ರಾಜ್ಯದ 15 ಜಿಲ್ಲೆಗಳ ಜನತೆಗೆ ಭಾರೀ ಮೋಸ

Pre-monsoon rain weather report Karnataka
ಬೆಂಗಳೂರು, ಮಾ. 12: ಬೇಸಿಗೆಯಲ್ಲಿ ಮಳೆ ಬೀಳುತ್ತದೆ ಎಂದರೆ ಅದನ್ನು ನೀವು ವಿಚಿತ್ರ ವಿಸ್ಮಯ ಪವಾಡ ಎಂದು ಬಣ್ಣಿಸಬಾರದು. ಸದ್ಯ ರಾಜ್ಯದಲ್ಲಿ ಸುರಿಯುತ್ತಿರುವ ಬಿಸಿಲಿನ ನಡುವೆ ಒಂದಿಷ್ಟು ಮಳೆ ಹುಯ್ದಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.

ಅಲ್ಲಲ್ಲಿ ಬಿದ್ದ ಮುಂಗಾರು ಮುನ್ನಾ ಮಳೆ ಹನಿಗಳ ಅಂಕಿಅಂಶ ಹೀಗಿದೆ. ದಾವಣಗೆರೆ 71.4, ಬಳ್ಳಾರಿ 41.9. ಕೊಡಗು 75.5, ಹಾಸನ 53.5, ಗುಲ್ಬರ್ಗಾ 28.50, ಯಾದಗಿರಿ 15.5, ರಾಮನಗರ 2.5, ದಕ್ಷಿಣ ಕನ್ನಡ 39, ಚಿತ್ರದುರ್ಗ 24.5.

ಚಿಕ್ಕಮಗಳೂರು 52.5, ಮೈಸೂರು 9, ಕೊಪ್ಪಳ 3, ಶಿವಮೊಗ್ಗ 12.5, ತುಮಕೂರು 32, ಬೀದರ್ 3. ಹೀಗೆ ಕರ್ನಾಟಕದ ಒಟ್ಟು 15 ಜಿಲ್ಲಾ ವ್ಯಾಪ್ತಿಯಲ್ಲಿ ಮಳೆ ಕಾಣಿಸಿಕೊಂಡಿದೆ. ಎಲ್ಲಾ ಅಂಕಿಗಳು ಮಿಲಿ ಮೀಟರುಗಳಲ್ಲಿ.

ಅಂದಹಾಗೆ ಈ ಮಳೆ ವರದಿ ಸೋಮವಾರದ್ದು. ಒಂದೆಡೆ ಸ್ಥಳೀಯ ಚುನಾವಣೆಗಳ ಮತ ಎಣಿಕೆ ನಡೆದರೆ ಇನ್ನೊಂದೆಡೆ ಚದುರಿದಂತೆ ಬಿದ್ದ ಮಳೆ ಲೆಕ್ಕ ಹಿಡಿದವರು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದವರು.

ಇನ್ನು ಉಳಿದ 15 ಜಿಲ್ಲೆಗಳಲ್ಲಿ ಮಳೆ ಇಣುಕದಿರುವುದು ಆತಂಕದ ವಿಷಯವೇ. ಯಾಕಂದರೆ, 15 ಜಿಲ್ಲೆಗಳಲ್ಲಿ ಮಣ್ಣು ಒದ್ದೆ ಆಗಿದ್ದು ಉಳಿದ 15 ಜಿಲ್ಲೆಗಳಲ್ಲಿ ಮಳೆ ವಾಸನೆಯೇ ಇಲ್ಲದಿರುವುದು ಯಾವನ್ಯಾಯ?

ಮೇಲಿನ ಪ್ಯಾರಾಗಳಲ್ಲಿ ನಮೂದಿಸದೇ ಉಳಿದ ಜಿಲ್ಲೆಗಳ ಜನತೆ ನೀವಾಗಿದ್ದರೆ, ಭಾಗಶಃ ಮೋಡ ಕವಿದ ವಾತಾವರಣದ ಜತೆಗೆ ಕೆಲವೆಡೆ ಸಂಜೆ ಹೊತ್ತು ಅಥ್ವಾ ರಾತ್ರಿ ಲೈಟಾಗಿ ಮಳೆ ಬಿದ್ದರೂ ಬೀಳಬಹುದೆಂಬ ಮುನ್ನೋಟವನ್ನು ಇದೇ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದ ಅಧಿಕಾರಿಗಳು ನೀಡಿದ್ದಾರೆ. ಗುಡ್ ಲಕ್.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+