ಸ್ಥಳೀಯ ಚುನಾವಣೆ ಮುಗಿಯುತ್ತಿದ್ದಂತೆ ಕೆಜೆಪಿಗೆ ಗುಳೆ

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ಆರ್ ನಿರಾಣಿ ಕೆಜೆಪಿ ಪಕ್ಷದತ್ತ ವಾಲಿರುವುದು ಚುನಾವಣೆ ಸಂದರ್ಭದಲ್ಲೇ ಸ್ಪಷ್ಟವಾಗಿತ್ತು. ಇದೀಗ ಉಮೇಶ್ ಕತ್ತಿ ಮತ್ತು ಬಸವರಾಜ ಬೊಮ್ಮಾಯಿ ಸಹ ಕೆಜೆಪಿಯತ್ತ ಹೆಜ್ಜೆ ಹಾಕುವುದು ನಿಶ್ಚಿತ ಎನ್ನಲಾಗಿದೆ.
ಇವರ ಹಾದಿಯಲ್ಲೇ ಇನ್ನೂ ಅನೇಕರು ಮಾತೃಪಕ್ಷದಿಂದ 'ಪಿತೃ'ಪಕ್ಷದತ್ತ ಜಿಗಿಯುವುದು ಖಚಿತವೆಂದು ಕೆಜೆಪಿ ಮೂಲಗಳು ತಿಳಿಸಿವೆ. 208 ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಮುಗಿಯುತ್ತಿದ್ದಂತೆ ಫಲಿತಾಂಶಕ್ಕೂ ಕಾಯದೆ, ಮಾರ್ಚ್ 11 ರೊಳಗಾಗಿ ಕೆಜೆಪಿ ಸೇರುವ ಕಾರ್ಯಕ್ರಮ ಪೂರ್ಣವಾಗಲಿದೆ ಎಂದು ಆಡಳಿತಾರೂಢ ಬಿಜೆಪಿ ಮೂಲಗಳೂ ತಿಳಿಸಿವೆ.
ಕೆಜೆಪಿ ಅಧ್ಯಕ್ಷ, ಮಾಜಿ ಸಿಎಂ ಯಡಿಯೂರಪ್ಪ ಅವರೂ ಸಹ ಈ ಸಚಿವರ ಮೇಲೆ ಒತ್ತಡ ಹೇರಿದ್ದು, ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿರುವಾಗ ವಿಳಂಬ ಮಾಡದೆ ತಮ್ಮ ಪಕ್ಷ ಸೇರಿಕೊಳ್ಳುವಂತೆ ಅನೇಕ ಶಾಸಕರಿಗೆ ಆದೇಶಿಸಿದ್ದಾರೆ. ಮೂಲಗಳ ಪ್ರಕಾರ ಯಡಿಯೂರಪ್ಪ ಅವರು ಖುದ್ದಾಗಿ ಕೆಲ ಶಾಸಕ/ಸಚಿವರನ್ನು ಭೇಟಿ ಮಾಡಿ, ಕೆಜೆಪಿ ಸೇರಿಕೊಳ್ಳುವಂತೆ ಆಜ್ಞಾಪಿಸಿದ್ದಾರೆ ಎನ್ನಲಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications