ಡ್ರಗ್ಸ್ ಜಾಲದಲ್ಲಿ ಬಾಕ್ಸರ್ ವಿಜೇಂದರ್ ಸಿಂಗ್

Olympian Vijender Singh in drug net?
ಮೊಹಾಲಿ, ಮಾ.8: ಒಲಿಂಪಿಕ್ ಬಾಕ್ಸರ್ ವಿಜೇಂದರ್ ಸಿಂಗ್ ಹಾಗೂ ಜೊತೆಗಾರ ರಾಮ್ ಸಿಂಗ್ ಅವರು ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಜಿರಾಕ್ ಪುರ್ ದ ಫ್ಲಾಟ್ ವೊಂದರ ಮೇಲೆ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಸುಮಾರು 130 ಕೋಟಿ ಮೌಲ್ಯದ ಹೆರಾಯಿನ್ ಸಿಕ್ಕಿದೆ. ಅದೇ ಫ್ಲಾಟಿನಲ್ಲಿದ್ದ ಕಾರೊಂದರಲ್ಲಿ 10 ಕೆಜಿ ತೂಗುವ ಹೆರಾಯಿನ್ ಪತ್ತೆಯಾಗಿದ್ದು, ಆ ಕಾರು ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್ ಅವರದ್ದು ಎಂದು ತಿಳಿದು ಬಂದಿದೆ.

ಬಾಕ್ಸರ್ ವಿಜೇಂದರ್ ಸಿಂಗ್ ಅವರ ಪತ್ನಿ ಹೆಸರಿನಲ್ಲಿರುವ ಕಾರಿನಲ್ಲಿ ಮಾದಕ ದ್ರವ್ಯ ಹೇಗೆ ಬಂತು ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಾ.3 ರಂದು ಅನುಪ್ ಸಿಂಗ್ ಕಹ್ಲೋನ್ ಎಂಬುವ ವ್ಯಕ್ತಿಯನ್ನು ಡ್ರಗ್ಸ್ ಜಾಲ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಆತ ವಿಜೇಂದರ್ ಸಿಂಗ್ ಹಾಗೂ ರಾಮ್ ಸಿಂಗ್ ಅವರ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿದೆ.

ವಿಜೇಂದರ್ ಹಾಗೂ ರಾಮ್ ಅವರಿಗೆ ನಿರಂತರವಾಗಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದೆ ಎಂದು ಬಂಧಿತ ಆರೋಪಿ ಅನುಪ್ ಹೇಳಿಕೆ ನೀಡಿದ್ದಾನೆ. ಇದಕ್ಕೆ ಪೂರಕವಾಗಿ ವಿಜೇಂದರ್ ಪತ್ನಿ ಕಾರಿನಲ್ಲಿ ಹೆರಾಯಿನ್ ಸಿಕ್ಕಿದೆ.

ಇಬ್ಬರು ಬಾಕ್ಸರ್ ಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಆರೋಪಿಗೂ ಬಾಕ್ಸರ್ ನಡುವಿಗೂ ಇರುವ ಸಂಬಂಧದ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿ ಹರ್ ದಯಾಳ್ ಸಿಂಗ್ ಹೇಳಿದ್ದಾರೆ. ವಿಜೇಂದರ್ ಸಿಂಗ್ ಕೋಚ್ ಗುರ್ ಬಕ್ಷ್ ಸಂಧು ಅವರು ವಿಷಯ ಕೇಳಿ ಗಾಬರಿ ವ್ಯಕ್ತಪಡಿಸಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+