ನಿಮ್ಮ ಮನೆಗೆ ಇನ್ನೂ ಸೆಟ್ ಅಪ್ ಬಾಕ್ಸ್ ಇಲ್ಲ ಅಂದ್ರೆ

Cable cos to spend Rs 3k cr on set-top boxes
ಬೆಂಗಳೂರು, ಫೆ.18: ಕೇಬಲ್ ಟಿವಿ ಅಪರೇಟರ್ ಗಳಿಗೆ ಈಗ ಪುರುಸೊತ್ತಿಲ್ಲ. ಎಲ್ಲಾ ಕಡೆ ಎರಡನೇ ಹಂತದ ಡಿಜಿಟೈಜೇಷನ್ ಆರಂಭವಾಗಿದೆ. ಕೇಬಲ್ ಹೋಗಿ ಸೆಟ್ ಆಪ್ ಬಾಕ್ಸ್ ಮನೆ ಮನೆಯಲ್ಲೂ ಬಂದು ಕೂತಿದೆ. ಈ ಬೃಹತ್ ಕಾರ್ಯಕ್ಕೆ ಸರಿ ಸುಮಾರು ಎರಡರಿಂದ ಮೂರು ಸಾವಿರ ಕೋಟಿ ಖರ್ಚಾಗುತ್ತಿದೆ.

ಮಾ.31 ಡೆಡ್ ಲೈನ್ ಇರುವುದರಿಂದ ಮಲ್ಟಿ ಸಿಸ್ಟಮ್ ಆಪರೇಟರ್ ಗಳು (MSOs) ಸುಮಾರು 2,500 ರಿಂದ 3,000 ಕೋಟಿ ರು ವ್ಯಯಿಸಿ ಸೆಟ್ ಅಪ್ ಬಾಕ್ಸ್(STB) ಗಳನ್ನು ಅಳವಡಿಸುತ್ತಿದ್ದಾರೆ. ಸದ್ಯಕ್ಕೆ ದೇಶದ ಕೇಬಲ ಮಾರುಕಟ್ಟೆಯಲ್ಲಿ ನಾಲ್ಕು ಪ್ರಮುಖ MSOs ಗಳಿವೆ. ಹ್ಯಾಥ್ ವೇ ಕೇಬ್ ಹಾಗೂ ಡಾಟಾ ಕಾಮ್, ಡೆನ್ ನೆಟ್ವರ್ಕ್ಸ್, ಇಂಡರ್ಸ್ ಇಂಡ್ ಮೀಡಿಯಾ ಮತ್ತು ಕಮ್ಯೂನಿಕೇಷನ್ ಲಿ(IMCL), ಸಿಟಿಕೇಬಲ್ ಮತ್ತು ಡಿಜಿಕೇಬಲ್.

ಮಾಹಿತಿ ಮತ್ತು ಪ್ರಸಾರ ಇಲಾಖೆ ಹೊರಡಿಸಿದ ಆದೇಶದ ಮೇರೆಗೆ ಅನಲಾಗ್ ವ್ಯವಸ್ಥೆಯಿಂದ ಎಲ್ಲಾ ಕೇಬಲ್ ಪ್ರಸಾರಗಳು ಡಿಜಿಟಲ್ ಆಗುತ್ತಿದೆ. ಸುಮಾರು 15 ರಾಜ್ಯಗಳ 38 ನಗರದಲ್ಲಿ ಡಿಜಿಟಲೈಜೇಷನ್ ಕಾರ್ಯ ಸಾಗಿದೆ. ಮೊದಲ ಹಂತದಲ್ಲಿ ನಾಲ್ಕು ಮೆಟ್ರೋ ನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ ಹಾಗೂ ಚೆನ್ನೈ ನಲ್ಲಿ ಸೆಟ್ ಅಪ್ ಬಾಕ್ಸ್ ಅಳವಡಿಸಲಾಗಿದೆ. ಆದರೆ, ದೆಹಲಿ ಮತ್ತು ಮುಂಬೈ ಬಿಟ್ಟರೆ ಉಳಿದ ನಗರಗಳಲ್ಲಿ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಎರಡನೇ ಹಂತಕ್ಕೆ ಸುಮಾರು 16 ರಿಂದ 20 ದಶಲಕ್ಷ ಸೆಟ್ ಅಪ್ ಬಾಕ್ಸ್ ಗಳ ಅವಶ್ಯಕತೆಯಿದೆ. ಹೀಗಾಗಿ ಬಂಡವಾಳ ಹೂಡಿಕೆ ಸುಮಾರು 3000 ಕೋಟಿ ದಾಟುವ ನಿರೀಕ್ಷೆಯಿದೆ. ಸದ್ಯಕ್ಕೆ ಸುಮಾರು 6 ಮಿಲಿಯನ್ ಟಿವಿಗಳಿಗೆ ಮಾತ್ರ ಸೆಟ್ ಅಪ್ ಬಾಕ್ಸ್ ಅಳವಡಿಸಲಾಗಿದೆ. ಕೇಬಲ್ ಆಪರೇಟರ್ ಗಳಿಗೆ ಪ್ರತಿ ಸೆಟ್ ಅಪ್ ಬಾಕ್ಸ್ ಸುಮಾರು 1,500 ರು ವೆಚ್ಚವಾಗುತ್ತದೆ.

ಎರಡನೇ ಹಂತಕ್ಕೆ ಹಾಥ್ ವೇ ಸುಮಾರು 300 ಕೋಟಿ ತೆಗೆದಿರಿಸಿದೆ. ಸುಮಾರು 1.5 ಮಿಲಿಯನ್ ಬಾಕ್ಸ್ ಗಳನ್ನು ಇಲ್ಲಿ ತನಕ ಅಳವಡಿಸಿದೆ. ಹೆಚ್ಚುವರಿಯಾಗಿ 3 ಮಿಲಿಯನ್ ಬಾಕ್ಸ್ ಗಳ ಬೇಡಿಕೆ ಇದೆ ಎಂದು ಹಾಥ್ ವೇ ಮುಖ್ಯ ಆರ್ಥಿಕ ಅಧಿಕಾರಿ ಜಿ ಸುಬ್ರಮಣಿಯನ್ ಹೇಳಿದ್ದಾರೆ.

ಉಳಿದಂತೆ DTH ಆಪರೇಟರ್ ಗಳಲ್ಲಿ ವಿಡಿಯೋಕಾನ್ ಸುಮಾರು 700 ಕೋಟಿ ಹೂಡಿಕೆಯೊಂದಿಗೆ IPO ಬಿಡುಗಡೆಗೆ ಮುಂದಾಗಿದೆ. ಟಾಟಾ ಸ್ಕೈ 500 ಕೋಟಿ ಇಟ್ಟು ಕೊಂಡಿದೆ. ಪ್ರತಿ ಚಂದಾದರ ಸರಾಸರಿ 2100 ರು ನಿಂದ 2400 ರು ತಗುಲುವುದರಿಂದ ಡಿಟಿಎಚ್ ಗಿಂತ ಸೆಟ್ ಅಪ್ ಬಾಕ್ಸ್ ಗೆ ಕಡಿಮೆ ವೆಚ್ಚ ಎನ್ನಬಹುದು. ಒಟ್ಟಾರೆ, ನಿಮ್ಮ ಮನೆಗೆ ಇನ್ನೂ ಸೆಟ್ ಅಪ್ ಬಾಕ್ಸ್ ಇಲ್ಲ ಎಂದರೆ ನಿಮ್ಮ ಕೇಬಲ್ ಆಪರೇಟರ್ ಸಂಪರ್ಕಿಸಿ, ತಪ್ಪದೇ ಅಳವಡಿಸಿಕೊಳ್ಳಿ ಇಲ್ಲಾಂದ್ರೆ ಮಾ.31ರಿಂದ ಕೇಬಲ್ ಟಿವಿ ಪ್ರಸಾರ ನೋಡಲು ಸಿಗುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+