ವಿದ್ಯಾರ್ಥಿನಿಗೆ ಮದ್ಯ ಕುಡಿಸಿ, ರೇಪ್ ಮಾಡಿದ ಪೇದೆ

ಭಾರತೀಯ ಮೀಸಲು ಬೆಟಾಲಿಯನ್ ಕಾನ್ಸ್ ಟೇಬಲ್ ಈ ಕುಕೃತ್ಯವೆಸಗಿದ್ದಾನೆ. ಸರಕಾರಿ ಶಾಲೆಯಲ್ಲಿ 6ನೆ ತರಗತಿ ಓದುತ್ತಿರುವ ಬಾಲಕಿಯ ಮೇಲೆ ಅಟ್ಟಹಾಸ ಮೆರೆದ ಪೇದೆ, ಆಕೆ ಮೇಲೆ ಮಾರ್ಚ್ 2ರಂದು ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರಕಾರಿ ವಿಶ್ರಾಂತಿ ಗೃಹವೊಂದರ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಗೆ ಭಾನುವಾರ ಪ್ರಜ್ಞೆ ಮರಳಿದೆ.
ಆರೋಪಿ IRB ಕಾನ್ಸ್‌ಟೇಬಲ್ ಲುಕ್ಬೊಮ್ ಯೊಂಗಾಮ್ ನನ್ನು ಸ್ಥಳೀಯರು ಸೆರೆ ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಅದೇ ವೇಳೆ ಆಕ್ರೋಶಿತ ಸ್ಥಳೀಯರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಆರೋಪಿ ಪೇದೆಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಭಾನುವಾರ ಸಂಜೆ ಪೇದೆಯನ್ನು ಪೊಲೀಸರು ವೈದ್ಯಕೀಯ ತಪಾಸಣೆಗಾಗಿ ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಉದ್ರಿಕ್ತ ಗುಂಪೊಂದು ಆತನ ಮೇಲೆ ಹಲ್ಲೆ ನಡೆಸಿದಾಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆಯೂ ನಡೆದಿದೆ. ಗಾಯಗೊಂಡ ಆರೋಪಿಗೆ ಪೊಲೀಸ್ ಠಾಣೆಯಲ್ಲಿಯೇ ಸೇನಾ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. (ಪಿಟಿಐ)












Click it and Unblock the Notifications