ಗಾಲಿ ರೆಡ್ಡಿ ಆಪ್ತ ಖಾರದಪುಡಿ ಮೇಲೆ ಸಿಬಿಐ ದಾಳಿ

Reddy Aide Kharadapudi Mahesh
ಹೊಸಪೇಟೆ, ಫೆ.28: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತಂಡ ಗುರುವಾರ(ಫೆ.28)ಗಾಲಿ ಜನಾರ್ದನ ರೆಡ್ಡಿ ಆಪ್ತ ಖಾರದಪುಡಿ ಮಹೇಶ್ ಅವರ ಮನೆ ಹಾಗೂ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ.

ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ಜನಾರ್ದನ ರೆಡ್ಡಿ ಅವರ ಆಪ್ತರ ಮೇಲೆ ಸಿಬಿಐ ದಾಳಿ ಮುಂದುವರೆದಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ. ಬೆಳಗ್ಗಿನಿಂದ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಈ ನಡುವೆ ರೆಡ್ಡಿ ಬೆಂಬಲಿಗರಾದ ಖಾರದಪುಡಿ ಮಹೇಶ್, ಸ್ವಸ್ತಿಕ್ ನಾಗರಾಜ್ ಅವರು ಹೊಸಪೇಟೆಯಿಂದ ನಾಪತ್ತೆಯಾಗಿದ್ದಾರೆ.

ಸಿಬಿಐ ಎಸ್ಪಿ ಸುಬ್ರಮಣ್ಯೇಶ್ವರರಾವ್ ಅವರ ನ್ನೇತೃತ್ವದ 7 ಮಂದಿ ಅಧಿಕಾರಿಗಳ ಸಿಬಿಐ ತಂಡ ಹೊಸಪೇಟೆಯಲ್ಲಿರುವ ರೆಡ್ಡಿಗಳ ಆಪ್ತರಾದ ಖಾರದಪುಡಿ ಮಹೇಶ್, ಸ್ವಸ್ತಿಕ್ ನಾಗರಾಜ್ ಅವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ, ಹಲವಾರು ಮಹತ್ತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮಹೇಶ್ ಮನೆಯಲ್ಲಿ ಲಕ್ಷಗಟ್ಟಲೆ ಮೌಲ್ಯದ ನಗದು ಸಿಕ್ಕಿದೆ.

ಬಳ್ಳಾರಿ ನಗರ ನಂತರ ಹೊಸಪೇಟೆ, ತೋರಣಗಲ್ಲು, ಹೊಸಪೇಟೆ ಹಾಗೂ ಸಂಡೂರಿನಲ್ಲಿ ದಾಳಿ ನಡೆದಿದೆ. ಸಂಡೂರಿನ ಟೀಚರ್ಸ್ ಕಾಲೋನಿಯಲ್ಲಿರುವ ಈ. ಮಂಜುನಾಥ್ ಎಂಬುವರ ಮನೆ ಮೇಲೆ ದಾಳಿ ನಡೆಸಲಾಗಿದೆ.

2010ರಲ್ಲಿ ಸಿಐಡಿ ದಾಳಿಗೆ ತುತ್ತಾಗಿದ್ದ ಈ ಇಬ್ಬರು ಬಂಟರು ಆಗ ಕೂಡಾ ತಲೆ ಮರೆಸಿಕೊಂಡಿದ್ದರು. ನಾಗರಾಜ್ ಅವರು ಸ್ವಸ್ತಿಕ್ ಸ್ಟೀಲ್ ನ ಮಾಲೀಕ ಹಾಗೂ ಮಹೇಶ್ ಶ್ರೀಲಕ್ಷ್ಮಿ ವೆಂಕಟೇಶ್ವರ ಮಿನಿರಲ್ಸ್ ಮಾಲೀಕರಾಗಿದ್ದಾರೆ. 2011ರಲ್ಲಿ ನೋಟಿಸ್ ಜಾರಿ ಮಾಡಿದ ಮೇಲೆ ಪತ್ತೆಯಾಗಿದ್ದರು. ಈಗ ಮತ್ತೊಮ್ಮೆ ರೆಡ್ಡಿ ಆಪ್ತರಿಗೆ ಸಿಬಿಐ ತಂಡ ಚುರುಕು ಮುಟ್ಟಿಸಿದೆ.

ರೆಡ್ಡಿ ಸಹೋದರರ ಆಪ್ತ ಖಾರದಪುಡಿ ಮಹೇಶ್, ಗಣಿ ಕಂಪೆನಿ ಮಾಲಕ ಹಾಗೂ ಅದಿರು ಸಾಗಣೆದಾರ. ಅಕ್ರಮ ಗಣಿಗಾರಿಕೆ ಸಂಬಂಧಿಸಿದ ಲೋಕಾಯುಕ್ತರ ವರದಿಯಲ್ಲಿ ಈತನ ಹೆಸರು ಪ್ರಸ್ತಾಪಿಸಲಾಗಿದೆ.

2009-10ರಲ್ಲಿ ವಿವಿಧ ಅಧಿಕಾರಿಗಳಿಗೆ ಖಾರದಪುಡಿ ಮಹೇಶ್ ನಿಂದ ಸುಮಾರು 2.5 ಕೋಟಿ ಲಂಚ ಸಲ್ಲಿಕೆ ಯಾಗಿದೆ ಎಂದು ಆರೋಪಿಸಲಾಗಿದೆ. ಅದೇ ರೀತಿ ಸ್ವಸ್ತಿಕ್ ಸ್ಟೀಲ್ ಹೆಸರಲ್ಲಿ ಕಂಪೆನಿ ನಡೆಸುತ್ತಿ ರುವ ಕೆ.ವಿ. ನಾಗರಾಜ್ ಶೆಟ್ಟಿ ಅಲಿಯಾಸ್ ಸ್ವಸ್ತಿಕ್ ನಾಗರಾಜ್ ಸಹ ಅದಿರು ಸಾಗಣೆದಾರ.

ರೆಡ್ಡಿಗಳ ಮತ್ತೊಬ್ಬ ಆಪ್ತ ಎಸ್‌ಟಿಡಿ ಮಂಜ ಅವರ ಸಂಡೂರಿನ ಟೀಚರ್ಸ್‌ ಕಾಲನಿ ಯಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದ ಸಿಬಿಐ ಪೊಲೀಸರು, ಆತನ ಹಣಕಾಸಿನ ವಹಿವಾಟು ಹಾಗೂ ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದಾರೆ.

ಸಿಬಿಐ ಅಧಿಕಾರಿಗಳು ರೆಡ್ಡಿ ಸಹೋದರರ ಮನೆ, ವ್ಯವಹಾರ ಸ್ಥಳ, ಕುಟುಂಬದ ಸದಸ್ಯರಲ್ಲದೇ, ಆಪ್ತರು, ವ್ಯವಹಾರ ಪಾಲುದಾರರನ್ನು ವಿಚಾರಣೆಗೊಳಪಡಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಕಲೆ ಹಾಕುತ್ತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+