ಯಡಿಯೂರಪ್ಪ ಈ ಮಟ್ಟಕ್ಕೆ ಇಳಿಯಬಾರದಿತ್ತು

ಸದಾನಂದ ಗೌಡ, ಜಗದೀಶ್ ಶೆಟ್ಟರನ್ನು ನಾನೇ ಮುಖ್ಯಮಂತ್ರಿ ಮಾಡಿದ್ದು ಎಂದು ಬಿಎಸ್ ಯಡಿಯೂರಪ್ಪ ಅವರು ಹೇಳುವುದು ಸರಿಯಲ್ಲ. ಮುಖ್ಯಮಂತ್ರಿ ಆಯ್ಕೆ, ರಾಜ್ಯದ ಯೋಜನೆಗಳ ಅನುಷ್ಠಾನದ ಬಗ್ಗೆ ಪಕ್ಷದ ಹಿರಿಯರ ನಿರ್ಣಯವೇ ಅಂತಿಮವಾಗಿರುತ್ತದೆ. ಪ್ರಾದೇಶಿಕ ಪಕ್ಷ ಸೇರಿದ ಮೇಲೆ ರಾಷ್ಟ್ರೀಯ ಪಕ್ಷಗಳ ಕಾರ್ಯ ವೈಖರಿ ಅವರು ಮರೆತ ಹಾಗೆ ಕಾಣುತ್ತದೆ ಎಂದು ಸದಾನಂದ ಗೌಡ ಎಚ್ಚರಿಸಿದ್ದಾರೆ.
ರಾಜ್ಯದ ಯೋಜನೆಗೆ ಯಡಿಯೂರಪ್ಪನವರು ಸರಕಾರ ಖಜಾನೆಯ ಹಣವನ್ನೇ ಬಳಸಿಕೊಂದ್ದಾರೆಯೇ ಹೊರತು ಶಿಕಾರಿಪುರದಿಂದ ಹಣ ತಂದು
ಅಭಿವೃದ್ಧಿ ಮಾಡಿಲ್ಲ ಎಂಬುದನ್ನು ಮರೆಯಬಾರದು. ಸ್ಥಳೀಯ ಚುನಾವಣೆ ನಂತರ ಕೆಜೆಪಿ ಧೂಳಿಪಟವಾಗಲಿದೆ. ಎಂದು ಸದಾನಂದ ಗೌಡ ಹೇಳಿದರು.
ಸಂಪುಟ ವಿಸ್ತರಣೆ ಬೇಕಿಲ್ಲ: ಮುಂದಿನ ಎರಡು ತಿಂಗಳಲ್ಲಿ ಸರ್ಕಾರ ಐದು ವರ್ಷ ಪೂರೈಸಲಿದೆ. ಸರ್ಕಾರಕ್ಕೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಸ್ಥಳೀಯಾಡಳಿತ ಚುನಾವಣೆ ನಂತರ ವಿಧಾನಸಭೆ ಚುನಾವಣೆಗೆ ಸಿದ್ಧವಾಗಬೇಕಿದೆ. ಈ ನಡುವೆ ಸಂಪುಟ ವಿಸ್ತರಣೆ ಸಾಹಸಕ್ಕೆ ಶೆಟ್ಟರ್ ಅವರು ಕೈ ಹಾಕುವ ಸಾಧ್ಯತೆಯಿಲ್ಲ ಎಂದರು.
ಚುನಾವಣೆ ಮುಗಿಯುವವರೆಗೆ ಈಶ್ವರಪ್ಪನವರೇ ಅಧ್ಯಕ್ಷರಾಗಿ ಮುಂದುವರೆಯಲಿ. ನಾನು ಎಂದು ಅಧಿಕಾರಕ್ಕಾಗಿ ಆಸೆ ಪಟ್ಟವನಲ್ಲ. ರಾಜ್ಯಾಧ್ಯಕ್ಷ ಪಟ್ಟ ಬೇಕು ಎಂದು ಯಾರನ್ನು ಕೇಳಿಲ್ಲ ಎಂದು ಡಿವಿಎಸ್ ಸ್ಪಷ್ಟಪಡಿಸಿದರು.
ಆಪರೇಷನ್ ಕಮಲದಿಂದ ಬಿಜೆಪಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು ನಿಜ, ಆದರೆ, ಆಪರೇಷನ್ ಕಮಲ ಹುಟ್ಟಿ ಹಾಕಿದವರು ಈಗ ಬಿಜೆಪಿಯಲ್ಲಿಲ್ಲದಿರುವುದು ಒಳ್ಳೆಯದು. ಯಡಿಯೂರಪ್ಪ ಅವರನ್ನು ಬಿಜೆಪಿ ಹೊರಹಾಕಲಿಲ್ಲ. ತಮ್ಮ ತಪ್ಪಿನ ಅರಿವಾಗಿ ಅವರೇ ಪಕ್ಷ ತೊರೆದರು. ಶಿಕಾರಿಪುರದಿಂದ ಸಿಎಂ ಸ್ಥಾನಕ್ಕೇರುವ ಮಟ್ಟಕ್ಕೆ ಅವರನ್ನು ಬೆಳೆಸಿದ್ದು ಬಿಜೆಪಿ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.












Click it and Unblock the Notifications