ಈ ಸಲ ಸಂಬಳ ಏರಿಕೆ ಶೇ 12ರಷ್ಟು ಮಾತ್ರ

2013-14ರ ಆರ್ಥಿಕ ವರ್ಷದಲ್ಲಿ ಸರಾಸರಿ ಸಂಬಳ ಏರಿಕೆ ಬಗ್ಗೆ ಅನೇಕ ಸಮೀಕ್ಷೆಗಳು ಹೊರಬಿದ್ದಿದ್ದು ಕಳೆದ ಎರಡು ಆರ್ಥಿಕ ವರ್ಷದಲ್ಲಿ ಕಾಣದ ಹೆಚ್ಚಿನ ಬದಲಾವಣೆ ಈ ಬಾರಿ ಸಾಧ್ಯವಿದೆ ಎನ್ನಲಾಗಿದೆ. ವರ್ಷಾರಂಭದಲ್ಲಿ ಸಂಬಳ ಏರಿಕೆ ಟ್ರೆಂಡ್ ಎಲ್ಲಾ ಕಂಪನಿಗಳಲ್ಲೂ ಮುಂದುವರೆದರೂ ವರ್ಷಾಂತ್ಯಕ್ಕೆ ಇಳಿಮುಖವಾಗಲಿದೆ ಎಂದು ಸಮೀಕ್ಷೆ ಹೇಳಿದೆ.
2013 Total Remuneration Survey -- All Industries ಎಂಬ ಶೀರ್ಷಿಕೆ ಅಡಿಯಲ್ಲಿ ಸರಾಸರಿ ಸಂಬಳ ಏರಿಕೆ ಬಗ್ಗೆ ಸಮೀಕ್ಷೆ ನಡೆಸಲಾಗಿದೆ ಶೇ 12ರಷ್ಟು ಏರಿಕೆಯಾಗಲಿದೆ ಎಂದು Mercer ಸಂಸ್ಥೆಯ ನಿರ್ದೇಶಕ ಮುನಿಂದರ್ ಆನಂದ್ ಹೇಳಿದ್ದಾರೆ. ಫಾರ್ಮಾಸ್ಯೂಟಿಕಲ್ ವಲಯದಲ್ಲಿ ಶೇ 12.5 ರಷ್ಟು ಏರಿಕೆ ಕಂಡು ಬರಲಿದೆ. ಹಲವು ಕಂಪನಿಗಳಲ್ಲಿ ಎರಡಂಕಿಯ ಇಂಗ್ರೀಮೆಂಟ್ ಗ್ಯಾರಂಟಿ ಎಂದು ಸಮೀಕ್ಷೆ ಹೇಳಿದೆ.
ಸುಮಾರು 734 ಸಂಸ್ಥೆಗಳ ಆಂತರಿಕ ಬಜೆಟ್ ಆಧಾರದ ಮೇಲೆ ಈ ಸಮೀಕ್ಷೆ ನಡೆಸಲಾಗಿದೆ. ಸಂಬಳ ಏರಿಕೆ ಬಗ್ಗೆ ತಿಳಿದರೂ ನೇಮಕಾತಿ ಬಗ್ಗೆ ಹಲವು ಕಂಪನಿಗಳಿಂದ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಶೇ 72 ರಷ್ಟು ಕಂಪನಿಗಳು ಮಾತ್ರ ಮುಂದಿನ ಆರ್ಥಿಕ ವರ್ಷದಲ್ಲಿ ನೇಮಕಾತಿ ಹೆಚ್ಚಳಕ್ಕೆ ಮುಂದಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಶೇ 84 ರಷ್ಟು ಕಂಪನಿಗಳು ನೇಮಕಾತಿ ಸಂಖ್ಯೆ ಹೆಚ್ಚಳಕ್ಕೆ ಮುಂದಾಗಿದ್ದವು.
ಈ ಬಾರಿಯ ಅಪ್ರೈಸಲ್ ವೃತ್ತದಲ್ಲಿ ಕಾರ್ಯಕ್ಷಮತೆ ಆಧಾರಿತ ಸಂಬಳ ಹಾಗೂ ಬಡ್ತಿ ದೊರೆಯಲಿದೆ. ನೇಮಕಾತಿ ಇನ್ನೂ ಹಲವು ಪ್ರಮುಖ ಸಂಸ್ಥೆಗಳಿಗೆ ತಲೆನೋವಾಗಿ ಮುಂದುವರೆಯಲಿದೆ.
2012-13ರಲ್ಲಿ ಸುಮಾರು ಶೇ 19.30ರಷ್ಟು variable ಬೋನಸ್ ಸಿಗುತ್ತಿತ್ತು. ಈ ಬಾರಿ ಶೇ 25.70ರಷ್ಟು ಸಿಗುವ ಸಾಧ್ಯತೆಯಿದ್ದು, ಟೆಕ್ನಾಲಜಿ, ಫಾರ್ಮಾ ಕಂಪನಿಗಳಲ್ಲಿ ಈ ಪ್ರಮಾಣ ಅಧಿಕವಾಗಿರಲಿದೆ.ಮೊದಲ 6 ತಿಂಗಳಿನಲ್ಲಿ ಸರಾಸರಿ attrition ಪ್ರಮಾಣ ಶೇ 10.1 ನಷ್ಟು ಇರಲಿದೆ ಎಂದು ತಿಳಿದು ಬಂದಿದೆ.
ಭಾರತೀಯ ಕಂಪನಿಗಳು ಪ್ರಸಕ್ತ ಹಣಕಾಸು ಸಾಲಿನಲ್ಲಿ ತನ್ನ ಉದ್ಯೋಗಿಗಳಿಗೆ ಸರಾಸರಿ ಶೇ. 10.3ರಷ್ಟು ಏರಿಕೆ ಮಾಡುವ ಖಾತರಿಯಿದೆ ಎಂದು ಮತ್ತೊಂದು ಸಮೀಕ್ಷೆಯಿಂದ ತಿಳಿದುಬಂದಿದೆ. 2008-09 ಸಾಲಿನಲ್ಲಿನ ಹಣಕಾಸು ಹಿಂಜರಿತದ ಬಳಿಕ ಭಾರತೀಯ ಉದ್ಯೋಗಿಗಳಿಗೆ ಪ್ರಾಪ್ತಿಯಾಗುತ್ತಿರುವ ಅತ್ಯಂತ ಕಡಿಮೆ ಸಂಬಳ ಏರಿಕೆ ಇದಾಗಿದೆ.
ಐಟಿ ಉದ್ಯೋಗಿಗಳಿಗೆ ಈ ವರ್ಷವೂ ಆಶಾದಾಯಕವಾಗಿಲ್ಲ. ವಾರ್ಷಿಕ ಸಂಬಳ ಹೆಚ್ಚಳಗಳು ಅಬ್ಬಬ್ಬಾ ಅಂದರೆ ಶೇ. 9.6ರಷ್ಟಿರಬಹುದು. ಆದರೆ ITeS ಕಂಪನಿಗಳ ಪ್ರಗತಿ ಚೆನ್ನಾಗಿದ್ದು, ಆ ಕ್ಷೇತ್ರದಲ್ಲಿನ ನೌಕರರು ಈ ಬಾರಿ ತುಸು ಹೆಚ್ಚು ಅಂದರೆ ಶೇ. 11ರಷ್ಟು ಸಂಬಳಗಳನ್ನು ಹೆಚ್ಚು ತೆಗೆದುಕೊಳ್ಳಬಹುದಾಗಿದೆ.


Click it and Unblock the Notifications
