ಕುಂಭಮೇಳದ ಸುತ್ತ ಮತ್ತೆ ಪ್ರದಕ್ಷಿಣೆ

ಸುಮಾರು 55 ದಿನಗಳ ಕಾಲದ ಬೃಹತ್ ಪವಿತ್ರ ಸ್ನಾನದ ಮೇಳ ಮುಕ್ತಾಯ ಕಾಣುತ್ತಿದೆ. ಮಕರ ಸಂಕ್ರಾತಿಯ ದಿನದಂದು ಆರಂಭ ಗೊಂಡ ಮಹಾ ಕುಂಭಮೇಳ ಮಹಾ ಶಿವರಾತ್ರಿ ದಿನ(ಮಾ.10) ಕೊನೆ ಮುಳುಗು ಹಾಕುತ್ತಿದೆ.

12 ವರ್ಷಕ್ಕೊಮ್ಮೆ ನಡೆಯುವ ಈ ಮೇಳದಲ್ಲಿ ಶಿವರಾತ್ರಿ ದಿನ ಸುಮಾರು 50 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಪುಣ್ಯ ಸ್ನಾನ ಕೈಗೊಳ್ಳುವ ನಿರೀಕ್ಷೆಯಿದೆ.

ಅಲಹಾಬಾದಿನ ರೈಲ್ವೆ ನಿಲ್ದಾಣದಲ್ಲಿ ಅದ ಕಾಲ್ತುಳಿತ ದುರ್ಘಟನೆ ಚಿತ್ರಗಳು ಪ್ರಸಾರವಾಗಿದ್ದು, ಹೆಲಿ ಕಾಪ್ಟರ್ ಬಳಸಿ ಹತ್ತಿರದಿಂದ ಫೋಟೊ ಹೊಡೆಯಲು ಫ್ರೆಂಚ್ ಜರ್ನಲಿಸ್ಟ್ ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು ಎಲ್ಲವೂ ಪತ್ರಕರ್ತರಿಗೆ ಮುಳುವಾಯಿತು

ಸುರಕ್ಷತೆಯ ದೃಷ್ಟಿಯಿಂದ ಮಹಾ ಕುಂಭಮೇಳದ ಎಲ್ಲಾ ಸ್ನಾನಘಟ್ಟಗಳಲ್ಲಿ ಫೋಟೋಗ್ರಾಫಿ ನಿಷೇಧಿಸಿ ಸ್ಥಳೀಯ ಆಡಳಿತ ಆದೇಶ ಹೊರಡಿಸಿದ ಮೇಲೆ ವಿಶ್ವದೆಲ್ಲೆಡೆಯಿಂದ ಬಂದಿದ್ದ ಫೋಟೋ ಜರ್ನಲಿಸ್ಟ್ ಗಳ ಕೆಮೆರಾಗಳಿಗೆ ಕೆಲಸ ಇಲ್ಲದ್ದಂತಾಯಿತು. ಮೇಳದಲ್ಲಿನ ಭಾವಪರವಶಗೊಳಿಸುವ ಚಿತ್ರಗಳನ್ನು ಕೊನೆಯ ವಾರದಲ್ಲಿ ಓದುಗರಿಗೆ ತಲುಪಿಸಲು ನಮಗೂ ಸಾಧ್ಯವಾಗಿರಲಿಲ್ಲ.

ಹೀಗಾಗಿ ಅಂತಿಮ ದಿನವಾದ ಇಂದು ಒಟ್ಟಾರೆ ಮಹಾ ಕುಂಭಮೇಳದ ಗಂಗಾ, ಯುಮುನಾ, ಸರಸ್ವತಿ ಸಂಗಮದಲ್ಲಿ ಕಂಡ ದೃಶ್ಯಗಳ ರೀ ಕ್ಯಾಪ್ ದೃಶ್ಯಾವಳಿ ನಿಮಗಾಗಿ ನೀಡುತ್ತಿದ್ದೇವೆ.

ಮಹಾ ಕುಂಭಮೇಳ ಮುಕ್ತಾಯ

ಮಹಾ ಕುಂಭಮೇಳ ಮುಕ್ತಾಯ

ಕುಂಭಮೇಳದಲ್ಲಿ ರಾತ್ರಿ ವೇಳೆ ಕಂಡ ತಾತ್ಕಾಲಿಕ ವಸತಿ ಸೌಕರ್ಯಗಳು

ಜಲ ಶುದ್ಧಿಗೆ ಆದ್ಯತೆ

ಜಲ ಶುದ್ಧಿಗೆ ಆದ್ಯತೆ

ಪವಿತ್ರ ಗಂಗೆಯ ಶುದ್ಧತೆಯನ್ನು ಕಾಪಾಡಲು ಎಲ್ಲಾ ಜನಾಂಗದವರು ಕೈಜೋಡಿಸಿದ್ದು, ನಿಯಮಿತವಾಗಿ ನೀರನ್ನು ಶುದ್ಧಿಕರಿಸಲಾಗುತ್ತಿತ್ತು.

ಧಾರ್ಮಿಕ ವಿಧಿ ವಿಧಾನ

ಧಾರ್ಮಿಕ ವಿಧಿ ವಿಧಾನ

ಪಿಂಡ ಪ್ರಧಾನ, ನಾಗಾ ಸಾಧುಗಳ ಶಿಷ್ಯ ವೃತ್ತಿ ಸ್ವೀಕರಿಸಿ, ಸನ್ಯಾಸತ್ವ ಪಡೆಯಲು ಕುಂಭಮೇಳ ಅದ್ಭುತ ವೇದಿಕೆ ಒದಗಿಸಿತ್ತು.

ಯೋಧರಿಗೆ ಸಲಾಂ

ಯೋಧರಿಗೆ ಸಲಾಂ

ರೈಲ್ವೆ ನಿಲ್ದಾಣ ಕಾಲ್ತುಳಿತ, ಭಯಂಕರ ಮಳೆಗೆ ಹೆದರಿ ಕಡೆಯ 15 ದಿನಗಳಲ್ಲಿ ಮೇಳದಿಂದ ಜಾಗ ಖಾಲಿ ಮಾಡುತ್ತಿದ್ದ ಭಕ್ತಾದಿಗಳಲಿ ಹುರುಪು ತುಂಬಿ, ಭದ್ರತೆ ಒದಗಿಸಿದ ರಕ್ಷಣಾ ಪಡೆ ಯೋಧರು.

ತ್ರಿಶೂಲಧಾರಿಗಳ ಕುತೂಹಲ

ತ್ರಿಶೂಲಧಾರಿಗಳ ಕುತೂಹಲ

ನಾಗಾ ಸಾಧುಗಳ ವೈವಿಧ್ಯಮಯ ವೇಷ ಭೂಷಣಗಳು, ನಗ್ನತೆ ನಡುವೆ ಶಿವನ ಅವತಾರಿಗಳಂತೆ ನರ್ತಿಸುತ್ತಾ ತ್ರಿಶೂಲಧಾರಿಗಳಾಗಿ ಮೆರವಣಿಗೆ ನಡೆಸಿದ್ದು ಮೇಳದ ಆಕರ್ಷಣೆ

ವ್ಯವಸ್ಥೆಗೆ ಜೈ

ವ್ಯವಸ್ಥೆಗೆ ಜೈ

ತಾತ್ಕಾಲಿಕ ವಸತಿ ಗೃಹಗಳು, ಶೌಚಾಲಯಗಳು, ಆಸ್ಪತ್ರೆಗಳು, ರಸ್ತೆಗಳು, ಸೇತುವೆಗಳು ನಿರ್ಮಿಸಿ ನಿರ್ವಹಿಸಿದ ಉತ್ತರ ಪ್ರದೇಶ ಸರ್ಕಾರ ಅಭಿನಂದನೆ ಅರ್ಹವಾಗಿದೆ.

ದುರಂತದ ಕಹಿ ನೆನಪು

ದುರಂತದ ಕಹಿ ನೆನಪು

ರೈಲ್ವೆ ನಿಲ್ದಾಣದ ಕಾಲ್ತುಳಿತ ಪ್ರಕರಣ 32 ಮಂದಿ ಬಲಿ ತೆಗೆದುಕೊಂಡಿತು. ಕೊನೆ ಕೊನೆಗೆ ಕೇಂದ್ರ ಹಾಗೂ ಸ್ಥಳೀಯ ಆಡಳಿತ ಪರಸ್ಪರ ಆರೋಪ ಪ್ರತ್ಯಾರೋಪದಲ್ಲೇ ದುರಂತದ ತೀವ್ರತೆಯನ್ನು ಮರೆ ಮಾಚಿಬಿಟ್ಟರು.

ವಿದೇಶಿಯರಿಗೆ ಉತ್ತಮ ವೇದಿಕೆ

ವಿದೇಶಿಯರಿಗೆ ಉತ್ತಮ ವೇದಿಕೆ

ಯೋಗ, ಆಧಾತ್ಮ ಕುತೂಹಲಿಗಳಾಗಿ ಬಂದಿದ್ದ ಅನೇಕ ವಿದೇಶಿಯರಿಗೆ ಮಹಾ ಕುಂಭಮೇಳ ಅವರ ಜ್ಞಾನದ ಹಸಿವನ್ನು ನೀಗಿಸಿತು. ಅನೇಕ ಮಹಿಳೆಯರು ಸನ್ಯಾಸತ್ವ ಸ್ವೀಕರಿಸಿ, ಹೋಮ ಹವನದಲ್ಲಿ ತೊಡಗಿದರು.

ಸೆಲೆಬ್ರಿಟಿಗಳ ಪುಣ್ಯ ಸ್ನಾನ

ಸೆಲೆಬ್ರಿಟಿಗಳ ಪುಣ್ಯ ಸ್ನಾನ

ಪೂನಂ ಪಾಂಡೆ, ಶಿಲ್ಪಾ ಶೆಟ್ಟಿ, ಇಮ್ರಾನ್ ಹಶ್ಮಿ, ವಿವೇಕ್ ಓಬೆರಾಯ್, ರಾಜಕೀಯ ಮುಖಂಡರಾದ ರಾಜನಾಥ್ ಸಿಂಗ್, ಸ್ಪೀಕರ್ ಮೀರಾಕುಮಾರ್, ಸ್ವಾಮಿ ನಿತ್ಯಾನಂದ, ಕಂಚಿ ಮಠ ಶ್ರೀಗಳು ಸೇರಿದಂತೆ ಹಲವಾರು ಗಣ್ಯರು ಪವಿತ್ರ ಗಂಗೆಯಲ್ಲಿ ಮುಳುಗು ಹಾಕಿ ಪ್ರಾರ್ಥನೆ ಸಲ್ಲಿಸಿದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ನರೇಂದ್ರ ಮೋದಿ ಮೇಳಕ್ಕೆ ಬರುವ ನಿರೀಕ್ಷೆ ಸುಳ್ಳಾಯಿತು.

ಸೂತಕದ ನಡುವೆ ಸಂಭ್ರಮ

ಸೂತಕದ ನಡುವೆ ಸಂಭ್ರಮ

ದಾರಾಗಂಜ್ ರೈಲು ನಿಲ್ದಾಣದಲ್ಲಿನ ಕಾಲ್ತುಳಿತ ಘಟನೆ, ಸುಮಾರು 3 ಲಕ್ಷ ಭಕ್ತರು ಕಾಣೆಯಾಗಿದ್ದು, ಅಗಲಿದ ಪಿತೃಗಳಿಗೆ ಪಿಂಡ ಪ್ರದಾನ ಮಾಡುವುದು ಸೇರಿದಂತೆ ಅನೇಕ ಸಿಹಿ ಕಹಿ ನೆನಪಿನ ಆಗರವಾಗಿ ಕುಂಭಮೇಳ ಮತ್ತಷ್ಟು ವಿಸ್ಮಯ ತಾಣವಾಗಿತ್ತು.

ಕ್ಲಿಕ್ ಕ್ಲಿಕ್

ಕ್ಲಿಕ್ ಕ್ಲಿಕ್

ಭಕ್ತೆಯೊಬ್ಬರು ಪೂಜೆ ಸಲ್ಲಿಸಲು ತಯಾರಾಗಿದ್ದು, ಅದನ್ನು ಸೆರೆ ಹಿಡಿಯುತ್ತಿರುವ ಆಕೆ ಪತಿ. 100 ಮಿಲಿಯನ್ ಗೂ ಅಧಿಕ ಜನ ಭಕ್ತಾದಿಗಳನ್ನು ನಿರೀಕ್ಷಿಸಲಾಗಿದೆ. ಮಕರ ಸಂಕ್ರಾಂತಿ ಹಾಗೂ ಫೆ.10ರ ಮೌನಿ ಅಮಾವಾಸ್ಯೆ ದಿನದಂದು ಕೋಟಿಗಟ್ಟಲೆ ಜನ ಭಾಗವಹಿಸಿದ್ದು ದಾಖಲೆ

ನಾಗಾ ಸಾಧುಗಳು

ನಾಗಾ ಸಾಧುಗಳು

ನಗ್ನ ಸಾಧುಗಳ ಬಗ್ಗೆ ಅನೇಕಾನೇಕ ಕುತೂಹಲ ಸಂಗತಿಗಳನ್ನು ಹೊರ ಹಾಕುವ ವಿಸ್ಮಯ ತಾಣ ಕುಂಭಮೇಳ

ವಂದನೆಗಳು ಹೋಗಿ ಬನ್ನಿ

ವಂದನೆಗಳು ಹೋಗಿ ಬನ್ನಿ

ಮೇಳ ಮುಗಿಸಿಕೊಂಡು ಊರಿನ ಕಡೆಗೆ ಹೊರಟ ಭಕ್ತಾದಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+