ಯುದ್ಧಕ್ಕೆ ಮುಂಚೆಯೇ ಶಸ್ತ್ರತ್ಯಾಗ ಮಾಡಿದ ಶ್ರೀರಾಮುಲು

BSR Congress may merge with BJP- Sreeramulu meets Jagadish Shettar
ಬೆಂಗಳೂರು‌, ಮಾರ್ಚ್ 21: ಊರಿಗೆ ಮುಂಚೆ ಚುನಾವಣೇ ಅಂಗಡಿ ತೆರೆದುಕೊಂಡು ಸಕ್ರಿಯವಾಗಿದ್ದ ರೆಡ್ಡಿ ಬಂಟ ಶ್ರೀರಾಮುಲು ಅಧಿಪತ್ಯದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ಯುದ್ಧಕ್ಕೆ ಮುನ್ನವೇ ಶಸ್ತ್ರತ್ಯಾಗ ಮಾಡಿ, ಕಾಂಗ್ರೆಸ್ ಪಕ್ಷ ಹಚ್ಚಿದ ಬಳ್ಳಾರಿ ಉರಿ ಬಿಸಿಲಿನಲ್ಲಿ ದಣಿವಾರಿಸಿಕೊಳ್ಳುತ್ತಿದೆ. ಕೊನೆಗೆ ರಾಜಧಾನಿವರೆಗೂ ಬಂದು ಮುಖ್ಯಮಂತ್ರಿ ಶೆಟ್ಟರ ಅಂಗಡಿಗೆ ಲಗ್ಗೆ ಹಾಕಿದೆ. ಶೆಟ್ಟರ ನೇತೃತ್ವದ ಬಿಜೆಪಿಯೋ ನಾವಿಕನಿಲ್ಲದ ತೂತು ದೋಣಿಯಾಗಿದೆ.

ಚುನಾವಣೆ ಘೋಷಣೆಯಾದ ದಿನದಂದೇ ಇಂತಹ ಬೆಳವಣಿಗೆ ನಡೆದಿದ್ದು, ಇನ್ನೆರಡು ತಿಂಗಳಲ್ಲಿ ಇನ್ನೂ ಏನೆಲ್ಲ ಬೆಳವಣಿಗೆಗಳಿಗೆ ಸಾಕ್ಷಿಯಾಗಬೇಕೋ ಎಂಬ ಆತಂಕ ಮಾತ್ರ ನಾಡಿನ ಜನತೆಯದ್ದಾಗಿದೆ.

ಸದ್ಯಕ್ಕೆ ಬಳ್ಳಾರಿ ಗ್ರಾಮಾಂತರದ ಸ್ವತಂತ್ರ ಶಾಸಕರಾಗಿರುವ ಬಿಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕ ಬಿ ಶ್ರೀರಾಮುಲು ಅವರು ನಿನ್ನೆ ಎರಡು ಬಾರಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರನ್ನು ಭೇಟಿ ಮಾಡಿದ್ದು ರಾಜಕೀಯವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಬುಧವಾರ ಬೆಳಗ್ಗೆ ದೆಹಲಿಗೆ ತೆರಳುವ ಮೊದಲು ರಾಮುಲು ಶೆಟ್ಟರ್‌ ಅವರನ್ನು ಭೇಟಿ ಮಾಡಿದ್ದಾರೆ. ಮತ್ತೆ ಸಂಜೆ ವಾಪಸಾದ ನಂತರವೂ ಶೆಟ್ಟರ್‌ ಅವರನ್ನು ಕಂಡು ಸಮಾಲೋಚನೆ ನಡೆಸಿದ್ದಾರೆ. ಮಾತುಕತೆ ಯಾವ ದಿಕ್ಕಿನಲ್ಲಿ ಸಾಗಿತ್ತು ಎಂಬುದು ಬಹಿರಂಗವಾಗಿಲ್ಲ. ಆದರೆ ದೆಹಲಿಯಲ್ಲಿ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಮತ್ತೆ ರೆಡ್ಡಿ ಬ್ರದರ್ಸ್ ಗೆ ತಥಾಸ್ತು ಅಂದರಾ!?

ಆದರೆ ಇತ್ತೀಚಿಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಳ್ಳಾರಿಯಂತಹ ಬಳ್ಳಾರಿಯಲ್ಲೇ ಕಾಂಗ್ರೆಸ್ ಮತ್ತೆ ತನ್ನ ಅಧಿಪತ್ಯ ಸ್ಥಾಪಿಸುವ ಮೂಲಕ ಇನ್ನು ರೆಡ್ಡಿಗಳ ಆಟ/ಕಾಟ ನಡೆಯದು ಎಂಬ ಸ್ಪಷ್ಟ ಸಂದೇಶ ರವಾನೆಯಾಗಿತ್ತು. ಇದರಿಂದ ಕಂಗಾಲಾಗಿದ್ದು ರಾಮುಲುಗಿಂತ ಹೆಚ್ಚಾಗಿ ಜೈಲು ಆಫೀಸು. ಮತದಾರ ವಿಧಿಸಿದ ಈ ಶಿಕ್ಷೆ ಜನಾ ರೆಡ್ಡಿಗೆ ಸಿಬಿಐ ಶಿಕ್ಷೆಗಿಂತ ಘನಘೋರವಾಗಿ ಪರಿಣಮಿಸಿದೆ.

ಹಾಗಾಗಿ, ಮೊದಲು ಕೆಎಂಎಫ್ ಸೋಮಶೇಖರ ರೆಡ್ಡಿ ಮೂಲಕ ವರಾತ ತೆಗೆದ ಜನಾ ರೆಡ್ಡಿ, ಶತಮಾನದ ನಾಯಕ ಎಂದು ಬಿಂಬಿಸುತ್ತಿದ್ದ ಯುವಕನ ಕೈಯಲ್ಲಿ ಚುನಾವಣೆಗೆ ಹೋದರೆ ಬಳ್ಳಾರಿಯ ಗಣಿ ಪ್ರಪಾತಕ್ಕೆ ಬೀಳುವುದು ಗ್ಯಾರಂಟಿ ಎಂಬುದು ಮನದಟ್ಟು ಆಗುತ್ತಿದ್ದಂತೆ ಜನಾ ರೆಡ್ಡಿ ಅದೇ ರಾಮುಲು ಮೂಲಕ ಬಿಜೆಪಿ ಜತೆ ಸಂಧಾನ ಆಟ ಶುರುವಿಟ್ಟುಕೊಂಡಿದ್ದಾರೆ.

ಬಿಜೆಪಿಗೂ ಇದೇ ಬೇಕಾಗಿತ್ತು. ಹಾಗೆ ನೋಡಿದರೆ ಅವರೇ ಮೊದಲು ಚಂಚಲಗೂಡ ಜೈಲಿಗೆ ಎಂಟ್ರಿ ಕೊಟ್ಟು ರೆಡ್ಡಿ ಜತೆ ಸಂಧಾನಕ್ಕೆ ಮುಂದಾಗಿದ್ದು. ಸೋ, ಬಿಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ಜಂಟೀನಡೆ ಈಗ ಇಂಟರೆಸ್ಟಿಂಗ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+