ಹೈದರಾಬಾದ್ ಸ್ಫೋಟದಲ್ಲಿ ಕನ್ನಡಿಗ ಸಾವು

padakaml kulakarni
ಹೈದರಾಬಾದ್, ಫೆ.22: ಹೈದರಾಬಾದ್ ನಲ್ಲಿ ಗುರುವಾರ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಕನ್ನಡಿನೊಬ್ಬ ಬಲಿಯಾಗಿರುವ ಸಂಗತಿ ಬೆಳಕಿಗೆ ಬಂದಿದೆ.

ಸಂಜೆ 7 ಗಂಟೆ ವೇಳೆಗೆ ದಿಲ್ ಸುಖ್ ನಗರದ ಬಳಿ ನಡೆದ ಮೊದಲ ಸ್ಪೋಟದಲ್ಲಿ ಬೀದರ್ ಮೂಲದ ಪದ್ಮಾಕರ್ ಕುಲಕರ್ಣಿ (40) ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಬೀದರ್ ಜಿಲ್ಲೆ ಬಾಲ್ಕಿ ತಾಲ್ಲೂಕಿನ ಬ್ಯಾಡಸಂದ್ರ ಗ್ರಾಮದ ನಿವಾಸಿಯಾದ ಕುಲಕರ್ಣಿ, ಹೈದರಾಬಾದ್ ನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಗುರುವಾರ ಕೆಲಸ ಮುಗಿಸಿಕೊಂಡು, ಇವರು ದಿಲ್ ಸುಖ್ ನಗರ ಸಮೀಪದಲ್ಲಿ ತೆರಳುತ್ತಿದ್ದಾಗ ಬಾಂಬ್ ಸ್ಫೋಟಿಸಿ ಮೃತಪಟ್ಟಿದ್ದಾರೆ.

ಬಾಂಬ್ ಸ್ಫೋಟದ ವೇಳೆ ಗಾಯಗೊಂಡಿದ್ದ ರಾಜಸ್ಥಾನ್ ಮೂಲದ ಶೋಭಾರಾವ್ (24) ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಯಿಂದಾಗಿ ಹಲವಾರು ಜನರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಂಭವವಿದೆ.

ಬಾಂಬ್ ಸ್ಫೋಟ ಪಕ್ರರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮೂಲದ ಇಬ್ಬರು ಮತ್ತು ಜಾರ್ಖಂಡ್ ಮೂಲದ ಒಬ್ಬ ವ್ಯಕ್ತಿಯ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. (ಚಿತ್ರಗಳಲ್ಲಿ ಹೈದರಾಬಾದ್ ಸರಣಿ ಬಾಂಬ್ ಸ್ಫೋಟ)

ಬಾಂಬ್ ಸ್ಫೋಟದಲ್ಲಿ ಮೃತಪಟ್ಟ 10 ಮಂದಿಯ ಗುರುತು ಪತ್ತೆ ಹಚ್ಚಲಾಗಿದೆ. ಗೊಂಟಿ ತಿರುಪತಿ (55), ಶಿವಾನಿ (22), ಮುತ್ಯಾಲ ರಾಜಶೇಖರ್ (23), ವಾಡೆ ವಿನೋದ್ ಕುಮಾರ್ (23), ಎ.ರಾಮುಲು (37), ಮಹಮದ್ ರಫೀಕ್ (24), ಇಜಾಜ್ ಅಹಮದ್, ರಾಮುಲು (51), ಶೀನಿವಾಸ ರೆಡ್ಡಿ (36), ಹರೀಶ್ ಕಾರ್ತಿಕ್ (29) ಮೃತರಾಗಿದ್ದು ಇವರ ಶವವನ್ನು ಉಸ್ಮಾನಿಯ ಆಸ್ಪತ್ರೆಯಲ್ಲಿಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+