ವಿಪ್ರೋ ಪ್ರೇಮ್‌ಜಿಗೆ 12300 ಕೋಟಿ ಸಲಾಂ ಹೇಳೋಣ!

ಬೆಂಗಳೂರು, ಫೆ.23: ಯಾರ ಕೈಗುಣ ಹೇಗೋ ಬಲ್ಲವರಾರು? ವಿಪ್ರೋ ಸಾಫ್ಟ್‌ವೇರ್ ಕಂಪನಿ ಅಧ್ಯಕ್ಷ ಅಚ್ಚ ಕನ್ನಡಿಗ ಅಜೀಂ ಪ್ರೇಮ್‌ ಜಿ ಅವರು 12,300 ಕೋಟಿ ರೂ. ದಾನ ನೀಡಿದ್ದಾರೆ. ಇದರಿಂದ ಇನ್ನೂ ನೂರಾರು ಪ್ರೇಮ್ ಜಿಗಳು ಹುಟ್ಟಿಕೊಂಡು, ಸಮಾಜಕ್ಕೆ ನೀರೆರೆಯುವಂತಾಗಲಿ. ಏಕೆಂದರೆ, ಕೆರೆಯ ನೀರನು ಕೆರೆಗೆ ಚಲ್ಲಿರೋ ಎಂದಿದ್ದಾರೆ ದಾಸರು.

ಹೃದಯ ಶ್ರೀಮಂತ ಅಜೀಂ ಪ್ರೇಮ್‌ ಜಿ ಅವರು ಈಗ ಭಾರತದಲ್ಲಿ ಅತಿದೊಡ್ಡ ದಾನಿ ಎನಿಸಿಕೊಂಡಿದ್ದಾರೆ. ಪ್ರೇಮ್‌ ಜಿ ಅವರು ತಮ್ಮ ಪಾಲಿಗೆ ಸೇರಿರುವ ವಿಪ್ರೋ ಸಮೂಹದ 12,300 ಕೋಟಿ ರೂ. ಮೌಲ್ಯದ ಶೇ. 12ರಷ್ಟು ಷೇರುಗಳನ್ನು ತಮ್ಮದೇ ದತ್ತಿ ಸಂಸ್ಥೆಗೆ ವರ್ಗಾಯಿಸಿದ್ದಾರೆ.

Bangalore Wipro Azim Premji pledges 12300 cr Rs to APF foundation

'ಸುಸ್ಥಿರ ಸಮಾಜ ನಿರ್ಮಾಣ' ಆಶಯದೊಂದಿಗೆ 'ಅಜೀಂ ಪ್ರೇಮ್‌ ಜಿ ಪ್ರತಿಷ್ಠಾನ' ಮೂಲಕ ಈ ದತ್ತಿ ನಿಧಿಯನ್ನು ವಿವಿಧ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುತ್ತಿದೆ.

ಈ ಷೇರುಗಳ ವರ್ಗಾವಣೆ ಮೂಲಕ, ವಿಪ್ರೋದಲ್ಲಿ ಅಜೀಂ ಪ್ರೇಮ್‌ ಜಿ ಫೌಂಡೇಷನ್ ಹೊಂದಿರುವ ಒಟ್ಟಾರೆ ಷೇರು ಪಾಲು ಶೇ 19.93ಕ್ಕೇರಿದೆ. ಮೂರು ವರ್ಷಗಳ ಹಿಂದೆ ಈ ದತ್ತಿ ಸಂಸ್ಥೆಗೆ ವಿಪ್ರೋ ಸಮೂಹದ ಶೇ 8.7ರಷ್ಟು ಷೇರುಗಳನ್ನು ವರ್ಗಾಯಿಸಲಾಗಿತ್ತು.

ಪ್ರತಿಷ್ಠಾನವು ಪ್ರಮುಖವಾಗಿ ಕರ್ನಾಟಕ, ಆಂಧ್ರ ಪ್ರದೇಶ, ಮಧ್ಯ ಪ್ರದೇಶ, ಪುದುಚೇರಿ, ರಾಜಸ್ತಾನ, ಬಿಹಾರ, ಛತ್ತೀಸ್‌ ಗಡ ಮತ್ತು ಉತ್ತರಾ ಖಂಡನಲ್ಲಿ ಅಲ್ಲಿನ ಸರ್ಕಾರಗಳ ಪಾಲುದಾರಿಕೆಯಲ್ಲಿ ಗ್ರಾಮೀಣ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಶ್ರಮಿಸುತ್ತಿದೆ. ಈ ಪ್ರತಿಷ್ಠಾನದಡಿ ಬೆಂಗಳೂರಿನಲ್ಲಿ ಅತ್ಯುತ್ತಮ ಗುಣಮಟ್ಟದ ಅಜೀಂ ಪ್ರೇಮ್‌ ಜಿ ವಿಶ್ವವಿದ್ಯಾಲಯವೂ ಕಾರ್ಯನಿರ್ವಹಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+