ಹಣ ಸ್ಫೋಟಕ ಸಾಗಿಸಿ ಸಿಕ್ಕಿಬಿದ್ದ ಗೃಹಸಚಿವ!

ನಾಗಾಲ್ಯಾಂಡ್ ನಲ್ಲಿ ಚುನಾವಣೆ ನಡೆಯುತ್ತಿದೆ ಆದ್ದರಿಂದ ನೀತಿ ಸಂಹಿತೆ ಜಾರಿಯಲ್ಲಿದೆ.ಇದರ ಅರಿವಿದ್ದು, ಗೃಹ ಸಚಿವ ಇಂಕಾಂಗ್ ಎಲ್ ಇಮ್ ಚೆನ್ ತಮ್ಮ ಕಾರಿನಲ್ಲಿ ಸ್ಫೋಟಕ ಮತ್ತು 1.10 ಕೋಟಿ ರೂ. ಹಣ ಸಾಗಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಫೆ.23ರಂದು ನಾಗಾಲ್ಯಾಂಡ್ ನಲ್ಲಿ ಚುನಾವಣೆ ದಿನಾಂಕ ನಿಗದಿಯಾಗಿದೆ. ಚುನಾವಣೆಯಲ್ಲಿ ಮೋಕ್ ಚುಂಗ್ ಜಿಲ್ಲೆಯ ಉಸ್ತುವಾರಿ ಹೊತ್ತಿರುವ ಗೃಹ ಸಚಿವ ಇಂಕಾಂಗ್ ಎಲ್ ಇಮ್ ಚೆನ್ ತಮ್ಮ ಕಾರಿನಲ್ಲಿ ಸ್ಫೋಟಕ ಮತ್ತು ಕೋಟ್ಯಂತರ ರೂ. ಹಣವನ್ನು ತೆಗೆದುಕೊಂಡು ಹೋಗುತ್ತಿದ್ದರು.
ಓಕಾ ಜಿಲ್ಲೆಯ ಸಮೀಪದಲ್ಲಿ ಅಸ್ಸಾಂ ರೈಫಲ್ ಪಡೆಯ ಯೋಧರು ಗೃಹ ಸಚಿವರ ಕಾರನ್ನು ತಪಾಸಣೆ ಮಾಡಿದಾಗ ಹಣ ಮತ್ತು ಸ್ಫೋಟಕಗಳಿರುವುದು ತಿಳಿದುಬಂದಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಗೃಹ ಸಚಿವರನ್ನು ವಶಕ್ಕೆ ಪಡೆದಿರುವ ಯೋಧರು ಅವರನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದಾರೆ.
ಕೊರಿಡಂಗ ವಿಧಾನಸಭಾ ಕ್ಷೇತ್ರದಿಂದ ನಾಗಲ್ಯಾಂಡ್ ಪೀಪಲ್ ಫ್ರಂಟ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಇಂಕಾಂಗ್ ಎಲ್ ಇಮ್ ಚೆನ್ ತಮ್ಮ ಸ್ವ ಕ್ಷೇತ್ರಕ್ಕೆ ಹಂಚಲು ಹಣವನ್ನು ತೆಗೆದುಕೊಂಡು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಕಳೆದ ಫೆ.16 ರಂದು ಎನ್ ಸಿಎಫ್ ಪಕ್ಷದ ಅಭ್ಯರ್ಥಿಯೊಬ್ಬ ಹೆಲಿಕಾಪ್ಟರ್ ನಲ್ಲಿ 1 ಕೋಟಿ ರೂ. ಹಣ ಸಾಗಿಸುವಾಗ ಸಿಕ್ಕಿಬಿದ್ದಿದ್ದರು.












Click it and Unblock the Notifications