ವೀರಪ್ಪನ್ ಪತ್ನಿಗೆ 25 ಲಕ್ಷ ಪರಿಹಾರ, ಕೋರ್ಟ್ ಆದೇಶ

ಪರಿಹಾರದ ಹಣ ನೀಡಿದ ನಂತರ ಚಿತ್ರದ ತಮಿಳು ಅವತರಿಣಿಕೆ 'ವಾನಾಯುಧಂ' ಬಿಡುಗಡೆ ಮಾಡಬಹುದೆಂದು ಸರ್ವೋಚ್ಚ ನ್ಯಾಯಾಲಯ ಅನುಮತಿ ನೀಡಿದೆ. ಚಿತ್ರದ ಕೆಲವು ಸನ್ನಿವೇಶಗಳಿಗೆ ಮುತ್ತುಲಕ್ಷ್ಮಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.
ಮುತ್ತುಲಕ್ಷ್ಮಿ ಅರ್ಜಿ ಸಲ್ಲಿಸಿದ್ದ ಹಿನ್ನಲೆಯಲ್ಲಿ ಮದರಾಸು ಉಚ್ಚ ನ್ಯಾಯಾಲಯ ಚಿತ್ರ ಬಿಡುಗಡೆಗೆ ಸೆಪ್ಟಂಬರ್ ತಿಂಗಳಲ್ಲಿ ತಡೆಯೊಡ್ಡಿತ್ತು. ನ್ಯಾಯಾಲಯದ ಆದೇಶದಂತೆ ಕೆಲವು ದೃಶ್ಯಗಳಿಗೆ ನಿರ್ದೇಶಕ ರಮೇಶ್ ಕತ್ತರಿ ಪ್ರಯೋಗಿಸಿದ ನಂತರ ಚಿತ್ರ ಬಿಡುಗಡೆಗೆ ಮದರಾಸು ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿತ್ತು.
ಇದನ್ನು ಪ್ರಶ್ನಿಸಿ ಮುತ್ತುಲಕ್ಷ್ಮಿ ಸರ್ವೋಚ್ಚ ನ್ಯಾಯಾಲದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವೀರಪ್ಪನ್ ಪತ್ನಿಗೆ ಪರಿಹಾರವಾಗಿ ಇಪ್ಪತ್ತೈದು ಲಕ್ಷ ನೀಡಿ, ನಂತರ ಚಿತ್ರ ತೆರೆಗೆ ತನ್ನಿ ಎಂದು ಸುಪ್ರೀಂಕೋರ್ಟ್ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಎಎಂಆರ್ ರಮೇಶ್ ಅವರಿಗೆ ಆದೇಶ ನೀಡಿದೆ.
ಅಟ್ಟಹಾಸ ಚಿತ್ರ ತಮಿಳು ಮತ್ತು ತೆಲುಗು ಭಾಷೆಯಲ್ಲೂ ಬಿಡುಗಡೆಯಾಗಲಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಅಟ್ಟಹಾಸ ಚಿತ್ರವಿಂದು (ಫೆ 14) ಬಿಡುಗಡೆಯಾಗಿದೆ.
1993ರಲ್ಲಿ ಬಾಂಬ್ ಸ್ಫೋಟಿಸಿ 22 ಪೊಲೀಸ್ ಸಿಬ್ಬಂದಿಗಳ ಸಾವಿಗೆ ಕಾರಣರಾಗಿ, ಸುಪ್ರೀಂಕೋರ್ಟ್‌ನಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ವೀರಪ್ಪನ್‌ನ ನಾಲ್ವರು ಸಹಚರರ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಬುಧವಾರ (ಫೆ 13) ತಿರಸ್ಕರಿಸಿದ್ದರು.
ವೀರಪ್ಪನ್ ಸಹಚರರಾಗಿದ್ದ ಜ್ಞಾನಪ್ರಕಾಶನ್, ಸೈಮನ್, 'ಮೀಸೆ' ಮಾದೈಯನ್ ಮತ್ತು ಪಿಲವೇಂದ್ರನ್ ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿರುವ ಕರ್ನಾಟಕದ ಪಾಲಾರ್ ಬಳಿ 1993ರಲ್ಲಿ ಭೂಮಿಯಲ್ಲಿ ಹುದುಗಿಸಿಟ್ಟಿದ್ದ ಬಾಂಬ್ ಸ್ಫೋಟಿಸಿ 22 ಪೊಲೀಸ್ ಸಿಬ್ಬಂದಿಗಳ ಸಾವಿಗೆ ಕಾರಣರಾಗಿದ್ದರು. ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಸರ್ವೋಚ್ಚ ನ್ಯಾಯಾಲಯ 2004ರಲ್ಲಿ ಆದೇಶ ಹೊರಡಿಸಿತ್ತು.
ಅಟ್ಟಹಾಸ ಚಿತ್ರವಿಮರ್ಶೆ
ವೀರಪ್ಪನ್ ಪಾತ್ರಧಾರಿ ಕಿಶೋರ್ ಸಂದರ್ಶನ
ಅಟ್ಟಹಾಸ ಚಿತ್ರದ ಗ್ಯಾಲರಿ












Click it and Unblock the Notifications