ಕ್ರೆಡಿಟ್ ಕಾರ್ಡ್ ಉಜ್ಜಿ ಟಾಟಾ ನ್ಯಾನೋ ಒಯ್ಯಿರಿ

ಟಾಟಾ ಮೋಟರ್ಸ್ ಸಂಸ್ಥೆ ಈ ಹೊಸ ಯೋಜನೆ ಹೊರ ತರುತ್ತಿದ್ದಂತೆ ಕಂಪನಿ ಷೇರುಗಳು ಚೇತರಿಕೆ ಕಂಡಿದೆ. ಬಿಎಸ್ ಇನಲ್ಲಿ ಬುಧವಾರ (ಮಾ.6) ಮಾರುಕಟ್ಟೆ 309.25ರು ನಂತೆ 2.88ಶೇ ರಷ್ಟು ಏರಿಕೆ ಕಂಡಿತ್ತು. ಇದೇ ವೇಳೆ ಎನ್ ಎಸ್ ಇನಲ್ಲಿ 309.40ರು ನಂತೆ ಶೇ 2.96ರಷ್ಟು ಏರಿಕೆಯಾಗಿದೆ.
ಈ ಆಕರ್ಷಕ ಯೋಜನೆ ಪ್ರಕಾರ ಗ್ರಾಹಕರು ಟಾಟಾ ನ್ಯಾನೋ ಬೆಲೆಯ ಸಂಪೂರ್ಣ ಮೊತ್ತವನ್ನು ಪ್ರತಿ ತಿಂಗಳಿನಂತೆ ಪಾವತಿಸಬಹುದು. ಇದಕ್ಕೆ ಯಾವುದೇ ಬಡ್ಡಿದರ ವಿಧಿಸುತ್ತಿಲ್ಲ. ಅರ್ಥಾತ್ ನ್ಯಾನೋ ಈಗ EMIನಲ್ಲೂ ಲಭ್ಯವಿದೆ. 8,333 ರು ಪ್ರತಿ ಲಕ್ಷಕ್ಕೆ EMI ನಂತೆ 12 ತಿಂಗಳುಗಳ ಸ್ಕೀಮ್ ಇದೆ.
ಟಾಟಾ ಕಂಪನಿ ಐದು ಪ್ರಮುಖ ಬ್ಯಾಂಕ್ ಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಆಕ್ಸಿಸ್ ಬ್ಯಾಂಕ್, ಎಚ್ ಎಸ್ ಬಿಸಿ, ಐಸಿಐಸಿಐ, ಕೊಟಕ್ ಮಹೀಂದ್ರಾ ಹಾಗೂ ಸ್ಟಾಟರ್ಡ್ ಚಾರ್ಟ್ರೆಡ್ ಬ್ಯಾಂಕ್. ಈ ಬ್ಯಾಂಕಿನ ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್ ಬಳಸಿ ನ್ಯಾನೋ ಖರೀದಿಸಬಹುದಾಗಿದೆ. ಈ ಹೊಸ ಯೋಜನೆ 26 ನಗರಗಳಲ್ಲಿ 75ಕ್ಕೂ ಅಧಿಕ ಟಾಟಾ ಮೋಟರ್ಸ್ ಡೀಲರ್ ಗಳಲ್ಲಿ ಲಭ್ಯವಿದೆ.
'ಇದು ಗ್ರಾಹಕಸ್ನೇಹಿ ಯೋಜನೆಯಾಗಿದೆ. ಕಾರು ಬುಕ್ ಮಾಡಿ ಹಲವು ದಿನ ಕಾಯುವ ತೊಂದರೆಗೆ ಬ್ರೇಕ್ ಹಾಕುವ ಹೊಸ ವಿಧಾನ ಇದಾಗಿದೆ' ಎಂದು ಟಾಟಾ ಮೋಟರ್ಸ್ ನ ಪ್ರಯಾಣಿಕ ವಾಹನ ಉದ್ಯಮ ಘಟಕದ ಅಧ್ಯಕ್ಷ ರಂಜಿತ್ ಯಾದವ್ ಅವರು ಹೇಳಿದ್ದಾರೆ.
ಈ ಪ್ರಾಯೋಗಿಕ ಯೋಜನೆಯಲ್ಲಿ ಟಾಟಾ ನ್ಯಾನೋ ಕಾರಿಗೆ ತಗುಲುವ ಸಂಪೂರ್ಣ ವೆಚ್ಚವನ್ನು 12 ತಿಂಗಳ EMIನಲ್ಲಿ ಭಾಗಿಸಲಾಗುವುದು ಅದು ಕೂಡಾ ಯಾವುದೇ ಬಡ್ಡಿದರವಿಲ್ಲದೆ, ಗ್ರಾಹಕರು ಸುಲಭವಾಗಿ ವ್ಯವಹಾರ ಮಾಡಬಹುದು.












Click it and Unblock the Notifications