ಬೆಂಗಳೂರು: ಇನ್ಮುಂದೆ ರಾತ್ರಿ ವೇಳೆ ಕುದುರೆ ರೇಸ್!
ಬೆಂಗಳೂರು, ಫೆ. 16: ಇತ್ತಿತ್ಲಾಗೆ ಬಿಡಿ ಬಹಳಷ್ಟು ಕ್ರೀಡೆಗಳು ರಾತ್ರಿ ಕ್ರೀಡೆಗಳಾಗಿ ಮಾರ್ಪಟ್ಟಿವೆ. ಅದಕ್ಕೆ ತಾಜಾ ಸೇರ್ಪಡೆಯೆಂದರೆ ಕುದುರೆ ರೇಸ್. ಬೇರೆ ದೇಶಗಳಲ್ಲಿ ಕುದುರೆ ರೇಸ್ ರಾತ್ರಿ ವೇಳೆ ನಡೆಯುತ್ತಿದೆಯಾದರೂ ಭಾರತಕ್ಕಿನ್ನೂ ಅದು ಹೊಸದು. ಹಾಗೆಂದೇ, ಬೆಂಗಳೂರಿನಲ್ಲಿ (BTC) ಇನ್ನು ಮುಂದೆ ರಾತ್ರಿ ವೇಳೆಯೂ ಕುದುರೆ ಜೂಜು ನಡೆಸಲು ಸಿದ್ಧತೆಗಳು ನಡೆಯುತ್ತಿವೆ.
ಬೆಂಗಳೂರಿನಲ್ಲಿ ಕುದುರೆ ರೇಸ್ ಹೆಚ್ಚು ಜನಪ್ರಿಯವೋ ಅಥವಾ ರೇಸ್ ಕೋರ್ಸ್ ರಸ್ತೆ ಹೆಚ್ಚು ಜನಪ್ರಿಯವೋ ಅಂದರೆ ಜನ ರೇಸ್ ಕೋರ್ಸ್ ರಸ್ತೆಗೆ ಮಣೆ ಹಾಕುತ್ತಾರೆ. ಇನ್ನು ಕುದುರೆ ರೇಸ್ ಜನಸಾಮಾನ್ಯರಿಗೆ ಹುಳಿ ದ್ರಾಕ್ಷಿಯೇ ಸರಿ. ಕೆಲವರಿದ್ದಾರೆ ಬಿಡಿ ರೇಸಿನ ಚಟಕ್ಕೆ ಬಿದ್ದು ದುಡ್ಡು ಕಳೆದುಕೊಂಡು ಅದೇ ರಸ್ತೆಯಲ್ಲಿ ಅಮ್ಮಾ-ತಾಯಿ ಆಗಿರುವ ನಿದರ್ಶನಗಳೂ ಇವೆ.

ಮುಂದಿನ ಚಳಿಗಾಲದ ಡರ್ಬಿ ವೇಳೆಗೆ flood-lit ರೇಸಿಂಗ್ ನಡೆಸುತ್ತೇವೆ. ವಿಶ್ವದಾದ್ಯಂತ ರಾತ್ರಿ ವೇಳೆ ನಡೆಯುವ ಕುದುರೆ ರೇಸ್ ಭಾರಿ ಜನಪ್ರಿಯವಾಗುತ್ತಿದೆ. ಬಿಟಿಸಿಯಲ್ಲೂ ಮೊದಲ ಬಾರಿಗೆ ಇದಕ್ಕೆ ಅವಕಾಶ ಕಲ್ಪಿಸುವುದಾಗಿ 20ಕ್ಕೂ ಹೆಚ್ಚು ಕುದುರೆಗಳ ಒಡೆಯ ದಯಾನಂದ ಪೈ ಹೇಳಿದ್ದಾರೆ.
'ಕುದುರೆ ರೇಸಿಂಗ್ ಭೂಪಟದಲ್ಲಿ BTCಗೆ ಅಗ್ರಮಾನ್ಯ ಸ್ಥಾನ ಕಲ್ಪಿಸುವುದು ನನ್ನ ಆಶಯವಾಗಿದೆ. ಅದರಲ್ಲಿ ಈ ರಾತ್ರಿ ರೇಸ್ ಸಹ ಒಂದು. ಇದು ಇಂದಿನ ಬೆಂಗಳೂರಿಗೆ ಹೇಳಿ ಮಾಡಿಸಿದಂತಿರುತ್ತದೆ, ಜನ ಖಂಡಿತಾ ಇದನ್ನು ಇಷ್ಟಪಡುತ್ತಾರೆ. ಇನ್ನು, BTC ಈಗಿರುವ ಸ್ಥಳದಿಂದ ಸ್ಥಳಾಂತರವಾದ ಮೇಲೆ ಅದನ್ನು ಮತ್ತಷ್ಟು ಆಧುನಿಕವಾಗಿ ಅಭಿವೃದ್ಧಿಗೊಳಿಸಲು ಹೆಚ್ಚು ಅವಕಾಶವಿರುತ್ತದೆ' ಎನ್ನುತ್ತಾರೆ ದಯಾನಂದ ಪೈ.












Click it and Unblock the Notifications