ಉತ್ತರ ಕೊರಿಯಾದ ಅಣು ಪರೀಕ್ಷೆಗೆ ಅಮೆರಿಕಾ ಆಕ್ಷೇಪ

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ಉಲ್ಲಂಘಿಸಿ, ಪರಮಾಣು ಪ್ರಯೋಗ ನಡೆಸಿರುವ ಉತ್ತರ ಕೊರಿಯಾ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯಬೇಕಾಗಿತ್ತು. ಆದರೆ, ಪರಮಾಣು ಅಸ್ತ್ರ ಹೊಂದುವ ಮೂಲಕ ಮೈತ್ರಿಕೂಟ ಮತ್ತು ಅಂತಾರಾಷ್ಟ್ರೀಯ ಶಾಂತಿ ಭದ್ರತೆಗೆ ಸವಾಲು ಹಾಕಿದೆ ಎಂದು ಒಬಾಮ ಹೇಳಿದ್ದಾರೆ.
ಡಿ.12 2012ರಲ್ಲಿ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆಗಳನ್ನು ನಡೆಸಿತ್ತು. ಇಂದು ಪರಮಾಣು ಪರೀಕ್ಷೆಗಳನ್ನು ತನ್ನ ನಿರ್ಧಾರದಂತೆ ನಡೆಸುತ್ತಿದೆ. ಯಾವುದೇ ದೇಶಗಳು ಇದರಿಂದ ಭಯಪಡುವ ಅಗತ್ಯವಿಲ್ಲ. ಅಂತರಾಷ್ಟೀಯ ಮತ್ತು ಮೈತ್ರಿಕೂಟಗಳ ಶಾಂತಿಗೆ ಧಕ್ಕೆಯಾಗದಂತೆ ಉತ್ತರ ಕೊರಿಯಾದ ನೀತಿಯ ವಿರುದ್ಧ ಕ್ರಮ ಕೈಗೊಳ್ಳುವಾಗಿ ಒಬಮಾ ಭರವಸೆ ನೀಡಿದ್ದಾರೆ.
ಪರಮಾಣು ಮೇಲ್ವೀಚಾರಣಾ ಸಮಿತಿಗೂ ಮಾಹಿತಿ ನೀಡದೆ ಪರೀಕ್ಷೆ ನಡೆಸಿರುವ ಉತ್ತರ ಕೊರಿಯಾದ ನೀತಿಗೆ ಭಾರತ ಮತ್ತು ಚೀನಾ ಸಹ ವಿರೋಧ ವ್ಯಕ್ತಪಡಿಸಿದ್ದು. ಅಂತಾರಾಷ್ಟ್ರಿಯ ಶಾಂತಿ ಭಂಗ ಮಾಡುವ ಇಂತಹ ಕ್ರಮಗಳನ್ನು ಎಲ್ಲಾ ದೇಶಗಳು ಖಂಡಿಸಬೇಕು ಎಂದು ಅಭಿಪ್ರಾಯಪಟ್ಟಿವೆ.
ಅಂತಾರಾಷ್ಟ್ರೀಯ ವಿರೋಧದ ನಡುವೆಯೂ ಹೇಳಿಕೆ ನೀಡಿರುವ ದಕ್ಷಿಣ ಕೊರಿಯಾದ ರಕ್ಷಣಾ ವಕ್ತಾರ ಕಿನ್ ಮಿನ್ ಸೆಯೋಕ್, ಉತ್ತರ ಕೊರಿಯಾ ಪರಮಾಣು ಪರೀಕ್ಷೆ ನಡೆಸುವುದಾಗಿ ಚೀನಾ, ಅಮೆರಿಕಾ ದೇಶಗಳಿಗೆ ಮೊದಲೇ ಮಾಹಿತಿ ನೀಡಿತ್ತು. ಪರಮಾಣು ಪರೀಕ್ಷೆಯ ದಿನಾಂಕವನ್ನು ಮಾತ್ರ ಧೃಡಪಡಿಸಿರಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)












Click it and Unblock the Notifications