ಲೈಂಗಿಕ ಕಿರುಕುಳ:ಮಂಗಳೂರು ಮೂಲದ ಡಾಕ್ಟರ್ ಬಂಧನ

ಮಂಗಳೂರಿನಲ್ಲಿ 1993ರಲ್ಲಿ ವೈದ್ಯಕೀಯ ಪದವಿ ಪಡೆದ ಈತನ ಹೆಸರು ಡಾ.ದೇವಿಂದರ್ ಜಿತ್ ಬೈನ್ಸ್ (45). ದೇವಿಂದರ್ ಮೇಲಿರುವ ಆರೋಪಗಳು ಸಾಬೀತಾದರೆ ಈತ ಜೈಲಿನಲ್ಲೇ ಜೀವನ ಕಳೆಯಬೇಕಾದ ಪರಿಸ್ಥಿತಿ ಬರಬಹುದಾಗಿದೆ.
ಲಂಡನ್ ನಲ್ಲಿ ನೆಲೆಸಿರುವ ಈತ ತನ್ನ ಕ್ಲಿನಿಕ್ ಗೆ ಬರುವ ಮಹಿಳಾ ರೋಗಿಗಳ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದ. 2010 ರಿಂದ 2012ರ ಮೇ ಅವಧಿಯಲ್ಲಿ 100ಕ್ಕೂ ಹೆಚ್ಚು ಮಹಿಳೆಯರಿಗೆ ದೇವಿಂದರ್ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಕೇವಲ ಲೈಂಗಿಕ ಕಿರುಕುಳ ಮಾತ್ರ ನೀಡದೆ, ತನ್ನ ವಾಚ್ ನಿಂದ ಅದನ್ನು ಚಿತ್ರಿಸಿಕೊಂಡು ಮಹಿಳೆಯರಿಗೆ ತೋರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. 14 ರಿಂದ 51 ಪ್ರಾಯದ ಮಹಿಳೆಯರು ಈತನ ಟಾರ್ಗೆಟ್ ಆಗಿದ್ದರು ಎಂಬುದು ತನಿಖೆವೇಳೆ ತಿಳಿದು ಬಂದಿದೆ. 39 ಪ್ರಕರಣಗಳ ಬಗ್ಗೆ ಈತ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.
ಆಧುನಿಕ ಜೇಮ್ಸ್ ಬಾಂಡ್ : ಜೇಮ್ಸ್ ಬಾಂಡ್ ತನ್ನ ಸಿನಿಮಾಗಳಲ್ಲಿ ಉಪಯೋಗಿಸುವ ಕ್ಯಾಮೆರಾವಿರುವ ವಾಚ್ ನಂತಹ, ವಾಚ್ ಬಳಸಿ ದೇವಿಂದರ್ ಲೈಂಗಿಕ ಚೇಷ್ಟೆಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ಕ್ಯಾಮೆರಾವಿರುವ 2 ವಾಚ್ ಗಳನ್ನು ಪೊಲೀಸರು ಈತನಿಂದ ವಶಪಡಿಸಿಕೊಂಡಿದ್ದಾರೆ. ದೇವಿಂದ್ ಮನೆಯಿಂದ ವಶಪಡಿಸಿಕೊಂಡಿರುವ ಹಾರ್ಡ್ ಡಿಸ್ಕ್ ನಲ್ಲಿ 100ಕ್ಕೂ ಹೆಚ್ಚು ಮಹಿಳೆಯರ ವಿಡಿಯೋಗಳಿರುವುದು ತನಿಖೆಯಿಂದ ಗೊತ್ತಾಗಿದೆ.
ಕೆಲವು ದಿನಗಳ ಹಿಂದೆ ದೇವಿಂದರ್ ನಿಂದ ದೌರ್ಜನ್ಯಕ್ಕೆ ಒಳಗಾದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಈತನ ಕರ್ಮಕಾಂಡ ಹೊರಗೆ ತೆಗೆದಿದ್ದಾರೆ. ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ 39 ಪಕ್ರರಣಗಳಲ್ಲಿ ಈತ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications