ ಜಗತ್ತಿಗೇ ಗೊತ್ತು. ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ದಾನ ಧರ್ಮಗಳಲ್ಲಿ ತೊಡಗಿರುವ ಬಿಲ್ ಗೇಟ್ಸ್ ಆರೋಗ್ಯ ಸುಧಾರಣೆಗೆ ಒತ್ತು ಕೊಟ್ಟಿರುವುದು ಗಮನಾರ್ಹ.
54.33 ಲಕ್ಷ ರೂ. ಮೂಲ ನೆರವು: ಮುಂದಿನ ತಲೆಮಾರಿನ ಕಾಂಡೋಮ್ ಹೇಗಿರಬೇಕು ಎನ್ನುವ ಕುರಿತು ನಿಮ್ಮಲ್ಲೇನಾದರೂ ಐಡಿಯಾ ಇದೆಯಾ? ಅಂತ ಬಿಲ್ ಗೇಟ್ಸ್ ಅವರ Bill & Melinda Gates Foundation ಆಕರ್ಷಕ ಪ್ರಸ್ತಾವನೆಯನ್ನು ನಿಮ್ಮ ಮುಂದಿಟ್ಟಿದೆ.

ಒಂದು ವೇಳೆ ಇದ್ದರೆ grandchallenges.org ಗೆ ತಿಳಿಸಿ. ಒಂದು ವೇಳೆ ನಿಮ್ಮ ಐಡಿಯಾ ಫೌಂಡೇಷನ್‌ಗೆ ಇಷ್ಟವಾದರೆ ಈ ರೀತಿಯ ಕಾಂಡೋಮ್ ಉತ್ಪಾದನೆಗೆ ಆರಂಭಿಕವಾಗಿ 54.33 ಲಕ್ಷ ರೂ. (1 ದಶಲಕ್ಷ ಡಾಲರ್) ನೆರವು ನೀಡಲಿದೆ. ನಂತರ 543 ಲಕ್ಷ ರೂ ವರೆಗೆ ಅನುದಾನವನ್ನು ಫೌಂಡೇಷನ್ ನೀಡುತ್ತದೆ.
ಈವಾಗ ಇರೋದು ಏನಾಗಿದೆ?: ಯಾಕೆ ಈವಾಗ ಇರೋದು ಏನಾಗಿದೆ ಅಂತ ಕೇಳಿದರೆ ನಿರೀಕ್ಷಿತ ಪ್ರಮಾಣದಲ್ಲಿ ಇಂದ್ರಿಯ ಸುಖ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಪುರುಷರು ಕಾಂಡೋಮ್ ಬಳಕೆಗೆ ಹಿಂದೇಟು ಹಾಕುತ್ತಾರೆ. ಹಾಗಾಗಿ, ಹೊಸ ತಲೆಮಾರಿನ ಕಾಂಡೋಮ್ ಈ ಸಮಸ್ಯೆಗೆ ಕಡಿವಾಣ ಹಾಕಲು ಯಶಸ್ವಿಯಾಗಬಹುದು ಎನ್ನುತ್ತಿದೆ ಫೌಂಡೇಷನ್. ಒಂದು ವೇಳೆ ಇದೇನಾದರೂ ಯಶಸ್ವಿಯಾದರೆ ಜಗತ್ತಿನ ಕೋಟ್ಯಂತರ ಜನರ ಜೀವನಮಟ್ಟ ಸುಧಾರಣೆ ಕಾಣಲಿದೆ ಎಂಬುದು ಫೌಂಡೇಷನ್‌ನ ಕ್ರಿಸ್ ವಿಲ್ಸನ್ ಅವರ ಆಶಯ.
ಇದೇ ವೇಳೆ, ಕಡಿಮೆ ಬೆಲೆಯ ಮತ್ತು ಸರಳವಾಗಿ ಧರಿಸಬಹುದಾದ ಮಹಿಳಾ ಕಾಂಡೋಮ್ ಗಳು ಬೇಡದ ಗರ್ಭ ಹಾಗೂ ಲೈಂಗಿಕ ರೋಗಗಳಿಗೆ ಕಡಿವಾಣ ಹಾಕಬಹುದು ಎಂದೂ ಫೌಂಡೇಷನ್ ಅಭಿಪ್ರಾಯಪಟ್ಟಿದೆ.












Click it and Unblock the Notifications