ಮಕ್ಕಳ ಸರಣಿ ಹಂತಕಿ, ಕ್ರಿಮಿನಲ್ ನಂ.1

Victorian 'Angel Maker' killed 400 babies
ಲಂಡನ್, ಫೆ.24: ಬ್ರಿಟನ್ನಿನ ನಂ.1 ಕ್ರಿಮಿನಲ್ ಯಾರು ಎಂಬ ಪ್ರಶ್ನೆಯನ್ನು ಹುಡುಕಿದ ಅಧಿಕಾರಿಗಳಿಗೆ ಸಿಕ್ಕ ಉತ್ತರ ಕಂಡು ಶಾಕ್ ಆಗಿದೆ. 'ಏಂಜೆಲ್ ಮಕೆರ್' ಎಂದು ಕರೆಯಲ್ಪಡುತ್ತಿದ್ದ ಸಿರಿಯಲ್ ಕಿಲ್ಲರ್ ಮಹಿಳೆ ಕ್ರೈಂ ರೇಟ್ ನಲ್ಲಿ ಎಲ್ಲರಿಗಿಂತ ಮುಂದಿದ್ದಾಳೆ ಎಂದು ತಿಳಿದು ಬಂದಿದೆ.

1770 ರಿಂದ 1934ರ ತನಕದ ಸುಮಾರು 2.5 ಮಿಲಿಯನ್ ಕ್ರಿಮಿನಲ್ ರೆಕಾರ್ಡ್ ಗಳನ್ನು ಆನ್ ಲೈನ್ ಆರ್ಕೈವ್ ಗೆ ಸೇರಿಸುವ ಕಾರ್ಯದಲ್ಲಿ ನಿರತರಾಗಿದ್ದ ಪೊಲೀಸ್ ಅಧಿಕಾರಿಗಳಿಗೆ ಏಂಜೆಲ್ ಮಕೆರ್ ಬಗ್ಗೆ ತಿಳಿದು ಬಂದಿದೆ. ಏಂಜೆಲ್ ಮಕೇರ್ ಎಂದು ಕರೆಯಲ್ಪಡುತ್ತಿದ್ದ ಸರಣಿ ಹಂತಕಿ ಅಮೇಲಿಯಾ ಡೈಯರ್ 19ನೇ ಶತಮಾನದ ಕ್ರಿಮಿನಲ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾಳೆ.

ಅಮೇಲಿಯಾ ಡೈಯರ್ ಸುಮಾರು 400ಕ್ಕೂ ಅಧಿಕ ಮಕ್ಕಳ ಕೊಲೆ ಮಾಡಿದ ದಾಖಲೆ ಹೊಂದಿದ್ದಾಳೆ. ಹಣ ಪಡೆದು ಹಸುಳೆಗಳ ಕುತ್ತಿಗೆ ಕುಯ್ಯುತ್ತಿದ್ದ ಡೈಯರ್ ನಂತರ ಮಕ್ಕಳನ್ನು ಥೇಮ್ಸ್ ನದಿಗೆ ಹಾಕಿಬಿಡುತ್ತಿದ್ದಳು. ಸುಮಾರು 30ಕ್ಕೂ ಅಧಿಕ ವರ್ಷ ಈ ಕೃತ್ಯವನ್ನು ಎಸಗಿದ್ದಾಳೆ.

ಅನೈತಿಕ ಸಂಬಂಧದಿಂದ ಹುಟ್ಟಿದ ಮಗು, ಕಾಮಕ್ಕೆ ಆತುರವಾಗಿ ಹುಟ್ಟಿದ ಅನಾಥ ಶಿಶುಗಳೇ ಆಕೆಯ ಟಾರ್ಗೆಟ್ ಆಗುತ್ತಿತ್ತು. ವೃತ್ತಿಪರ ಸರಣಿ ಹಂತಕಿಯಾಗಿದ್ದ ಡೈಯರ್ ಎಂದೂ ಕೂಡಾ ತನ್ನ ಕಾರ್ಯ ಎಸಗುವಾಗ ವಿಚಲಿತಳಾಗುತ್ತಿರಲಿಲ್ಲ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+