ಮೋದಿ ಪ್ರಧಾನಿ ಅಭ್ಯರ್ಥಿ:ದೇಶಕ್ಕೆ ಕಾದಿದೆ ಗಂಡಾಂತರ

ದೊಡ್ಡಬಳ್ಳಾಪುರ/ನವದೆಹಲಿ, ಮಾ 4: ಜ್ಯೋತಿಷ್ಯ ಮತ್ತು ಭವಿಷ್ಯವನ್ನು ಬಹುವಾಗಿ ನಂಬಿರುವ ಭಾರತ ದೇಶದಲ್ಲಿ ಇದು ಯಾವ ಜ್ಯೋತಿಷಿಗಳೂ ಹೇಳಿದ ಹೇಳಿಕೆಯಲ್ಲ. ಇಂಧನ ಸಚಿವ ವೀರಪ್ಪ ಮೊಯ್ಲಿ ಅವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ತರಾಟೆಗೆ ತೆಗೆದುಕೊಂಡ ಪರಿ.

ಗುಜರಾತ್ ಮುಖ್ಯಮಂತ್ರಿ ಒಳ್ಳೆಯದನ್ನು ಬಯಸದ ವ್ಯಕ್ತಿ. ಅವರದ್ದು ಹೊಲಸು ರಾಜಕೀಯ, ಹಾಗಾಗಿ ಅವರ ನಾಲಿಗೆ ಕೂಡಾ ಹೊಲಸು, ಅವರಿಂದ ಬರುವ ಮಾತೆಲ್ಲಾ ಹೊಲಸು ಎಂದು ಮೊಯ್ಲಿ ಮೋದಿಯವರನ್ನು ಟೀಕಿಸಿದ್ದಾರೆ.

ಕೆಟ್ಟ ರಾಜಕಾರಣ ಮಾಡುತ್ತಿರುವ ಮೋದಿಗೆ ಸೋನಿಯಾ ಗಾಂಧಿಯವರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ನರೇಂದ್ರ ಮೋದಿ ಪ್ರಧಾನಿಯಾಗುವ ಕನಸು ಕಾಣುವುದು ಬೇಡ. ಬಿಜೆಪಿಗೆ ಅಧಿಕಾರಕ್ಕೆ ಬರುವುದಿಲ್ಲ.

ಒಂದು ವೇಳೆ ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾದರೆ ಅದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ.ಅವರು ಪ್ರಧಾನಿಯಾದರೆ ದೇಶ ದೊಡ್ಡ ಗಂಡಾಂತರಕ್ಕೆ ಸಿಲುಕಲಿದೆ ಎಂದು ಮೊಯ್ಲಿ, ಮೋದಿ ವಿರುದ್ದ ಹರಿಹಾಯ್ದಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಮೊಯ್ಲಿ, ಕೇಂದ್ರ ಸರಕಾರ ಎಲ್ಲಾ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಸೌಲಭ್ಯ ನೀಡಿ ಮಹಿಳೆಯರ ಅಭಿವೃದ್ದಿಗೆ ಒತ್ತು ನೀಡಿದೆ. ಇದೆಲ್ಲಾ ಸೋನಿಯಾ ಗಾಂಧಿ ಪರಿಶ್ರಮ, ಇಂಥಹ ನಾಯಕಿಯ ಬಗ್ಗೆ ಮಾತನಾಡಲು ಮೋದಿಗೆ ಹಕ್ಕಿಲ್ಲ ಎಂದಿದ್ದಾರೆ.

ಯಾವುದೇ ಬೇಡಿಕೆ ಇಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಬರುವವರನ್ನು ನಾವು ಸ್ವಾಗತಿಸುತ್ತೇವೆ. ಅಸೆಂಬ್ಲಿ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಹೈಕಮಾಂಡಿನ ವಿಚಾರಕ್ಕೆ ಬಿಟ್ಟ ವಿಷಯ ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ನರೇಂದ್ರ ಮೋದಿ ಕಾಂಗ್ರೆಸ್ ಮತ್ತು ಸೋನಿಯಾ ಗಾಂಧಿ ಕುಟುಂಬವನ್ನು ಟೀಕಿಸಿದ್ದಕ್ಕೆ ಕಾಂಗ್ರೆಸ್ ನಾಯಕರ ನೀಡಿರುವ ಪ್ರತಿಕ್ರಿಯೆ ಏನು? ಸ್ಲೈಡಿನಲ್ಲಿ ಓದಿ..

ಬಿ ಕೆ ಹರಿಪ್ರಸಾದ್ (ಪ್ರಧಾನ ಕಾರ್ಯದರ್ಶಿ)

ಬಿ ಕೆ ಹರಿಪ್ರಸಾದ್ (ಪ್ರಧಾನ ಕಾರ್ಯದರ್ಶಿ)

ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಹರಿಪ್ರಸಾದ್, ನರೇಂದ್ರ ಮೋದಿ ಮಾತಿನಲ್ಲಿ ಚುರುಕುವುಳ್ಳವರು. ಗುಜರಾತ್ ರಾಜ್ಯದಲ್ಲಿ ನಡೆದ ಅಭಿವೃದ್ದಿ ಬರೀ ಪೇಪರಿನಲ್ಲಿ. ಮೋದಿ ಮೊದಲು ಪ್ರಧಾನಿಯಾಗುವ ಕನಸು ಕಾಣುವುದನ್ನು ನಿಲ್ಲಿಸಿ ನಂತರ ಕಾಂಗ್ರೆಸ್ ಮತ್ತು ಸೋನಿಯಾ ಬಗ್ಗೆ ಮಾತನಾಡಲಿ.

ಮನೀಸ್ ತಿವಾರಿ (ಪಕ್ಷದ ವಕ್ತಾರ)

ಮನೀಸ್ ತಿವಾರಿ (ಪಕ್ಷದ ವಕ್ತಾರ)

ಮೋದಿ ಸರಿಯಾಗಿದ್ದರೆ ಕೇಶುಭಾಯಿ ಪಟೇಲ್ ಬಿಜೆಪಿಯಿಂದ ದೂರವಾಗುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷ ದೇಶಕ್ಕೆ ನೀಡಿದ ಕೊಡುಗೆ ಬಗ್ಗೆ ಮೋದಿಗೇನು ಗೊತ್ತು? ಅವರಿಗೆ ಗೊತ್ತಿರುವುದು ಸೋನಿಯಾ ಮತ್ತು ರಾಹುಲ್ ಗಾಂಧಿಯನ್ನು ಟೀಕಿಸುವುದು ಮಾತ್ರ.

ರಾಜೀವ್ ಶುಕ್ಲಾ (ಪಕ್ಷದ ವಕ್ತಾರ)

ರಾಜೀವ್ ಶುಕ್ಲಾ (ಪಕ್ಷದ ವಕ್ತಾರ)

ಮೋದಿಯವರಿಗೆ ನೈತಿಕತೆಯಿಲ್ಲ. ಪ್ರಣಬ್ ಮುಖರ್ಜಿ ಪ್ರಧಾನಿಯಾಗ ಬೇಕಿತ್ತೆಂದು ಈಗ ಹೇಳಿಕೆ ನೀಡುತ್ತಿರುವ ಮೋದಿ ಆಗ ಬಾಯಿ ಮುಚ್ಚುಕೊಂಡಿದ್ದು ಏಕೆ? ಅವರ ಹೇಳಿಕೆಯಲ್ಲಾ ಬರೀ ಸುಳ್ಳಿನ ಕಂತೆ. ಕಾಂಗ್ರೆಸ್ ವಿರುದ್ದ ಅಪಪ್ರಚಾರ ಮಾಡುವುದನ್ನು ಬಿಡಲಿ.

ಶಕೀಲ್ ಅಹಮದ್ (ಪ್ರಧಾನ ಕಾರ್ಯದರ್ಶಿ)

ಶಕೀಲ್ ಅಹಮದ್ (ಪ್ರಧಾನ ಕಾರ್ಯದರ್ಶಿ)

ಮೋದಿ ಮೊದಲು ಪಕ್ಷದಲ್ಲಿ ವೈಬ್ರೆಂಟ್ ತಂದು ಬಿಜೆಪಿಯಲ್ಲಿ ಒಗ್ಗಟ್ಟು ತರಲಿ, ಆಮೇಲೆ ಪ್ರಧಾನಿ ಕನಸು ಕಾಣಲಿ. ಸೋನಿಯಾ ಗಾಂಧಿ ಮಾಡಿದ ತ್ಯಾಗದ ಬಗ್ಗೆ ಅವರಿಗೇನು ಗೊತ್ತು?

ಡಾ. ಪರಮೇಶ್ವರ್ (ಕೆಪಿಸಿಸಿ ಅಧ್ಯಕ್ಷ)

ಡಾ. ಪರಮೇಶ್ವರ್ (ಕೆಪಿಸಿಸಿ ಅಧ್ಯಕ್ಷ)

ಮೂರು ಅವಧಿಗೆ ಮುಖ್ಯಮಂತ್ರಿಯಾದರೆ ಅವರೇನೂ ದೊಡ್ಡ ಸಾಧಕರು ಅಂದುಕೊಂಡಿದ್ದಾರೇನು? ದೇಶದಲ್ಲಿ ಕಾಂಗೆಸ್ ಪಕ್ಷಕ್ಕೆ ಶತಮಾನದ ಇತಿಹಾಸವಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಕನಸು ಕಾಣುವುದನ್ನು ಮೋದಿ ಮತ್ತು ಬಿಜೆಪಿಯ ಇತರ ನಾಯಕರು ಬಿಡಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+