ಕೆಎಚ್ ಮುನಿಯಪ್ಪ ಪುತ್ರಿ ರೂಪಾ ರಾಜಕೀಯಕ್ಕೆ ಎಂಟ್ರಿ

ಮಗಳಿಗಾಗಿ ಹಳಿ ಹಾಕುತ್ತಿರುವ ಮುನಿಯಪ್ಪ: ಹಿಂದಿನ ರೈಲ್ವೆ ಸಚಿವ ಕೆಎಚ್ ಮುನಿಯಪ್ಪ ಅವರು ಕೋಲಾರದ ಮಟ್ಟಿಗೆ ಯಾರು (ಅದರಲ್ಲೂ ಚಿಂತಾಮಣಿಯ ಡಾ. ಸುಧಾಕರ್) ಏನೇ ಹೇಳಿದರೂ ಅನಭಿಶಕ್ತ ನಾಯಕರೇ. ರೈಲ್ವೆ ಸಚಿವರಾಗಿ ಹೆಚ್ಚು ಚಾಲ್ತಿಯಲ್ಲಿರುವ ಆದರೆ ಜಿಲ್ಲೆಗಾಗಿ ಏನೂ ಮಾಡದ ಆದರೆ ಈಗಿನ ವಿಧಾನಸಭೆ ಚುನಾವಣೆಗಾಗಿ 2 ವರ್ಷಗಳ ಹಿಂದೆಯೇ ಮಗಳ ರಾಜಕೀಯ ಮಾರ್ಗದಲ್ಲಿ ಹಳಿ ಹಾಸುವ ಕಾರ್ಯವನ್ನು ಆರಂಭಿಸಿದ್ದರು.
ಯಥಾ ಪಿತಾ ತಥಾ ಪುತ್ರಿ: ಅದರಂತೆ ಈಗ ಮಾರಿಕುಪ್ಪಂ ಮತ್ತು ಬೆಂಗಳೂರು ಮಧ್ಯೆ ದಿನಾ ಒಂದು ಹೊಸ ಪ್ರಯಾಣಿಕ ರೈಲು ಮತ್ತು ಕಳೆದ ವರ್ಷ ತಾವೇ ಘೋಷಿಸಿದ್ದ ಕೋಲಾರ ಕೋಚ್ ಫ್ಯಾಕ್ಟರಿಯನ್ನು ಈ ಬಾರಿ ಜಾರಿಗೊಳಿಸಲು ಸರ್ವಸಿದ್ಧತೆ ನಡೆಸಿದ್ದಾರೆ. ಸರಿ ಇದಕ್ಕೂ ಪುತ್ರಿ ರೂಪಾ ರಾಜಕೀಯಕ್ಕೆ ಬರುವುದಕ್ಕೂ ಏನಪ್ಪಾ ಸಂಬಂಧ ಅಂದರೆ ರೂಪಾ ಈ ಬಾರಿ ಕೆಜಿಎಫ್ ನಿಂದ ಕಣಕ್ಕಿಳಿಯಲಿದ್ದಾರೆ. ಮುನಿಯಪ್ಪ ಅವರಿಗೆ ಒಬ್ಬ ಪುತ್ರ ಮತ್ತು ನಾಲ್ವರ ಪುತ್ರಿಯರು ಇದ್ದಾರೆ.
ಸತತವಾಗಿ 6 ಬಾರಿ ಕೋಲಾರದಿಂದ ಸಂಸದರಾಗಿ ಆಯ್ಕೆಯಾಗಿ, ಕಾಂಗ್ರೆಸ್ಸಿನಲ್ಲಿ ತಳವೂರಿರುವ 65 ವರ್ಷದ ಕೆಎಚ್ ಮುನಿಯಪ್ಪ ಅವರು ಸ್ವಹಿತಾಸಕ್ತಿಯಲ್ಲಿ ಈ ಬಾರಿ ರೈಲ್ವೆ ಸಚಿವ ಬನ್ಸಾಲ್ ಅವರಿಂದ ಕೋಲಾರದ ಹೆಸರಿನಲ್ಲಿ ಒಂದಷ್ಟು ಲಾಭ ಮಾಡಿಕೊಂಡಿದ್ದಾರೆ. ಜತೆಗೆ, ಕೈಗಾರಿಕಾ ಸಚಿವರಾಗಿಯೂ ಕೆಜಿಎಫ್ ತಾಲೂಕಿನತ್ತ ಕಣ್ಣುನೆಟ್ಟಿದ್ದಾರೆ. ಅಲ್ಲಿಗೆ ಯಥಾ ಪಿತಾ ತಥಾ ಪುತ್ರಿ ಎನ್ನುವ ಹಾಗೆ ರೂಪಾ ಶಶಿಧರ್ ಅವರು ಚುನಾವಣೆ ಮೇಲೆ ಚುನಾವಣೆ ಗೆಲ್ಲಲು ಅಖಾಡ ಸಿದ್ಧಮಾಡಿಕೊಂಡಿದ್ದಾರೆ. ಮತದಾರ ಏನನ್ನುತ್ತಾನೋ ನೋಡಬೇಕು!?












Click it and Unblock the Notifications