ಸುವರ್ಣ ವಾಹಿನಿಗೆ ಆಚಾರ್ಯ ಮೀಡಿಯಾ ಕಪ್
ಬೆಂಗಳೂರು, ಮಾ.18: ಮಾಧ್ಯಮ ಕ್ಷೇತ್ರದವರಿಗೆ ಮೀಸಲಾದ ಆಚಾರ್ಯ ಮೀಡಿಯಾ ಕಪ್ 2013 ಟೂರ್ನಿಯ ಅಂತಿಮ ಹಣಾಹಣಿಯಲ್ಲಿ ಸಮಯ ಟಿವಿಯನ್ನು ಸೋಲಿಸಿ ಸುವರ್ಣ ನ್ಯೂಸ್ 24/7 ತಂಡ ಕಪ್ ಎತ್ತಿದೆ.
ಮೊದಲು ಬ್ಯಾಟ್ ಮಾಡಿದ ಸಮಯ ಟಿವಿ 8 ವಿಕೆಟ್ ಕಳೆದುಕೊಂಡು 12 ಓವರ್ ಗಳಲ್ಲಿ 63 ರನ್ ಗಳಿಸಿತು. ಸುವರ್ಣ ಸುದ್ದಿ ವಾಹಿನಿ ತಂಡ 5 ವಿಕೆಟ್ ಕಳೆದುಕೊಂಡು 7.1 ಓವರ್ ಗಳಲ್ಲೇ ಗೆಲುವಿನ ಗುರಿ ಮುಟ್ಟಿದರು.
ಪಂದ್ಯ ಪುರುಷೋತ್ತಮ: ಸುಭಾಷಿತ್ (ಸುವರ್ಣ ಸುದ್ದಿ ವಾಹಿನಿ)
ಸರಣಿ ಶ್ರೇಷ್ಠ : ಅಭಿಷೇಕ್ (ಸುವರ್ಣ ಸುದ್ದಿ ವಾಹಿನಿ)
ಶ್ರೇಷ್ಠ ಬೌಲರ್ : ದಿಲೀಪ್ (ಸುವರ್ಣ ಸುದ್ದಿ ವಾಹಿನಿ)
ಶ್ರೇಷ್ಠ ಬ್ಯಾಟ್ಸ್ ಮನ್ : ಲೋಕೇಶ್ (ಸಮಯ ಟಿವಿ)
ಶ್ರೇಷ್ಠ ಫೀಲ್ಡರ್: ವಸಂತ್ (ಜನಶ್ರೀ ವಾಹಿನಿ)

ಸುವರ್ಣ ಸುದ್ದಿ ವಾಹಿನಿ ತಂಡಕ್ಕೆ ಜನಪ್ರಿಯ ವೀಕ್ಷಕ ವಿವರಣೆಗಾರ ಚಾರು ಶರ್ಮ ಅವರು ಆಚಾರ್ಯ ಮೀಡಿಯಾ ಕಪ್ 2013 ನೀಡಿದರು. ಗೆದ್ದ ತಂಡಕ್ಕೆ 30,000 ರು ಹಾಗೂ ಟ್ರೋಫಿ, ರನ್ನರ್ ಅಪ್ ತಂಡಕ್ಕೆ 20,000 ರು ನಗದು ಹಾಗೂ ಟ್ರೋಫಿ ಲಭಿಸಿದೆ.
ಸೆಮಿಫೈನಲ್ಸ್: ಇದಕ್ಕೂ ಮುನ್ನ ಸುವರ್ಣ ಸುದ್ದಿ ವಾಹಿನಿ ತಂಡ ಒನ್ ಇಂಡಿಯಾ ತಂಡವನ್ನು ಉಪಾಂತ್ಯ ಪಂದ್ಯದಲ್ಲಿ ಸೋಲಿಸಿತು. ಒನ್ ಇಂಡಿಯಾ ತಂಡ 12 ಓವರ್ ಗಳಲ್ಲಿ 66 ರನ್ ಗಳಿಸಿತ್ತು. ಸುವರ್ಣ ತಂಡ 10.1 ಓವರ್ ಗಳಲ್ಲಿ ಗೆಲುವು ಸಾಧಿಸಿತು.
ಇನ್ನೊಂದು ಸೆಮಿಫೈನಲ್ ನಲ್ಲಿ ಜನಶ್ರೀ ತಂಡ 12 ಓವರ್ ಗಳಲ್ಲಿ 58/8 ಸ್ಕೋರ್ ಮಾಡಿತ್ತು. ಸಮಯ ಟಿವಿ 2 ವಿಕೆಟ್ ಕಳೆದುಕೊಂಡು 5 ಎಸೆತ ಬಾಕಿ ಇರುವಂತೆ 59 ರನ್ ಗಳಿಸಿ ಫೈನಲ್ ಪ್ರವೇಶಿಸಿತ್ತು.
ನಿಖಿಲ್, ಕ್ಲಮೆಂಟೋ, ಸುಜಿತ್ ಹಾಗೂ ಒನ್ ಇಂಡಿಯಾ ಕನ್ನಡ ಸಂಪಾದಕ ಎಸ್.ಕೆ ಶಾಮಸುಂದರ ಅವರು ಕ್ರಿಕೆಟ್ ಪಂದ್ಯದ ಕಾಮೆಂಟರಿ ನೀಡಿದರು. ಆಚಾರ್ಯ ಮೀಡಿಯಾ ಕಪ್ ನ ಸಂಪೂರ್ಣ ನಿರ್ವಹಣೆಯನ್ನು ಸಂತೋಷ್ ಅವರು ವಹಿಸಿಕೊಂಡಿದ್ದರು.
ಆಚಾರ್ಯ ಕಪ್: ಇದು 5ನೇ ವರ್ಷದ ಆಚಾರ್ಯ ಮಾಧ್ಯಮ ಕಪ್ ಆಗಿದೆ. ಸೊಲದೇವನಹಳ್ಳಿಯಲ್ಲಿರುವ ಆಚಾರ್ಯ ವಿದ್ಯಾಸಂಸ್ಥೆಯ ಶ್ರೀಮತಿ ನಾಗರತ್ನಮ್ಮ ಸ್ಟೇದಿಯಂ ನಲ್ಲಿ ನಡೆದ ಕ್ರಿಕೆಟ್ ಟೂರ್ನಿಯಲ್ಲಿ 18 ಮಾಧ್ಯಮ ಸಂಸ್ಥೆಗಳು ಪಾಲ್ಗೊಂಡಿದ್ದವು.
ಸುವರ್ಣ ಸುದ್ದಿ ವಾಹಿನಿ, ಸಮಯ ಟಿವಿ, ಒನ್ ಇಂಡಿಯಾ, ಜನಶ್ರೀ ವಾಹಿನಿ, ಟಿವಿ 9, ನ್ಯೂಸ್ 9, ದೈನಿಕ್ ಜಾಗರಣ್, ಟೈಮ್ಸ್ ಆಫ್ ಇಂಡಿಯಾ/ ವಿಜಯ ಕರ್ನಾಟಕ,
ಆಚಾರ್ಯ ಹಬ್ಬದ ಅಂಗವಾಗಿ ನಡೆದ ಕ್ರಿಕೆಟ್ ಟೂರ್ನಿಗೆ ಒನ್ ಇಂಡಿಯಾ ಸಂಸ್ಥೆ ಆನ್ ಲೈನ್ ಸಹಭಾಗಿಯಾಗಿತ್ತು. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಹಾಗೂ ಕನ್ನಡಪ್ರಭ ಪ್ರಿಂಟ್ ಪಾರ್ಟ್ನರ್ಸ್ ಹಾಗೂ ಜನಶ್ರೀ ನ್ಯೂಸ್ ಕನ್ನಡ ಹಾಗೂ 104 ಎಫ್ ಎಂ ವಾಹಿನಿ ಟಿವಿ ಹಾಗೂ ರೇಡಿಯೋ ಸಹಭಾಗಿತ್ವ ಹೊಂದಿದ್ದರು.












Click it and Unblock the Notifications