ಬಂದ್ ಗೆ ಮೊದಲ ಬಲಿ: ಕಾರ್ಮಿಕ ಮುಖಂಡನ ಹತ್ಯೆ

ಬುಧವಾರ ಬೆಳಗಿನ ಜಾವ ಬಂದ್ ಆರಂಭವಾದ ಮರುಘಳಿಗೆಯೇ ಕಾರ್ಮಿಕ ನಾಯಕನೊಬ್ಬನ ಬರ್ಬರ ಹತ್ಯೆಯಾಗಿದೆ. ಎಡರಂಗದ AITUC ಖಜಾಂಜಿ ನರೇಂದ್ರ ಸಿಂಗ್ ಅವರನ್ನು ಬಸ್ ನಿಲ್ದಾಣದಲ್ಲಿ ಇರಿದು ಸಾಯಿಸಲಾಗಿದೆ.
AITUC ಪ್ರಧಾನ ಕಾರ್ಯದರ್ಶಿ ಗುರುದಾಸ್ ದಾಸ್ ಗುಪ್ತಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಆದರೆ ನರೇಂದ್ರ ಸಿಂಗ್ ಅವರು ಬಸ್ ನಿಲ್ದಾಣದಿಂದ ಬಸ್ಸನ್ನು ಹೊರಕ್ಕೆ ತೆಗೆಯಲು ಯತ್ನಿಸಿದ್ದಾರೆ. ಆ ವೇಳೆ ಕೆಲ ದುಷ್ಕರ್ಮಿಗಳು ಅವರನ್ನು ಇರಿದು ಸಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಗುರುದಾಸ್ ದಾಸ್ ಗುಪ್ತಾ ಅವರು ಈ ದುರ್ಘನೆಯ ನಡೆದಿದ್ದರೂ ಬಂದ್ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ INTUC ಮತ್ತು ಬಿಜೆಪಿ ಪರ BMS ಸಂಘಟನೆಗಳೂ ಸಹ ಬಂದ್ ನಲ್ಲಿ ಪಾಲ್ಗೊಂಡಿವೆ.












Click it and Unblock the Notifications