ಜಾತ್ಯತೀತ ಜನತಾದಳಕ್ಕೆ ಪುಟ್ಟೇಗೌಡ ಗುಡ್ ಬೈ

ಶಾಸಕರ ರಾಜೀನಾಮೆ ಪಡೆದು ಅದನ್ನು ಅಂಗೀಕರಿಸದ ಬೇಕಾದ ಸ್ವೀಕರ್ ಕೆ.ಜಿ.ಬೋಪಯ್ಯ ಕೊಡಗು ಜಿಲ್ಲಾ ಪ್ರವಾಸದಲ್ಲಿರುವುದರಿಂದ, ಅಲ್ಲಿಗೆ ತೆರಳಿದ ಪುಟ್ಟೇಗೌಡ ಕೊಡಗಿನ ಪೊನ್ನಂಪೇಟೆಯ ಸ್ಪೀಕರ್ ಅವರ ನಿವಾಸದ ಕಚೇರಿಗೆ ತೆರಳಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಪಕ್ಷದೊಳಗಿನ ಆಂತರಿಕ ಭಿನ್ನಮತ, ಎಚ್.ಡಿ.ರೇವಣ್ಣ ಅವರ ಏಕಪಕ್ಷೀಯ ನಿಲುವುಗಳಿಂದ ನೊಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ವಿಧಾನಸಭಾ ಪ್ರತಿಪಕ್ಷದ ನಾಯಕ ಎ.ಚ್.ಡಿ.ರೇವಣ್ಣ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ.ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಅವರು ಆರೋಪಿಸಿದ್ದಾರೆ.ಜೆಡಿಎಸ್ ತೊರೆದಿರುವ ಸಿ.ಎಸ್.ಪುಟ್ಟೇಗೌಡ ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ವಿವಿಧ ಪಕ್ಷಗಳು ತಯಾರಿ ಆರಂಭಿಸಿರುವಾಗಲೇ ಪಕ್ಷಾಂತರದ ಪರ್ವ ಆರಂಭವಾಗಿದೆ. ಸಿ.ಎಸ್.ಪುಟ್ಟೇಗೌಡರ ರಾಜೀನಾಮೆಯಿಂದಾಗಿ ಜೆಡಿಎಸ್ ನ ಒಂದು ವಿಕೆಟ್ ಪತನಗೊಂಡಂತಾಗಿದೆ.












Click it and Unblock the Notifications