ಕ್ರಿಕ್ ನೊಬೆಲ್ ಪ್ರಶಸ್ತಿ ಮಾರಾಟಕ್ಕಿದೆ, ಖರೀದಿಸಿ

francis-crick-dna-nobel-prize-up-for-sale-good-cause
ಲಂಡನ್, ಫೆ.27: ಅಪರೂಪದ ವಸ್ತುಗಳನ್ನು ಸಂಗ್ರಹಿಸುವವರಿಗೆ ನೊಬೆಲ್ ಅವಕಾಶ ಒದಗಿ ಬಂದಿದೆ. ಆದರೆ ಇದಕ್ಕಾಗಿ ಕನಿಷ್ಠ 1.3 ಕೋಟಿ ರೂ. ತೆರಬೇಕಾದೀತು ಎಂಬುದನ್ನು ಮರೆಯಬೇಡಿ.

ಏನಪಾ ಅಂದರೆ Francis Crick (1916-2004) ಎಂಬ ವಿಜ್ಞಾನಿಗೆ ಸೇರಿದ ನೊಬೆಲ್ ಪ್ರಶಸ್ತಿ ಪದಕವನ್ನು ಮಾರಾಟಕ್ಕೆ ಇಡಲಾಗಿದೆ. ನ್ಯೂಯಾರ್ಕಿನ Heritage Auction Houseನಲ್ಲಿ ಏಪ್ರಿಲ್ 10ರಂದು ಈ ಹರಾಜು ಪ್ರಕ್ರಿಯೆ ನಡೆಯಲಿದೆ. ಅಂದಹಾಗೆ ಮಾರಾಟವಾಗುತ್ತಿರುವ ಮೊದಲ ನೊಬೆಲ್ ಪ್ರಶಸ್ತಿ ಇದಾಗಿದೆ.

ಇತ್ತೀಚೆಗೆ ಹೆಚ್ಚು ಚಾಲ್ತಿಗೆ ಬಂದಿರುವ/ ಅಪರಾಧ ಲೋಕದಲ್ಲಿ ತನಿಖಾಧಿಕಾರಿಗಳಿಗೆ ನಿರ್ಣಾಯಕ ಸುಳಿವು ನೀಡುತ್ತಿರುವ ಡಿಎನ್ಎ ರಚನೆಯನ್ನು (Crick-Watson DNA helix) ಕಂಡುಹಿಡಿದಿದ್ದಕ್ಕಾಗಿ 1962ರಲ್ಲಿ ಕ್ರಿಕ್ ಅವರಿಗೆ ಈ ನೊಬೆಲ್ ಪ್ರಶಸ್ತಿ ಸಂದಾಯವಾಗಿತ್ತು.

ಈ ಪ್ರಶಸ್ತಿ ಪದಕದ ಜತೆಗೆ ಪ್ರಯೋಗಾಲಯದಲ್ಲಿ ಕ್ರಿಕ್ ಧರಿಸುತ್ತಿದ್ದ ಮೇಲುಡುಪು, ಪುಸ್ತಕಗಳು ಮತ್ತಿತರ ಆಪ್ತ ವಸ್ತುಗಳನ್ನು ಕ್ರಿಕ್ ಕುಟುಂಬಸ್ಥರು ಮಾರಾಟಕ್ಕಿಟ್ಟಿದ್ದಾರೆ. ಯಾಕೆ ಅಂತಹ ಅನಿವಾರ್ಯತೆ ಏನಿತ್ತು ಅವರಿಗೆ ಅಂದರೆ...

Francis Crick Institute ಎಂಬ ಸಂಶೋಧನಾ ಸಂಸ್ಥೆಯೊಂದನ್ನು 2015ರ ವೇಳೆಗೆ ಹೊಸದಾಗಿ ತೆರೆಯಲು ಕ್ರಿಕ್ ಕುಟುಂಬಸ್ಥರು ನಿರ್ಧರಿಸಿದ್ದಾರೆ. ಇದನ್ನು ಸ್ವಯಂ-ಪೂರೈಸಿಕೊಳ್ಳಲು ಈ ಮಾರ್ಗ ಅನುಸರಿಸಿದ್ದಾರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+