ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಟೈಗರ್' ತಲೆ ಎತ್ತಲು ಬಾಲ ಸ್ಕೆಚ್ ಹಾಕಿದ್ದು ಏಕೆ?

By Mahesh
|
Google Oneindia Kannada News

ಬೆಂಗಳೂರು, ಫೆ.22: ನಿವೃತ್ತ ಎಸಿಪಿ' ಟೈಗರ್' ಅಶೋಕ್ ಕುಮಾರ್ ಅವರ ಹತ್ಯೆಗೆ ಸಂಚು ರೂಪಿಸಿದ್ದವರನ್ನು ಸೆರೆ ಹಿಡಿಯಲಾಗಿದೆ. ಆದರೆ, ಸಂಚಿನ ಹಿಂದಿನ ಉದ್ದೇಶ ಏನು? ಕಳ್ಳರು, ಕೊಲೆಗಡುಕರನ್ನು ಪರಿವರ್ತನೆಗೊಳಿಸಿ ಸಮಾಜ ತಿದ್ದುವ ಕೆಲಸಕ್ಕೆ ಮುಂದಾಗಿದ್ದ ಅಶೋಕ್ ಅವರ ಮೇಲೆ ಬಾಲ ಸ್ಕೆಚ್ ಹಾಕಿದ್ದು ಏಕೆ? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಬಿ.ಬಿ ಅಶೋಕ್ ಕುಮಾರ್ ಅವರು 'ಎನ್ ಕೌಂಟರ್' ಸ್ಪೆಷಲಿಸ್ಟ್ ಆಗಿದ್ದರು. ಆದರೂ ರೌಡಿಗಳಿಗೆ ಶಿಕ್ಷೆಯಾದ ಮೇಲೆ ಅವರನ್ನು ಬದಲಾಯಿಸಿ ಸರಿದಾರಿಗೆ ತರುವ ಕೆಲಸಕ್ಕೆ ಕೈ ಹಾಕಿದ್ದರು. ಇದೇ ಸಮಯಕ್ಕೆ 90ರ ದಶಕದಲ್ಲಿ ಬೆಂಗಳೂರು ಪೊಲೀಸರನ್ನು ಕಾಡಿದ್ದ ರೌಡಿಶೀಟರ್ ಡೆಡ್ಲಿ ಸೋಮ ದಿನದಿಂದ ದಿನಕ್ಕೆ ನಟೋರಿಯಸ್ ಆಗಿ ಬೆಳೆಯುತ್ತಿರುತ್ತಾನೆ.

ಬಡಾವಣೆಗೊಂದು ಪೊಲೀಸ್ ಠಾಣೆ ಮಾದರಿಯಲ್ಲಿ ಬೆಂಗಳೂರು ನಗರವನ್ನು ವಿಭಾಗ ಮಾಡಿಕೊಂಡು ತನ್ನ ಹುಡುಗರನ್ನು ಬಿಟ್ಟಿದ್ದ ಸೋಮ ತನ್ನ ದಂಧೆಯನ್ನು ಸರಾಗವಾಗಿ ನಡೆಸುತ್ತಿರುತ್ತಾನೆ. ಒಮ್ಮೆ ಸಿವಿಲ್ ಕೋರ್ಟ್ ಬಳಿ ಬಂಧಿತನಾದರೂ ತಪ್ಪಿಸಿಕೊಂಡಿರುತ್ತಾನೆ. ಅಲ್ಲದೆ, ಸೋಮನ ಮುಂದೆ ಗನ್ ಹಿಡಿದು ನಿಂತ ಅಶೋಕ್ ಕುಮಾರ್ ಅವರಿಗೆ 'ನನಗೇನು ನೀನು ಗನ್ ತೋರಿಸುವುದು, ಹೋಗಿ ವೀರಪ್ಪನ್ ಗೆ ತೋರಿಸು' ಎಂದು ಅವಾಜ್ ಹಾಕಿ ಜೈಲಿ ಸೇರಿರುತ್ತಾನೆ.

Why Tiger BB Ashok Kumar targeted

ಸೋಮನನ್ನು ಬದಲಾಯಿಸಲು ಅಶೋಕ್ ಕುಮಾರ್ ಬಹುವಾಗಿ ಯತ್ನಿಸಿ ವಿಫಲರಾಗುತ್ತಾರೆ. ನಂತರ 1995ರಲ್ಲಿ ಆಡುಗೋಡಿ-ಇಂದಿರಾನಗರ ಬಳಿಯ ಸ್ಮಶಾನದಲ್ಲಿ ಎನ್ ಕೌಂಟರ್ ನಲ್ಲಿ ಸೋಮ ಸಾವನ್ನಪ್ಪುತ್ತಾನೆ. ಇನ್ಸ್ ಪೆಕ್ಟರ್ ಅಶೋಕ್ ಕುಮಾರ್, ಅಬ್ದುಲ್ ಅಜೀಜ್ ನೇತೃತ್ವದ ತಂಡ ಸೋಮನ ಕಥೆ ಮುಗಿಸಿದರೂ ಗುಂಡು ಹೊಡೆದಿದ್ದು ಅಜೀಜ್ ಅವರು ಮಾತ್ರ ಎಂಬ ಕಥೆಯೂ ಚಾಲ್ತಿಯಲ್ಲಿದೆ.

ಬಳಿಕ ಡೆಡ್ಲಿ ಸೋಮನ ಸಹಚರರಾದ ರಾಜಶೇಖರ್ ರೆಡ್ಡಿ ಸೇರಿದಂತೆ ಹಲವರನ್ನು ಬಂಧಿಸಿ ಜೈಲಿಗೆ ಹಾಕಲಾಗುತ್ತದೆ. ರಾಜಶೇಖರ್ ರೆಡ್ಡಿ ಯನ್ನು ನಂತರ ಒಳ್ಳೆ ವ್ಯಕ್ತಿಯನ್ನಾಗಿಸಿದ ಅಶೋಕ್ ಕುಮಾರ್ ಅವರು ಸೋಮನ ಪತ್ನಿಯ ಜೊತೆ ಮದುವೆ ಮಾಡಿಸುತ್ತಾರೆ. ಅದರೆ, ರಾಜಶೇಖರ್ ಭಯದ ನೆರಳಲ್ಲೇ ಕೆಲವು ವರ್ಷ ಜೀವಿಸಿ ನಂತರ ಸಾವನ್ನಪ್ಪುತ್ತಾನೆ. ಸೋಮನ ಪತ್ನಿ ಎರಡು ಬಾರಿ ಪತಿ ವಿಯೋಗ ಅನುಭವಿಸಿದ ನೋವು ನುಂಗಿಕೊಂಡು ಜೀವಿಸುತ್ತಿದ್ದಾರೆ.

ರಾಜಧಾನಿಯಲ್ಲಿ ಡೆಡ್ಲಿ ಸೋಮನ ಮೇಲೆ ನಡೆದ ಎನ್‌ಕೌಂಟರ್ ಮೂರನೆಯದಾಗಿತ್ತು. 1989ರಲ್ಲಿ ಕಮ್ಮನಹಳ್ಳಿ, ಸ್ಟೇಷನ್ ಶೇಖರ್, 1993 ಆರ್. ಟಿ. ನಗರದಲ್ಲಿ ನೇಪಾಳಿ ಬಲವೀರ್ ಅಲಿಯಾಸ್ ಬಲ್ಲಿ ಹಾಗೂ 1995 ರಲ್ಲಿ ಇಂದಿರಾನಗರದ ಸ್ಮಶಾನದ ಬಳಿ ಸೋಮ ಅಲಿಯಾಸ್ ಡೆಡ್ಲಿ ಸೋಮ ಹಾಗೂ ಬಸವನ ಎನ್‌ಕೌಂಟರ್ ನಡೆದಿತ್ತು.

ಬಾಲ -ಸೋಮ ದೋಸ್ತಿ: ಡಿಪ್ಲೋಮಾ ಪದವೀಧರನಾಗಿದ್ದ ಆರೋಪಿ ಬಾಲು 1988ರಲ್ಲಿ ತಿಲಕನಗರದ ಯುಗೇಂದ್ರ ಶ್ರೇಷ್ಠಿ ಮತ್ತು ದಮಯಂತಿ
ದಂಪತಿಯನ್ನು ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ, ಜೀವಾವಧಿ ಶಿಕ್ಷೆಗೆ ಗುರಿಯಾದ ಜೈಲಿನಲ್ಲಿದ್ದ ವೇಳೆ ರೌಡಿ ಡೆಡ್ಲಿ ಸೋಮನ ಸಹಚರ ರಾಜಶೇಖರ ರೆಡ್ಡಿ ಪರಿಚಯವಾಗಿದೆ.

ಆತನ ಪ್ರಭಾವ ಮತ್ತು ಪ್ರೇರಣೆಯಿಂದ ಸೋಮನ ಸಾವಿನ ಪ್ರತೀಕಾರವಾಗಿ ಅಶೋಕ್ ಕುಮಾರ್ ಹತ್ಯೆ ಮಾಡುವ ಯೋಚನೆ ಮಾಡಿದ್ದ. 2008ರ ನ.8ರಂದು ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆಯಾದರೂ, 2009 ಫೆ.7 ರಂದು ವಾಪಾಸಗದೆ ತಲೆಮರೆಸಿಕೊಂಡಿದ್ದ.ಜೈಲಿನಲ್ಲಿ ಈ ಹಿಂದೆ ಪರಿಚಯವಾಗಿದ್ದ ಸೋಮನ ಸಹಚರರು ಮತ್ತು ಆರೋಪಿಗಳು ಸಿಕ್ಕಾಗ ಮದ್ಯದ ಅಮಲಿನಲ್ಲಿ ಹತ್ಯೆಯ ಬಗ್ಗೆ ಮಾತನಾಡುತ್ತಿದ್ದ

ಬಾಲಸುಬ್ರಹ್ಮಣ್ಯರಾಜ್ ಅರಸುಗೆ ನಿವೃತ್ತ ಎಎಸ್‌ಐ ಪುತ್ರ ರೌಡಿಶೀಟರ್ ಅಶ್ವತ್ಥ , ಮಾಜಿ ಸಚಿವ ಜಾಲಪ್ಪ ಅವರ ಮೊಮ್ಮಗ ಸಂಜಯ್ ಮತ್ತು ಗಾಳಿ ರವಿ ಕೂಡ ಸಾಥ್ ನೀಡಿದ್ದಾರೆ. ಪೊಲೀಸ್ ಸೇವೆಯಲ್ಲಿ ಇದ್ದ ವೇಳೆ ಈ ನಾಲ್ವರು ನನಗೂ ಎಂದೂ ಮುಖಾಮುಖಿ ಆಗಿಲ್ಲ.

ಆದರೆ, ಡೆಡ್ಲಿ ಸೋಮನ ಸಾವಿನ ಸೇಡು ತೀರಿಸಿಕೊಳ್ಳಲು ಸೋಮನ ಸಹಚರನ ಪ್ರಚೋದನೆಯಿಂದ ಬಾಲಸುಬ್ರಹ್ಮಣ್ಯನಿಗೆ ನನ್ನ ಹತ್ಯೆ ಮಾಡುವ ಉದ್ದೇಶವಿತ್ತು. ಈ ವಿಚಾರವನ್ನು ಉಳಿದ ಆರೋಪಿಗಳ ಜತೆ ಮೊಬೈಲ್ ಸಂಭಾಷಣೆ ನಡೆಸಿದ್ದ. ಇದೀಗ ಓರ್ವ ಆರೋಪಿಯನ್ನು ಮಾತ್ರ ಬಂಧಿಸಿದ್ದು, ಮುಂದೆ ಉಳಿದ ಆರೋಪಿಗಳನ್ನು ಬಂಧಿಸುವ ನಿರೀಕ್ಷೆ ಇದೆ ಎಂದು ನಿವೃತ್ತ ಎಸಿಪಿ ಬಿ.ಬಿ. ಅಶೋಕ್‌ಕುಮಾರ್ ಹೇಳಿದ್ದಾರೆ.

English summary
Why Tiger BB Ashok Kumar targetted by Balasubramanya? Ashok kumar known for his reformation of Rowdys. Bangalore CCB police arrested two accused who plan to kill, Rtd ACP B.B Ashok Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X