ದಾವೂದ್ ಇಬ್ರಾಹಿಂ ಬಂಧನಕ್ಕೆ ಗೃಹ ಸಚಿವರಿಂದ ಅಡ್ಡಿ

Mumbai Ex Police Chief blames EX Home Minister for stalling Dawood's arrest
ನವದೆಹಲಿ, ಮಾ 14: 1993 ಮುಂಬೈ ಸರಣಿ ಸ್ಫೋಟದ ಪ್ರಮುಖ ರೂವಾರಿ ದಾವೂದ್ ಇಬ್ರಾಹಿಂ ಬಂಧನಕ್ಕೆ ಅಂದಿನ ಗೃಹ ಸಚಿವರು ಅಡ್ಡಿಪಡಿಸಿದ್ದರು ಎನ್ನುವ ಸ್ಪೋಟಕ ಮಾಹಿತಿಯನ್ನು ಮುಂಬೈ ಪೊಲೀಸ್ ಮಾಜಿ ಮುಖ್ಯಸ್ಥರು ನೀಡಿದ್ದಾರೆ.

ಘಟನೆ ನಡೆದ ಇಪ್ಪತ್ತು ವರ್ಷಗಳ ನಂತರ ಮಾಜಿ ಪೊಲೀಸ್ ಮುಖ್ಯಸ್ಥ ಎಂ ಎನ್ ಸಿಂಗ್ ಅವರು ಪಾತಕಿ ದಾವೂದ್ ಇಬ್ರಾಹಿಂ ಅವರನ್ನು ನಾವು ಯಾವುದೇ ತೊಂದರೆ ಇಲ್ಲದೆ ಬಂಧಿಸಬಹುದಿತ್ತು. ಆದರೆ ಅಂದಿನ ಗೃಹ ಸಚಿವರಾದ ಎಸ್ ಸಿ ಚವಾಣ್ ಇದಕ್ಕೆ ಅಡ್ಡಿ ಪಡಿಸಿದ್ದರು ಎಂದು ಹೇಳಿದ್ದಾರೆ.

ಸಿಂಗ್ ತನ್ನ ವಿವಾದಕಾರಿ ಹೇಳಿಕೆಯಲ್ಲಿ, ಭೂಗತ ಪಾತಕಿ ದಾವೂದ್ ಕರಾಚಿಯಲ್ಲಿ ನೆಲೆಸುವ ಮುನ್ನ ದುಬೈನಲ್ಲಿದ್ದ. ನಾವು ದುಬೈಗೆ ಪೊಲೀಸ್ ತಂಡವನ್ನು ಕಳುಹಿಸಿ ಆತನನ್ನು ಬಂಧಿಸಿ ಭಾರತಕ್ಕೆ ಕರೆತರೋಣವೆಂದು ಸಲಹೆ ನೀಡಿದ್ದೆ. ಆದರೆ ಸಚಿವ ಚವಾಣ್ ನನ್ನ ಸಲಹೆಯನ್ನು ನಿರಾಕರಿಸಿದ್ದರು.

ದಾವೂದ್ ಬಂಧಿಸುವ ಕೆಲಸಕ್ಕೆ ಚವಾಣ್ ಕೈಹಾಕಲೇ ಇಲ್ಲ ಮತ್ತು ನಮಗೂ ದುಬೈಗೆ ಹೋಗಲು ಅನುಮತಿ ನೀಡಲಿಲ್ಲ ಎಂದು ಸಿಂಗ್ CNN-IBN ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ದಾವೂದ್ ಇಬ್ರಾಹಿಂ, ಛೋಟಾ ಶಕೀಲ್, ಟೈಗರ್ ಮೆಮನ್ ಸೇರಿ 42 ಮಂದಿ ಮುಂಬೈ ಸರಣಿ ಸ್ಪೋಟದ ಉಗ್ರರ ಪಟ್ಟಿಯಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+