ಮಹಿಳೆಯರಿಗಾಗಿ ವಿಎಚ್ ಪಿ ಸಹಾಯವಾಣಿ ಶುರು

ಮಹಿಳೆಯರ ರಕ್ಷಣೆಯ ಸಲುವಾಗಿ ಖಾಸಗಿ ಸಂಸ್ಥೆ ಅಥವಾ ಸಂಘಟನೆಯೊಂದು ಸಹಾಯವಾಣಿ ಆರಂಭಿಸಿದ ಈ ಪ್ರಯತ್ನ ದೇಶದಲ್ಲೇ ಪ್ರಥಮವಾಗಿದೆ. ಈ ವರ್ಷದ ಹೊಸ ಉಪಕ್ರಮವಾಗಿ ಸಂಕಷ್ಟದಲ್ಲಿರುವ ಮಹಿಳೆಯರಿಗಾಗಿ ಸಹಾಯವಾಣಿ ಆರಂಭಿಸುತ್ತಿದ್ದೇವೆ ಎಂದು ಎಂದು ವಿಎಚ್‌ಪಿ ವಕ್ತಾರ ವಿನೋದ ಬನ್ಸಾಲ್ ಹೇಳಿದ್ದಾರೆ
ದಿನದ 24ಗಂಟೆಯೂ ಸಹಾಯ ವಾಣಿ ಲಭ್ಯವಿರುತ್ತದೆ. ವಿಶ್ವ ಹಿಂದೂ ಪರಿಷತ್ ನ ಯುವವ ಘಟಕಗ, ಬಜರಂಗದಳ ಮತ್ತು ದುರ್ಗಾವಾಹಿನಿ ಕರೆಗಳನ್ನು ಸ್ವೀಕರಿಸಲಿದೆ. ಯಾವುದೇ ಅಹಿತಕರ ಘಟನೆ ವರದಿಯಾದರೆ ನಾವು ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತೇವೆ ಎಂದು ಬನ್ಸಾಲ್
ಅವರು ವಿವರಿಸಿದರು.
2011ರಲ್ಲಷ್ಟೇ ವಿಶ್ವ ಹಿಂದು ಪರಿಷತ್ 24X7 ಹಿಂದು ಹೆಲ್ಪ್‌ಲೈನ್ ಆರಂಭಿಸಿದ್ದು ದೇಶಾದ್ಯಂತ ಭಾರಿ ಪ್ರಶಂಸೆಗೆ ಪಾತ್ರವಾಗಿದೆ. ಹಿಂದು ಹೆಲ್ಪ್‌ಲೈನ್ ಸಕ್ರಿಯ ಕಾರ್ಯನಿರ್ವಹಣೆಗೆ ಇತ್ತೀಚಿಗೆ ಸಾಕ್ಷಿ ಸಿಕ್ಕಿದೆ. ಕುಂಭಮೇಳದ ಅಲಹಾಬಾದ್ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿದ ವೇಳೆ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡುವಲ್ಲಿ ಶ್ರಮಿಸಿದೆ.
ನಾವು ವ್ಯಾಲೆಂಟೈನ್ಸ್ ಡೇ, ಪ್ರೇಮಿಗಳ ವಿರೋಧಿಗಳಲ್ಲ. ಯುವ ಪೀಳಿಗೆ ಮೋಜು ಮಸ್ತಿಯಲ್ಲಿ ತೊಡಗಿ ಜೀವನ ಹಾಳು ಮಾಡಿಕೊಳ್ಳಬಾರದು ಎಂಬ ಸುದುದ್ದೇಶದಿಂದ ನಾವು ಕೆಲವು ನಡೆ ಇಡಲೇಬೇಕಾದ ಪ್ರಸಂಗ ಒದಗಿದೆ. ಅಪ್ಪಟ ಪ್ರೇಮಿಗಳಿಗಾದರೆ ಅವರಿಗೆ ಮದುವೆ ಮಾಡಿಸುವ ಜವಾಬ್ದಾರಿ ಹೊತ್ತಿದ್ದೇವೆ. ಬಲವಂತವಾಗಿ ಬೇರ್ಪಡಿಸುವುದು ಅಥವಾ ಮದುವೆ ಮಾಡಿಸುವ ಕೆಲಸ ಮಾಡಿಲ್ಲ. ಪೋಷಕರು ಹಾಗೂ ಪೊಲೀಸರ ನೆರವಿಲ್ಲದೆ ಇದು ಸಾಧ್ಯವಿಲ್ಲ. ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆ ಬೇಡ ಎಂಬುದು ನಮ್ಮ ಅಭಿಮತ ಎಂದು ರಾಷ್ಟ್ರವಾದಿ ಶಿವಸೇನಾ ಕಾರ್ಯಕರ್ತ ರವೀಂದ್ರ ನೇಗಿ ಹೇಳಿದ್ದಾರೆ.












Click it and Unblock the Notifications