ಹೈದರಾಬಾದ್ ಸ್ಫೋಟ - ರಾಜ್ಯದ ಮೂವರ ವಿಚಾರಣೆ

ಹೈದರಾಬಾದ್ ನ ಎನ್ಐಎ ಕಚೇರಿ ಬಳಿ ಬೀದರ್ ಮೂಲದವರಾದ ಮೂವರನ್ನು ಬೆಳಗ್ಗೆ 11 ಗಂಟೆಯ ಸುಮಾರಿಗೆ ಬೇಗಂಪೇಟೆ ಪೊಲೀಸರು ವಶಕ್ಕೆ ಪಡೆದಿದ್ದರು. ಬಂಧಿತರು ಅಬ್ದುಲ್ ಗಫಾರ್, ಸೈಯದ್ ಖಾನ್, ಮದನಾರ್ ಎಂದು ತಿಳಿದುಬಂದಿದೆ.
ವಿಚಾರಣೆ ನಡೆಸಿದ ಬಳಿಕ ಇವರನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಬಾಂಬ್ ಸ್ಪೋಟದ ಆರೋಪಿಗಳಿಗೆ ಬಾಂಬ್ ಇಡಲು ಸಹಕರಿಸಿದ್ದಾರೆ ಎಂಬ ಶಂಕೆಯ ಮೇರೆಗೆ ಬಂಧಿಸಲಾಗಿತ್ತು ಎಂದು ತಿಳಿದುಬಂದಿದೆ.
ಆಂಧ್ರಪ್ರದೇಶದ ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅವಳಿ ಬಾಂಬ್ ಸ್ಪೋಟದ ಬಗ್ಗೆ ತನಿಖೆ ನಡೆಸುತ್ತಿವೆ. ಹೈದರಾಬಾದ್ ಬಾಂಬ್ ಸ್ಪೋಟಕ್ಕೆ ಕರ್ನಾಟಕ ಉಗ್ರ ರಿಯಾಜ್ ಭಟ್ಕಳ್ ಯೋಜನೆ ರೂಪಿಸಿದ್ದ ಎಂದು ಈಗಾಗಲೇ ಎನ್ಐಎ ಹೇಳಿದೆ. ರಿಯಾಜ್ ಸಹಚರರಾದ ಅಸಾದುಲ್ಲಾ ಅಕ್ತರ್ ಮತ್ತು ವಕಾಸ್ ಅಲಿಯಾಸ್ ಅಹಮದ್ ಸ್ಪೋಟ ನಡೆಸಿರಬಹುದು ಎಂದು ಎನ್ಐಎ ಶಂಕೆ ವ್ಯಕ್ತಪಡಿಸಿದೆ.
ಹೈದರಾಬಾದ್ ನಲ್ಲಿ ಬಾಂಬ್ ಇಟ್ಟಿರುವುದು 25ರಿಂದ 28ರ ವಯೋಮಾನದವರಾಗಿದ್ದು, ಸ್ಥಳೀಯರ ನೆರವಿನೊಂದಿಗೆ ಕೃತ್ಯ ಎಸಗಿರಬಹುದು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ ಉತ್ತರ ಪ್ರದೇಶದ ರಾಂಚಿಯಲ್ಲೂ ಹೈದರಾಬಾದ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮನ್ಜರ್ ಇಮ್ರಾನ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.












Click it and Unblock the Notifications