ಲೈಂಗಿಕ ಕಿರುಕುಳ: ಎನ್ನಾರೈ ಡಿಸೈನರ್ ಆನಂದ್ ಗೆ ಜೈಲು

Molestation: Designer Anand Jon jailed for five years in US
ನ್ಯೂಯಾರ್ಕ್, ಫೆ .16: ಭಾರತ ಮೂಲದ ಅಮೆರಿಕದ ಖ್ಯಾತ ಫ್ಯಾಶನ್ ಡಿಸೈನರ್ ಆನಂದ್ ಜಾನ್ ಗೆ 59 ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಉದಯೋನ್ಮುಖ ರೂಪದರ್ಶಿಗಳಿಗೆ ನೆರವಾಗುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಿಕ್ಷೆ ವಿಧಿಸಲಾಗಿದೆ. ಈಗ ಇದೇ ರೀತಿ ಆರೋಪದ ಮೇಲೆ ಹೆಚ್ಚುವರಿ ಐದು ವರ್ಷ ಜೈಲುವಾಸ ಅನುಭವಿಸಬೇಕಾಗುತ್ತದೆ.

ಮ್ಯಾನ್ ಹಟನ್ ಸುಪ್ರೀಂಕೋರ್ಟ್ ನಲ್ಲಿ ಜಾನ್ ತನ್ನ ತಪ್ಪೊಪ್ಪಿಗೆ ನೀಡಿದ ಮೇಲೆ ಶಿಕ್ಷೆ ಪ್ರಮಾಣ 5 ವರ್ಷ ತಗ್ಗಿದೆ. ಕೇರಳ ಮೂಲದ ವಿನ್ಯಾಸಕಾರ ಆನಂದ್ ರನ್ನು 2007ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿತ್ತು.

ಸುಮಾರು 7 ಯುವ ಮಾಡೆಲ್ ಗಳ ಜೊತೆ ಚಕ್ಕಂದವಾಡಿದ ಆರೋಪ ಹೊರೆಸಲಾಗಿತ್ತು. 14 ವರ್ಷಕ್ಕಿಂತ ಕಿರಿಯ ವಯಸ್ಸಿನ ಮಾಡೆಲ್ ಗಳ ಜೊತೆ ಆನಂದ್ ಕೆಟ್ಟದಾಗಿ ನಡೆದುಕೊಂಡ ಆರೋಪ ಸಾಬೀತಾಗಿತ್ತು. ಇದಕ್ಕಾಗಿ ಕ್ಯಾಲಿಫೋರ್ನಿಯಾದ ಜೈಲಿನಲ್ಲಿ 59 ವರ್ಷ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ನ್ಯೂಯಾರ್ಕ್, ಟೆಕ್ಸಾಸ್, ಕ್ಯಾಲಿಫೋರ್ನಿಯಾ ಅನೇಕ ಕಡೆ ತನ್ನ ಕಾಮಬಾಣ ಬಿಡುತ್ತಿದ್ದ ಆನಂದ್ ಗೆ ಕೊಂಚ ರಿಲೀಫ್ ಸಿಗುವ ಸಾಧ್ಯತೆಯೂ ಇದೆ. ಹಲವು ಪ್ರಕರಣಗಳನ್ನು ಸಮೀಕರಿಸಿ ಹಾಲಿ ಶಿಕ್ಷೆ ಪ್ರಮಾಣದೊಡನೆ ಹೊಂದಿಸಲು ಜಿಲ್ಲಾ ಅಟರ್ನಿ ಮ್ಯಾಕ್ಸೆನ್ ಅವರು ಸೂಚಿಸಿದ್ದಾರೆ. ಹೀಗಾಗಿ ಹಾಲಿ ಶಿಕ್ಷೆ ಅವಧಿಗೆ ಹೆಚ್ಚುವರಿ ವರ್ಷಗಳು ಸೇರುವ ಸಾಧ್ಯತೆಯಿಲ್ಲ.

ಜಾನ್ ಅವರು 1999ರಿಂದ ಅಮೆರಿಕದ ಫ್ಯಾಶನ್ ಜಗತ್ತಿನಲ್ಲಿ ಕಾಣಿಸಿಕೊಂಡಿದ್ದಾರೆ. 'America's Next Top Model' ಸ್ಪರ್ಧೆಗೆ ಅನೇಕ ಬಾರಿ ವಿನ್ಯಾಸ ಒದಗಿಸಿದ್ದಾರೆ. ಪ್ಯಾರಿಸ್ ಹಿಲ್ಟನ್ ಸೇರಿದಂತೆ ಅನೇಕ ಜನಪ್ರಿಯ ತಾರೆಯಲ್ಲದೆ, ಮಾಧ್ಯಮ ಜಗತ್ತಿನ ತಾರೆ ಓಫ್ರಾ ವಿನ್ ಫ್ರೆ, ಗಾಯಕಿ ಜನತ್ ಜಾಕ್ಸನ್ ಅವರಿಗೂ ವಸ್ತ್ರ ವಿನ್ಯಾಸ ಮಾಡಿದ ಸಾಧನೆ ಅನಂದ್ ಅವರದ್ದು,

ಆದರೆ, ಆನಂದ್ ಮೇಲೆ ರೇಪ್, ಡ್ರಗ್ಸ್, ಮಾಫಿಯಾ ಜೊತೆ ಸಂಪರ್ಕ, ಓರಲ್ ಸೆಕ್ಸ್, ಇತ್ಯಾದಿ 49ಕ್ಕೂ ಹೆಚ್ಚು ಆರೋಪಗಳು ಆನಂದ್ ಮೇಲೆ ಕೇಳಿ ಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+