• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರಾಟೆ ಕಲಿತ ಹುಡುಗಿಗೆ ಚುಡಾಯಿಸಿ ಒದೆ ತಿಂದರು

|

ತಿರುವನಂತಪುರಂ.ಫೆ.16 : ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿರುವಾಗಲೇ ಕೇರಳದಲ್ಲಿ ಹುಡುಗಿಗೆ ಚುಡಾಯಿಸಿದ ಮೂವರು ಆಕೆಯಿಂದ ಹಿಗ್ಗಾಮುಗ್ಗಾ ಒದೆ ತಿಂದಿರುವ ಘಟನೆ ನಡೆದಿದೆ. ಕೇರಳದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಅಮೃತ ಮೋಹನ್ ಕರಾಟೆ, ಕಲಾರಿಪಟ್ಟು ಕಲಿತಿದ್ದಾಳೆ. ಇದನ್ನು ಅರಿಯದೇ ಆಕೆಗೆ ಚುಡಾಯಿಸಿದ ಮೂವರು ಈಗ ಪೊಲೀಸರ ಅತಿಥಿಗಳಾಗಿದ್ದಾರೆ.

ಏನಿದು ಘಟನೆ : ಕೇರಳದ ಸಂಗುಮಂಕುಮ್ ನಲ್ಲಿ ಒನ್ ಬಿಲಿಯನ್ ರೈಸಿಂಗ್ ಕಾರ್ಯಕ್ರಮದ ಪ್ರಚಾರ ಕಾರ್ಯ ನಡೆಯುತ್ತಿತ್ತು. ಇದರಲ್ಲಿ ಪಾಲ್ಗೊಂಡಿದ್ದ ಅಮೃತ ಬೈಕ್ ಓಡಿಸಿ, ತನ್ನ ಕರಾಟೆ ಚಾಕಚಕ್ಯತೆ ಪ್ರದರ್ಶಿಸಿ, ಕೇರಳದ ಪುರಾತನ ಕಲೆಯಾದ ಕಲಾರಿಪಟ್ಟುವಿನ ಪ್ರದರ್ಶನ ನೀಡಿದಳು.

ಕಾರ್ಯಕ್ರಮದ ನಂತರ ಹತ್ತಿರವಿದ್ದ ಬೇಕರಿಗೆ ಕುಟುಂಬದವರು, ಸ್ನೇಹಿತರೊಟ್ಟಿಗೆ ಹೊರಟಿದ್ದಾಳೆ. ಬೈಕ್ ನಲ್ಲಿ ಈಕೆ ತೆರಳುತ್ತಿದ್ದರೆ ಕಾರು ಮತ್ತು ಜೀಪ್ ನಲ್ಲಿ ಕುಟುಂಬದವರು ಮತ್ತು ಸ್ನೇಹಿತರು ಹಿಂಬಾಲಿಸುತ್ತಾರೆ. ಬೇಕರಿ ಬಳಿ ಅಮೃತ ಬೈಕ್ ನಿಲ್ಲಿಸುವಾಗ ಸರ್ಕಾರದ ಜಾಹೀರಾತು ಫಲಕಕ್ಕೆ ಆಕಸ್ಮತ್ ತಾಗಿ, ಅದು ಕೆಳಗೆ ಬೀಳುತ್ತದೆ.

ಪಕ್ಕದಲ್ಲಿದ್ದ ಹುಡುಗ ಇದನ್ನು ಕಂಡು ಆಕೆಯನ್ನು ಚುಡಾಯಿಸುತ್ತಾನೆ. ಇದರಿಂದ ಕೋಪಗೊಂಡ ಅಮೃತ ಹುಡುಗನಿಗೆ ಬೈಯುತ್ತಾಳೆ. ಇದರಿಂದ ಕೆರಳಿದ ಆತ ಸ್ನೇಹಿತರಿಗೆ ಫೋನ್ ಮಾಡಿ ಕರೆಸಿದ್ದಾನೆ. ನಂತರ ಮೂವರು ಸೇರಿ ಆಕೆಯನ್ನು ಮತ್ತೆ ಚುಡಾಯಸಿದ್ದಾರೆ. ಅಶ್ಲೀಲ ಪದಗಳನ್ನು ಬಳಸಿ ಆಕೆಯನ್ನು ನಿಂದಿಸಿದ್ದಾರೆ.

ಅಮೃತಾಗೆ ಕರಾಟೆ ಮತ್ತು ಕಲಾರಿಪಟ್ಟು ತಿಳಿದಿದೆ ಎಂಬ ಅರಿವಿಲ್ಲದೆ ಹುಡುಗರು ಆಕೆಗೆ ಮಾನಸಿಕ ಹಿಂಸೆ ನೀಡಲು ಪ್ರಾರಂಭಿಸಿದ್ದಾರೆ. ತಕ್ಷಣ ಹುಡುಗರ ವಿರುದ್ಧ ತಿರುಗಿ ಬಿದ್ದ ಅಮೃತ ಮತ್ತು ಆಕೆಯ ತಂದೆ ಮೂವರು ಹುಡುಗರನ್ನು ಚೆನ್ನಾಗಿ ಥಳಿಸಿದ್ದಾರೆ. ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದ ಅಮೃತ ತನ್ನ ಕೌಶಲ್ಯಗಳನ್ನೆಲ್ಲ ಚುಡಾಯಿಸಿದ ಹುಡುಗರ ಮೇಲೆ ಪ್ರಯೋಗಿಸಿ ಅವರನ್ನು ಬಡಿದಿದ್ದಾಳೆ.

ಹುಡುಗಿಯ ಪೌರುಷ ಕಂಡು ದಂಗಾದ ಹುಡುಗರು ಅಲ್ಲಿಂದ ಓಡಲು ಪಯತ್ನಿಸಿದ್ದಾರೆ. ಆದರೆ, ಅವರನ್ನು ಹಿಡಿದ ಅಮೃತ ತನ್ನನ್ನು ಚುಡಾಯಿಸಿದ್ದಾರೆ ಎಂದು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾಳೆ. ಅಮೃತಗೆ ಚುಡಾಯಿಸಿದ ಹುಡುಗರು ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In Kerala, college student Amrita Mohan beats up three mens for abusing her. Amrita winner of black belt in karate and practising kalaripayattu from 13 years. Three eveteasers had to face unexpected retaliation from the girl for abusing her, without knowing she is karate expert. Well done girl.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more