ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಸ್ಕಾಂ ಎಂಡಿ ಮಣಿವಣ್ಣನ್ ಗೆ ನಮ್ಮ ಬೆಂಗಳೂರು ಪ್ರಶಸ್ತಿ

By Mahesh
|
Google Oneindia Kannada News

ಬೆಂಗಳೂರು, ಮಾ.20: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ನಾಗರಿಕರನ್ನು ಗೌರವಿಸುವ 'ನಮ್ಮ ಬೆಂಗಳೂರು ಪ್ರಶಸ್ತಿ-2012' ಸಮಾರಂಭ ವರ್ಣರಂಜಿತವಾಗಿ ಆಯೋಜನೆಗೊಂಡಿತ್ತು. 2012ರ ಸಾಲಿನ ವರ್ಷದ ಬೆಂಗಳೂರಿಗ ಪ್ರಶಸ್ತಿ ಬೆಸ್ಕಾಂ ಎಂಡಿ ಪಿ ಮಣಿವಣ್ಣನ್ ಅವರಿಗೆ ಸಂದಿದೆ.

ಹೆಡ್ ಕಾನ್ಸ್ ಟೇಬಲ್ ಮಹದೇವ್ ಸಂಬರಗಿ, ಜಯನಗರ ಕ್ಷೇತ್ರದ ಶಾಸಕ ಬಿ.ಎನ್ ವಿಜಯ್ ಕುಮಾರ್, ಜಾರ್ಜ್ ಕನ್ನಂತ್ ನಮ್ ಅವರು ಪ್ರಶಸ್ತಿಗಳಿಸಿದ ಪ್ರಮುಖರು. 2012ನೇ ಸಾಲಿನ ಪ್ರಶಸ್ತಿ ಆಯ್ಕೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಸುಮಾರು 61,000 ನಾಮಾಂಕಣ ಬಂದಿತ್ತು ಎಂದು ನಮ್ಮ ಬೆಂಗಳೂರು ಫೌಂಡೇಶನ್ ನ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

Bescom MD P Manivannan

8 ವಿಭಾಗಗಳಲ್ಲಿ ಅಂತಿಮವಾಗಿ 52 ಜನರನ್ನು ಆಯ್ಕೆ ಮಾಡಲಾಯಿತು. ಕಲೆ, ಸಂಸ್ಕೃತಿ, ಸಮಾಜ ಸೇವೆ, ಸಂಗೀತ, ಸಾಹಿತ್ಯ, ಕಾನೂನು, ಮಾಧ್ಯಮ, ಪರಿಸರ ಹೀಗೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗೌರವಿಸಲಾಯಿತು. ಮಲ್ಲೇಶ್ವರ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡದ ಹಿರಿಯ ಭಾಷಾ ವಿದ್ವಾಂಸ ಜಿ ವೆಂಕಟ ಸುಬ್ಬಯ್ಯ, ಪ್ರೊ ಜಿಎಸ್ ಸಿದ್ದಲಿಂಗಯ್ಯ ಅವರು ಪಾಲ್ಗೊಂಡಿದ್ದರು.

ಪ್ರಶಸ್ತಿ ವಿಜೇತರ ಪಟ್ಟಿ ಇಂತಿದೆ:
* ವರ್ಷದ ಬೆಂಗಳೂರಿಗ ಪ್ರಶಸ್ತಿ: ಪಿ ಮಣಿವಣ್ಣನ್, ಬೆಸ್ಕಾಂ ಎಂಡಿ
* ಉತ್ತಮ ನಾಗರಿಕ ಪ್ರಶಸ್ತಿ: ಫಾದರ್ ಜಾರ್ಜ್ ಕನ್ನಂತ್ನಮ್, ಫೌಂಡರ್ ಸುಮನಹಳ್ಳಿ ಸೊಸೈಟಿ
* ಉತ್ತಮ ಯುವ ನಾಗರಿಕ: ಕುಲದೀಪ್ ದಾಂಟೆವಾಡಿಯಾ
* ನಾಗರಿಕರ ಸಮೂಹ: ಪುಟ್ಟೇನಹಳ್ಳಿ ನಾಗರಿಕರ ಕೆರೆ ಅಭಿವೃದ್ಧಿ ಟ್ರಸ್ಟ್ (PNLIT)
* ಸರ್ಕಾರಿ ಅಧಿಕಾರಿ: ಬಿ.ಜಿ. ಚೆಂಗಪ್ಪ, ರಾಜ್ಯ ಅಗ್ನಿಶಾಮಕದಳ ಹಾಗೂ ತುರ್ತು ಸೇವೆ ನಿರ್ದೇಶಕ
* ಸರ್ಕಾರಿ ಉದ್ಯೋಗಿ: ಮಹದೇವ ರಾಜಪ್ಪ ಸಂಬರಗಿ, ಪೊಲೀಸ್ ಹೆಡ್ ಕಾನ್ಸ್ ಟೇಬಲ್
* ಸರ್ಕಾರಿ ಸಂಸ್ಥೆ: ಬೆಂಗಳೂರು ಟ್ರಾಫಿಕ್ ಪೊಲೀಸ್
* ಸಮಾಜ ಸೇವೆ: ವೈಎಸ್ ಪವಿತ್ರ
* ಚುನಾಯಿತ ಪ್ರತಿನಿಧಿ : ವಿಜಯಕುಮಾರ್, ಶಾಸಕ, ಜಯನಗರ
* Britannia, ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆ
* ಮಾಧ್ಯಮ: ಸೀತಾಲಕ್ಷ್ಮಿ, ಮೆಟ್ರೋ ಸಂಪಾದಕಿ, ಟೈಮ್ಸ್ ಆಫ್ ಇಂಡಿಯಾ

English summary
Bescom MD P Manivannan, Head Constable Mahadev Sambargi, MLA of Jayanagar Consistuency, B N Vijay Kumar, Fr George Kannanthanam are among the winners of Namma Bengaluru Awards for 2012 given by the Namma Bengaluru Foundation to recognize the extra-ordinary contributions of ordinary citizens and organizations
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X