ಮಹಿಳಾ ಉದ್ಯೋಗಿ ಕೆಣಕಿದ ಕ್ಯಾಬ್ ಚಾಲಕನಿಗೆ ಗೂಸಾ

Hyderabad cab driver misbehave with woman beaten up held
ಹೈದರಾಬಾದ್, ಮಾ.14: ರಸ್ತೆಯಲ್ಲಿ ಬೆಳಗಿನ ವಾಕಿಂಗ್ ಮಾಡುತ್ತಿದ್ದ ಮಹಿಳಾ ಟೆಕ್ಕಿಯನ್ನು ಕೆಣಕಿದ ಕ್ಯಾಬ್ ಚಾಲಕನಿಗೆ ಸ್ಥಳೀಯರು ಸಮಾ ಧರ್ಮದೇಟು ನೀಡಿದ್ದಾರೆ. ಇಲ್ಲಿನ ಗಚಿಬೋಲಿ ಸಮೀಪ IIIT ಬಳಿ ಗುರುವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಆರೋಪಿ ಖಲೀಮುದ್ದೀನನ್ನು ಪೊಲೀಸರು ಬಂಧಿಸಿದ್ದಾರೆ. ನಾಂಪಲ್ಲಿಯ ಮೊಹಮದ್ ಖಲೀಮುದ್ದೀನ್ Dot Cab ಸಂಸ್ಥೆಯಲ್ಲಿ ಚಾಲಕನಾಗಿದ್ದಾನೆ.

ಮಾಧಾಪುರದ ನೊವಾತ್ರೀಸ್ ಫಾರ್ಮಾದಲ್ಲಿ ಟೆಕ್ಕಿಯಾಗಿರುವ ಮಹಿಳೆ ಬೆಳಗ್ಗೆ 6.30ರಲ್ಲಿ ಐಐಐಟಿ ಜಂಕ್ಷನ್ ಬಳಿ ನಡೆದು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. 'ಕ್ಯಾಭ್ ಡ್ರೈವರ್ ತನ್ನ ವಾಹನದ ಪಕ್ಕ ನಿಂತಿದ್ದ. ಆತನ ಸಮೀಪ ನಡೆದು ಹೋಗುತ್ತಿದ್ದಾಗ ನನ್ನನ್ನು ಹಿಡಿದು, ಅಪ್ಪಿಕೊಳ್ಳಲು ಮುಂದಾದ. ಮಾನಭಂಗಕ್ಕೆ ಯತ್ನಿಸುತ್ತಿದ್ದಾಗ ಸ್ಥಳೀಯರು ಬಂದು ನನ್ನನ್ನು ಕಾಪಾಡಿದರು' ಎಂದು ಬಾಧಿತ ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

ಮಹಿಳೆಯನ್ನು ಕಾಪಾಡಿದ ಬೈಕ್ ಸವಾರರು: ಕ್ಯಾಬ್ ಚಾಲಕ ತನ್ನ ಸಂಗಾತಿಯೊಂದಿಗೆ ದುರ್ವರ್ತನೆಯಲ್ಲಿ ತೊಡಗಿದಾಗ ಮಹಿಳೆಯ ಜತೆಗಿದ್ದ ವ್ಯಕ್ತಿ ಜೋರಾಗಿ ಕಿರುಚಿಕೊಂಡಿದ್ದಾರೆ. ಅದೇ ವೇಳೆಗೆ ಅಲ್ಲಿಗೆ ಬಂದ ಬೈಕ್ ಸವಾರರು ಕ್ಯಾಬ್ ಚಾಲಕ ಮಹಿಳೆಯನ್ನು ಅಪಹರಿಸಲು ಯತ್ನಿಸುತ್ತಿದ್ದಾನೆ ಎಂದು ಬಗೆದು ಅವನ ಮೇಲೆ ಮುಗಿಬಿದ್ದರು. ಮತ್ತು ತಕ್ಷಣವೇ ಪೊಲೀಸರಿಗೂ ಮಾಹಿತಿ ನೀಡಿದರು ಎಂದು ತಿಳಿದುಬಂದಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+