ಬಾಂಬ್ ಸ್ಫೋಟ ಶಂಕಿತರ ರೇಖಾಚಿತ್ರ ಬಿಡುಗಡೆ

ಉತ್ತರ ಪ್ರದೇಶ ಮೂಲದ ತಬ್ರೆಲ್ ಮತ್ತು ಜಾರ್ಖಂಡ್ ಮೂಲದ ವಾಕಾಸ್ (26) ಶಂಕಿತ ಉಗ್ರರಾಗಿದ್ದಾರೆ. ಇವರು ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಗೆ ಸೇರಿದವರಾಗಿದ್ದು, ಹೈದರಾಬಾದ್ ನಲ್ಲಿ ನೆಲೆಸಿ ಅಲ್ಲಿಂದಲೇ ಸ್ಫೋಟದ ಯೋಜನೆ ತಯಾರಿಸಿದ್ದರು ಎಂದು ತಿಳಿದುಬಂದಿದೆ.
ನಾಲ್ಕು ದಿನದ ಹಿಂದೆಯೇ ಸ್ಫೋಟ ನಡೆಸಲು ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಬಾಂಬ್ ಸ್ಫೋಟಿಸಿದ ಪ್ರದೇಶದ ಸಿಸಿಟಿವಿ ಸಂಪರ್ಕಗಳನ್ನು ನಾಲ್ಕು ದಿನದ ಹಿಂದೆಯೇ ಕಡಿತಗೊಳಿಸಿದ್ದರು. ಸ್ಥಳೀಯ ಸಂಚಾರಿ ಪೊಲೀಸರಿಗೆ ಸಿಸಿಟಿವಿ ನಿಷ್ಕ್ರಿಯವಾಗಿರುವುದು ತಿಳಿದಿತ್ತು ಎಂಬ ಅನುಮಾನ ವ್ಯಕ್ತವಾಗಿದೆ.
ಲಷ್ಕರ್ ಭಯೋತ್ಪಾದಕ ಸಂಘಟನೆ ಉಗ್ರ ರಿಯಾಜ್ ಭಟ್ಕಳ್ ಮೇಲೂ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಉಗ್ರ ಕಸಬ್ ಮತ್ತು ಅಫ್ಜಲ್ ಗುರು ಗಲ್ಲುಶಿಕ್ಷಗೆ ಪ್ರತಿಕಾರವಾಗಿ ದಾಳಿ ನಡೆಸಲಾಗಿದೆ ಎಂದು ಅಂದಾಜಿಸಲಾಗಿದೆ. (ಬಾಂಬ್ ಸ್ಫೋಟ ಚಿತ್ರಗಳಲ್ಲಿ )












Click it and Unblock the Notifications