ಬ್ಯಾಂಕ್ ಉದ್ಯೋಗಾರ್ಥಿಗಳ ಅರ್ಜಿಯ ಸುರಿಮಳೆ

Job applications flood State Bank of India
ಬೆಂಗಳೂರು, ಮಾ.12: ಪದವೀಧರರಿಗೆ ಬ್ಯಾಂಕ್ ಉದ್ಯೋಗ ಪಡೆಯುವ ಆಸೆ ದಿನೇ ದಿನೇ ಹೆಚ್ಚುತ್ತಲೇ ಇದೆ ಎಂಬುದಕ್ಕೆ ಸ್ಟೇಟ್ ಬ್ಯಾಂಕ್ ಗಳಿಗೆ ಬಂದಿರುವ ಅರ್ಜಿಗಳ ಮಹಾಪೂರವೇ ಸಾಕ್ಷಿ

1500 ಪ್ರೊಬೇಷನರಿ ಅಧಿಕಾರಿಗಳ ಹುದ್ದೆಗೆ ಆರ್ಜಿಗಳನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಗೆ ಉದ್ಯೋಗ ಬಯಸಿ ಬಂದಿರುವ ಅರ್ಜಿಗಳ ಸಂಖ್ಯೆ ಈಗ 1.7 ಮಿಲಿಯನ್ ಮೀರಿದೆ. ಅಭೂತಪೂರ್ವ ಆರ್ಜಿಗಳ ಸುರಿಮಳೆ ಕಂಡು ಬ್ಯಾಂಕ್ ಸಿಬ್ಬಂದಿ ಬೆರಗಾಗಿದ್ದಾರೆ.

ಸಾಮಾನ್ಯವಾಗಿ 5,00,000 ದಿಂದ 7,00,000 ಅರ್ಜಿಗಳನ್ನು ನಿರೀಕ್ಷಿಸಬಹುದಾಗಿದೆ. ಪ್ರೊಬೆಷನರಿ ಹುದ್ದೆಗೆ ಈವರೆಗೂ ಇದಕ್ಕಿಂತ ಹೆಚ್ಚಿನ ಅರ್ಜಿಗಳು ಬಂದ ಉದಾಹರಣೆ ಇಲ್ಲ. ನಮಗಂತೂ ಇದು ಅನಿರೀಕ್ಷಿತವಾಗಿದೆ ಎಂದು ಎಸ್ ಬಿಐ ಚೇರ್ಮನ್ ಪ್ರತೀಪ್ ಚೌಧರಿ ಹೇಳಿದ್ದಾರೆ.

ಎಸ್ ಬಿಐ ಆಕರ್ಷಕ ಜಾಹೀರಾತಿನ ಸೃಜನಶೀಲತೆ ಇದಕ್ಕೆ ಕಾರಣ ಇದರಬಹುದು ಎನ್ನಲಾಗಿದೆ. ಮುಂಬೈನಲ್ಲಿ ಸುಮಾರು 69,000 ಪ್ರತಿ ತಿಂಗಳ ಪ್ಯಾಕೇಜ್ ಸಿಗಲಿದೆ ಎಂಬ ಸುದ್ದಿ ಹಬ್ಬಿತ್ತು. ಇದು ಕೂಡಾ ಕಾರಣವಾಗಿರಬಹುದು. ಈ ವರೆಗೂ 32 ಸಾವಿರ ರು ಸಂಬಳ ಹಾಗೂ ಗೃಹ ಭತ್ಯೆ ಸಿಗುವ ಬಗ್ಗೆ ಮಾತ್ರ ಜಾಹೀರಾತು ನೀಡಲಾಗುತ್ತಿತ್ತು.

ದೇಶದ ಅತಿದೊಡ್ಡ ಬ್ಯಾಂಕಿಂಗ್ ಜಾಲ ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 9,500 ಹೊಸ ನೇಮಕಾತಿ ಮಾಡಿಕೊಳ್ಳುವುದಾಗಿ ಪ್ರಕಟಿಸಿತ್ತು. ಕನಿಷ್ಠ ವಿದ್ಯಾರ್ಹತೆ ಅಗತ್ಯ ಮಿತಿಯನ್ನು ಇಳಿಸುವ ಮೂಲಕ ಲಕ್ಷಾಂತರ ಪದವೀಧರರಿಗೆ ಶುಭ ಸುದ್ದಿ ನೀಡಿತ್ತು.

1500ಕ್ಕೂ ಅಧಿಕ ಪ್ರೊಬೇಷನರಿ ಅಧಿಕಾರಿಗಳ ಹುದ್ದೆಗೆ ಅರ್ಜಿದಾರರು ವಿದ್ಯಾರ್ಹತೆ ಕಲಂ ನಲ್ಲಿ ಯಾವುದೇ ಪದವಿ ಪಡೆದಿರುವ ದಾಖಲೆ ಒದಗಿಸಿದರೆ ಸಾಕು. ಪಡೆದ ಅಂಕಗಳ ಶೇಕಡಾವಾರು ಲೆಕ್ಕಾಚಾರ ಬೇಕಿಲ್ಲ ಎನ್ನಲಾಗಿತ್ತು. ಇದು ಮುಖ್ಯವಾಗಿ ಅರ್ಜಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷದ ತನಕ, ಶೇ 55 ಅಂಕ ಪಡೆದವರು ಪ್ರೊಬೇಷನರಿ ಅಧಿಕಾರಿಗಳ ಹುದ್ದೆಗೆ ಅರ್ಜಿ ಹಾಕಬಹುದಾಗಿತ್ತು. ಪ್ರೊಬೆಷನರಿ ಹುದ್ದೆಗೆ ಲಿಖಿತ ಪರೀಕ್ಷೆಗಳು ಏಪ್ರಿಲ್ 28, 2013ರಂದು ನಡೆಯುವ ಸಾಧ್ಯತೆಯಿದೆ.

ಸರ್ಕಾರಿ ಸ್ವಾಮ್ಯದ ಎಸ್ ಬಿಐ ವರದಿ ಪ್ರಕಾರ ಕಳೆದ ಆರ್ಥಿಕ ವರ್ಷದಲ್ಲಿ 7,452 ಜನ ಉದ್ಯೋಗಗಳನ್ನು ಸಂಸ್ಥೆ ಕಳೆದುಕೊಂಡಿದೆ. ಆದರೆ, ಈ ಆರ್ಥಿಕ ವರ್ಷದಲ್ಲಿ 9,500 ಹೊಸ ನೇಮಕಾತಿ ಮಾಡಿಕೊಳ್ಳುವ ಮೂಲಕ ಮಾನವ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳಲಾಗುತ್ತದೆ. 2012-13ರಲ್ಲಿ 9,500ಕ್ಕೂ ಅಧಿಕ ಕ್ಲಕ್ ಹುದ್ದೆಗಳು ಲಭ್ಯವಿರುತ್ತದೆ ಎಂದು ಬ್ಯಾಂಕ್ ಪ್ರಕಟಿಸಿದ್ದಾರೆ. ಮಾರ್ಚ್ 31, 2012ಕ್ಕೆ ಅನ್ವಯವಾಗುವಂತೆ ಎಸ್ ಬಿಐ ನಲ್ಲಿ ಶಾಶ್ವತ ಉದ್ಯೋಗಿಗಳ ಸಂಖ್ಯೆ 2,15,481ನಷ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+