ಈ ರಾಷ್ಟ್ರಗಳಲ್ಲಿ ಪೆಟ್ರೋಲ್ ಬೆಲೆ ಎಷ್ಟು ಗೊತ್ತಾ!?
ಒಂದು ಲೀಟರ್ ಪೆಟ್ರೋಲ್ 6 ರೂಪಾಯಿ 50 ಪೈಸೆಗೆಲ್ಲಾ ಸಿಗುತ್ತೆ ಅಂದರೆ ನಂಬ್ತೀರಾ? ಆದರೆ ಇದು ನಿಜ. ವಿಶ್ವ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಅಸ್ಥಿರವಾದ ಪೆಟ್ರೋಲ್ ಬೆಲೆಗಳದ್ದು ಕ್ಷಣ ಚಿತ್ತ, ಕ್ಷಣ ಪಿತ್ತ ಸ್ವಭಾವ. ಅದರಲ್ಲೂ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಒಂದೇ ಸಮನೆ ಪೆಟ್ರೋಲ್ ಬೆಲೆ ಬೆಂಕಿಯಂತೆ ಉರಿಯುತ್ತಿದೆ. ಇಂತಹ ಸಂದರ್ಭದಲ್ಲಿ ವಿಶ್ವದ ಇತರೆ ಭಾಗಗಳಲ್ಲಿ ಪೆಟ್ರೋಲ್ ದರವನ್ನು ಕೇಳಿ ತಿಳಿದುಕೊಂಡರೆ ಭಾರತೀಯರ ಎದೆ ಧಸಕ್ಕೆನ್ನುತ್ತದೆ.
ಮುಖ್ಯವಾಗಿ ಪೆಟ್ರೋಲ್ ದರ ನಿಗದಿಯಾಗುವುದು... ಕಚ್ಚಾ ತೈಲದ ಬೆಲೆ, ತೆರಿಗೆಗಳು, ವಿನಿಮಯ ದರಗಳು, ಆಮದು ಮಾಡಿಕೊಂಡ ತೈಲ ಕಂಪನಿಗಳು ಖರ್ಚು ವೆಚ್ಚಗಳ ಪ್ರಮಾಣದ ಮೇಲೆ.
ಮೊನ್ನೆ ಸರಕಾರ ಎರಡು ರೂಪಾಯಿಯಷ್ಟು ಇಳಿಸಿದ್ದರ ಹಿನ್ನೆಲೆಯಲ್ಲಿ ಇತರೆ ರಾಷ್ಟ್ರಗಳಲ್ಲಿ ಪೆಟ್ರೋಲ್ ಬೆಲೆ ಎಷ್ಟು ಇರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಮೂಡಿದಾಗ...ರೀಡಿಫ್ ವೆಬ್ ಸೈಟಿನಲ್ಲಿ ಬೆಳಕಿಗೆ ಬಂದ ದರ ಪಟ್ಟಿ ಹೀಗಿದೆ.
ಗಮನಾರ್ಹವೆಂದರೆ ಕೆಳಗಿನ ಹತ್ತೂ ರಾಷ್ಟ್ರಗಳು ತೈಲ ಉತ್ಪಾಸದಿಸುವ ರಾಷ್ಟ್ರಗಳು. ಪೆಟ್ರೋಲ್ ಬೆಲೆ ಗರಿಷ್ಠ ಪ್ರಮಾಣದಲ್ಲಿರುವುದು ಭಾರತದಲ್ಲಿರಬಹುದು. ಆದರೆ ಭಾರತದಲ್ಲಿ ತೆರಿಗೆಗಳನ್ನೆಲ್ಲ ತೆಗೆದುಹಾಕಿದರೆ ನಮ್ಮಲ್ಲೂ 35 ರೂ.ಗೆಲ್ಲ ಒಂದು ಲೀಟರ್ ಪೆಟ್ರೋಲ್ ದೊರೆಯುತ್ತದೆ.

ವೆನಿಜುಲಾ ಚೀಪೆಸ್ಟ್
ಪೆಟ್ರೋಲ್ ಬೆಲೆ 1 ಲೀಟರಿಗೆ 6.49 ರೂ. ($0.12)
ಮಾಸಿಕ ಆದಾಯದಲ್ಲಿ ಪೆಟ್ರೋಲ್ ಮೇಲೆ ಜನ ಖರ್ಚು ಮಾಡುವ ಪ್ರಮಾಣ: 2.73%

ಈಜಿಪ್ಟ್ ನಂಬರ್- 2
ಪೆಟ್ರೋಲ್ ಬೆಲೆ 1 ಲೀಟರಿಗೆ 7.30 ರೂ. ($ 0.14)
ಮಾಸಿಕ ಆದಾಯದಲ್ಲಿ ಪೆಟ್ರೋಲ್ ಮೇಲೆ ಜನ ಖರ್ಚು ಮಾಡುವ ಪ್ರಮಾಣ: 4.39%

ಸೌದಿ ಅರೇಬಿಯಾ ನಂಬರ್- 3
ಪೆಟ್ರೋಲ್ ಬೆಲೆ 1 ಲೀಟರಿಗೆ 8.12 ರೂ. ($ 0.15)
ಮಾಸಿಕ ಆದಾಯದಲ್ಲಿ ಪೆಟ್ರೋಲ್ ಮೇಲೆ ಜನ ಖರ್ಚು ಮಾಡುವ ಪ್ರಮಾಣ: 0.98%

ಖತಾರ್ ನಂಬರ್ ಚಾರ್
ಪೆಟ್ರೋಲ್ ಬೆಲೆ 1 ಲೀಟರಿಗೆ 9.74 ರೂ. ($ 0.18)
ಮಾಸಿಕ ಆದಾಯದಲ್ಲಿ ಪೆಟ್ರೋಲ್ ಮೇಲೆ ಜನ ಖರ್ಚು ಮಾಡುವ ಪ್ರಮಾಣ: 0.40%

ಬಹರೇನ್ ನಂಬರ್- 5
ಪೆಟ್ರೋಲ್ ಬೆಲೆ 1 ಲೀಟರಿಗೆ 12.50 ರೂ. ($ 0.23)
ಮಾಸಿಕ ಆದಾಯದಲ್ಲಿ ಪೆಟ್ರೋಲ್ ಮೇಲೆ ಜನ ಖರ್ಚು ಮಾಡುವ ಪ್ರಮಾಣ: 1.81%

ಲಿಬಿಯಾ ನಂಬರ್- 6
ಪೆಟ್ರೋಲ್ ಬೆಲೆ 1 ಲೀಟರಿಗೆ 12.50 ರೂ. ($ 0.23)
ಮಾಸಿಕ ಆದಾಯದಲ್ಲಿ ಪೆಟ್ರೋಲ್ ಮೇಲೆ ಜನ ಖರ್ಚು ಮಾಡುವ ಪ್ರಮಾಣ: 3.32%

ತುರ್ಕಮೇನಿಸ್ತಾನ ನಂಬರ್- 7
ಪೆಟ್ರೋಲ್ ಬೆಲೆ 1 ಲೀಟರಿಗೆ 14.31 ರೂ. ($ 0.26)
ಮಾಸಿಕ ಆದಾಯದಲ್ಲಿ ಪೆಟ್ರೋಲ್ ಮೇಲೆ ಜನ ಖರ್ಚು ಮಾಡುವ ಪ್ರಮಾಣ: 17.79%

ಕುವೈಟ್ ನಂಬರ್- 8
ಪೆಟ್ರೋಲ್ ಬೆಲೆ 1 ಲೀಟರಿಗೆ 14.31 ರೂ. ($ 0.26)
ಮಾಸಿಕ ಆದಾಯದಲ್ಲಿ ಪೆಟ್ರೋಲ್ ಮೇಲೆ ಜನ ಖರ್ಚು ಮಾಡುವ ಪ್ರಮಾಣ: 1.2%

ಅಲ್ಜೀರಿಯಾ (ಒಮಾನ್ 16 ರೂ) ನಂಬರ್- 9
ಪೆಟ್ರೋಲ್ ಬೆಲೆ 1 ಲೀಟರಿಗೆ 14.31 ರೂ. ($ 0.26)
ಮಾಸಿಕ ಆದಾಯದಲ್ಲಿ ಪೆಟ್ರೋಲ್ ಮೇಲೆ ಜನ ಖರ್ಚು ಮಾಡುವ ಪ್ರಮಾಣ: 11.85%

ಇರಾನ್ ನಂಬರ್- 10
ಪೆಟ್ರೋಲ್ ಬೆಲೆ 1 ಲೀಟರಿಗೆ 17.93 ರೂ. ($ 0.33)
ಮಾಸಿಕ ಆದಾಯದಲ್ಲಿ ಪೆಟ್ರೋಲ್ ಮೇಲೆ ಜನ ಖರ್ಚು ಮಾಡುವ ಪ್ರಮಾಣ: 6.53%












Click it and Unblock the Notifications