ಗುಪ್ತಚರ ಅಧಿಕಾರಿಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಸಿ
ನವದೆಹಲಿ, ಫೆ.15: ಕೇಂದ್ರ ಗುಪ್ತಚರ ಇಲಾಖೆ ಅಂದರೆ Intelligence Bureau (IB)ದಲ್ಲಿ ಅಧಿಕಾರಿಯಾಗಲು ಇಲ್ಲೊಂದು ಸದವಕಾಶವಿದೆ.
खुफिया ब्यूरो ಗೆ 76 ಅಧಿಕಾರಿಗಳು ಬೇಕಾಗಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಇದೇ ಫೆಬ್ರವರಿ 17 ಕೊನೆಯ ದಿನವಾಗಿದೆ. ಮಾರ್ಚ್ 24ರಂದು ಲಿಖಿತ ಪರೀಕ್ಷೆ. ತಡವೇಕೆ? ತಕ್ಷಣ ಅರ್ಜಿ ಗುಜರಾಯಿಸಿ.
ಭಾರತ ಸರಕಾರದ ಗೃಹ ಸಚಿವಾಲಯದಡಿ ಬರುವ ಈ ಇಲಾಖೆಯು 76 ಮಂದಿ Associate Central Intelligence Officer (ACIO)ಗಳನ್ನು ನೇಮಕ ಮಾಡಿಕೊಳ್ಳಲಿದೆ. ಈ ಕುರಿತಾದ ಅಧಿಸೂಚನೆಯು www.mha.nic ವೆಬ್ ಸೈಟಿನಲ್ಲಿ ಲಭ್ಯವಿದೆ.

ಅಸಿಸ್ಟೆಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ (ಎಸಿಐಒ) ಟೆಕ್ನಿಕಲ್: 19 ಹುದ್ದೆಗಳು (UR-11, OBC -1, SC-5, ST-2)
ಅಸಿಸ್ಟೆಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್(ಎಸಿಐಒ) ವೈರ್‌ಲೆಸ್: 57 ಹುದ್ದೆಗಳು (UR-12, OBC -20, SC-17, ST-8)
ಇನ್ನು ಅರ್ಹತೆ ವಿಷಯಕ್ಕೆ ಬಂದರೆ ಅಭ್ಯರ್ಥಿಗಳು ಪದವಿ ಪಡೆದಿರಬೇಕು. ಜತೆಗೆ ಕಂಪ್ಯೂಟರ್ ಜ್ಞಾನ ಅತ್ಯವಶ್ಯಕ. ವಯಸ್ಸು 27 ವರ್ಷದ ಗಡಿ ದಾಟಿರಬಾರದು. ನೀವೂ ಅರ್ಜಿ ಸಲ್ಲಿಸುವಿರಾದರೆ ದಟ್ಸ್ ಕನ್ನಡ 'ನಿಮಗೆ ಶುಭವಾಗಲಿ' ಎಂದು ಹಾರೈಸುತ್ತದೆ.
ಏನಿದು Intelligence Bureau?: ಭಾರತೀಯ ಪೊಲೀಸ್ ಸೇವೆಗಾಗಿ ಗೃಹ ಸಚಿವಾಲಯದಡಿ 1887ರಲ್ಲಿ ಸ್ಥಾಪನೆಯಾಗಿದೆ. ವಿಶ್ವದಲ್ಲೇ ತುಸು ಹಳೆಯ ಬೇಹು ಸಂಸ್ಥೆ. ನವದೆಹಲಿ ಇಲಾಖೆಯ ಕೇಂದ್ರ ಕಚೇರಿ. ಕೆಲಸ ಇಡೀ ಭಾರತದಾದ್ಯಂತ. 1947ರಲ್ಲಿ Central Intelligence Bureau ಆಗಿ ಪುನರ್ ಅಸ್ತಿತ್ವಕ್ಕೆ. ಅದಕ್ಕೂ ಮುನ್ನ ಬ್ರಿಟೀಷ್ ಆಡಳಿತದ ವಿರುದ್ಧ ದಂಗೆಯೇಳುವವರ ಮೇಲೆ ನಿಗಾಯಿಡಲು Indian Political Intelligence (IPI) ಹೆಸರಿನಲ್ಲಿ 1921ರಲ್ಲಿ ಅಸ್ತಿತ್ವಕ್ಕೆ ಬಂದಿತು.












Click it and Unblock the Notifications