ಬಿಎಂಟಿಸಿಯಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿ

BMTC is planning is 'ticketless' travel
ಬೆಂಗಳೂರು, ಫೆ.18: 'ಟಿಕೆಟ್ ಇಲ್ಲದೆ ಪ್ರಯಾಣ, ದಂಡಕ್ಕೆ ಆಹ್ವಾನ' ಎಂದು ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ನೋಡಿರುತ್ತೀರಿ. ಇನ್ಮುಂದೆ ಟಿಕೆಟ್ ಇಲ್ಲದೆ ಆರಾಮವಾಗಿ ಪ್ರಯಾಣಿಸಿ ಎಂದು ಬೋರ್ಡ್ ಕಾಣಿಸಿದರೆ ಬೆಚ್ಚಿಬೀಳಬೇಡಿ.

ಹತ್ತು ಹಲವು ಹೊಸ ಸೌಲಭ್ಯ, ಯೋಜನೆಗಳನ್ನು ಜಾರಿಗೆ ತಂದು ಸತತವಾಗಿ ದೇಶದ 'ಶ್ರೇಷ್ಠ ಸಾರಿಗೆ' ಎನಿಸಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC) ಈಗ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಶೀಘ್ರದಲ್ಲೇ ಬಿಎಂಟಿಸಿ 'ಟಿಕೆಟ್ ರಹಿತ ಪ್ರಯಾಣ' ಸಾಧ್ಯ ಎಂದು ಘೋಷಿಸಿದೆ.

ಪೇಪರ್ ಲೆಸ್ ಸರ್ಕಾರಿ ಕಚೇರಿಗಳಂತೆ ಬಿಎಂಟಿಸಿ ಕೂಡಾ ಸಂಪೂರ್ಣ ಪೇಪರ್ ಲೆಸ್ ಆಗಲಿದೆ. ಇಂಟಲಿಜೆನ್ಸ್ ಟ್ರಾನ್ಸ್ ಪೋರ್ಟ್ ವ್ಯವಸ್ಥೆ(ITS) ಜಾರಿಗೆ ಬರಲಿದ್ದು, ಕರ್ನಾಟಕ ಸಾರಿಗೆ ಸಂಸ್ಥೆಗಳು ಟಿಕೆಟ್ ರಹಿತ ಪ್ರಯಾಣ ಸಾಧ್ಯವಾಗಿಸಲಿದೆ. ಬಸ್ ಟಿಕೆಟ್ ಬದಲಿಗೆ ಕ್ರೆಡಿಟ್ ವ್ಯವಸ್ಥೆ ಜಾರಿಗೆ ಬರಲಿದೆ. ಸ್ಮಾರ್ಟ್ ಕಾರ್ಡ್ ಗಳ ಮೂಲಕ ಹಣ ಪಾವತಿಸಿ ಪ್ರಯಾಣಿಸಬಹುದು.

ಟಿಕೆಟ್ ರಹಿತ ಪ್ರಯಾಣ ಹೊಸ ವಿಷಯವಲ್ಲ ಎನ್ನಬಹುದು. ಕೆಎಸ್ಸಾರ್ಟಿಸಿಯಲ್ಲಿ ಆನ್ ಲೈನ್ ಟಿಕೆಟ್ ಬುಕ್ ಮಾಡಿದವರು ಮೊಬೈಲ್ ಗೆ ಬಂದ ಎಸ್ ಎಂಎಸ್ ತೋರಿಸಿ ಕೂಡಾ ಪ್ರಯಾಣ ಮಾಡಬಹುದು.

ಟಿಕೆಟ್ ರಹಿತ ಪ್ರಯಾಣ ಜಾರಿಗೊಳಿಸಲು ಬಿಎಂಟಿಸಿ ಈಗಾಗಲೇ ಟೆಂಡರ್ ಕರೆದಿದೆ. ದೆಹಲಿಯ DIMMTS ಹಾಗೂ ಶೋಭಾ ಅಪ್ಲೈಡ್ DSP ಸಂಸ್ಥೆಗೆ ಜಂಟಿಯಾಗಿ ಯೋಜನೆ ಸಿಕ್ಕಿದೆ. ಸದ್ಯದಲ್ಲೇ ಅದೇಶ ಹೊರಬೀಳುವ ಸಾಧ್ಯತೆಯಿದೆ. ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಬಸ್ ಗಳಿಗೆ ಜಿಪಿಎಸ್ ನಂತರ ಬಿಎಂಟಿಸಿ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮೆಷಿನ್(ETMs)ಗಳನ್ನು ಹೊರ ತರುತ್ತಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಅವರು ಡಿಎನ್ ಎ ಪತ್ರಿಕೆಗೆ ಹೇಳಿದ್ದಾರೆ.

ತಿಂಗಳ ಪಾಸ್, ಟಿಕೆಟ್ ಬದಲಿಗೆ ಸ್ಮಾರ್ಟ್ ಕಾರ್ಡ್ ಗಳನ್ನು ಬಳಸಲಾಗುತ್ತದೆ. ಸ್ಮಾರ್ಟ್ ಕಾರ್ಡ್ ಗಳನ್ನು ರೀ ಚಾರ್ಚ್ ಮಾಡಿಸಿಕೊಳ್ಳಬಹುದು. ಬಸ್ ನಲ್ಲಿ ಪ್ರಯಾಣಿಸುವಾಗ ದುಡ್ಡು ಕೊಟ್ಟು ಟಿಕೆಟ್ ಪಡೆಯುವ ಬದಲು ಕಾರ್ಡ್ ಸ್ವೈಪ್ ಮಾಡಿದರೆ ತಕ್ಷಣವೆ ಹಣ ಕಡಿತಗೊಳ್ಳುತ್ತದೆ. ಎಲ್ಲಾ ರೀತಿ ಪಾಸ್ ಗಳಿಗೂ ಇದೇ ವ್ಯವಸ್ಥೆ ಅಳವಡಿಸಲು ಚಿಂತಿಸಲಾಗಿದೆ ಎಂದು ಅಂಜುಮ್ ಹೇಳಿದ್ದಾರೆ.

ಸ್ಮಾರ್ಟ್ ಕಾರ್ಡ್ ವ್ಯವಸ್ಥೆಗೆ ಪ್ರಯಾಣಿಕರು ಹೊಂದುಕೊಳ್ಳುವುದರಿಂದ ಅನಗತ್ಯವಾಗಿ ಕಾಗದ ಬಳಕೆ ತಗ್ಗಿಸಬಹುದು. ಚಿಲ್ಲರೆ ಸಿಗದೆ ನಿರ್ವಾಹಕರು ಒದ್ದಾಡುವ ದಿನಗಳು ದೂರಾಗುತ್ತದೆ. ಆದರೆ, ಸ್ಮಾರ್ಟ್ ಕಾರ್ಡ್ ಕಡ್ಡಾಯ ಮಾಡುವ ಇರಾದೆ ಸದ್ಯಕ್ಕಿಲ್ಲ. ಕಾರ್ಡ್ ಬೇಡ ಎಂದವರಿಗೆ ಪೇಪರ್ ಪಾಸ್ ಗಳನ್ನು ವಿತರಿಸಲಾಗುತ್ತದೆ ಎಂದು ಅಂಜುಮ್ ತಿಳಿಸಿದರು.

ನಮ್ಮ ಮೆಟ್ರೋ ಹಾಗೂ ಬಿಎಂಟಿಸಿಗೆ ಕಾಮನ್ ಬಸ್ ಪಾಸ್ ತರುವ ಯೋಜನೆ ಕೂಡಾ ಜಾರಿಯಲ್ಲಿದೆ. ಬಿಎಂಟಿಸಿ ಹಾಗೂ ಬಿಎಂಆರ್ ಸಿಎಲ್ ಅಧಿಕಾರಿಗಳು ಇತ್ತೀಚೆಗೆ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಬಿಎಂಟಿಸಿಯಲ್ಲಿ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಕ್ಲಿಕ್ ಆದರೆ, ಕೆಎಸ್ಸಾರ್ಟಿಸಿಯಲ್ಲೂ ಇದೇ ವ್ಯವಸ್ಥೆ ಬರಲಿದೆ. ಗೂಗಲ್ ಮ್ಯಾಪ್ ಬಳಸಿ ಹೊರಡುವ ಸ್ಥಳ ಹಾಗೂ ತಲುಪುವ ಸ್ಥಳದ ಮಾರ್ಗ ಸೂಚಿಯನ್ನು ಪ್ರಯಾಣಿಕರಿಗೆ ಸೂಕ್ತವಾಗಿ ಒದಗಿಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಂಜುಮ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+