ಹೆಂಡ್ತಿ ಒಪ್ಪಿಗೆ ಇಲ್ಲದ ಸಂಭೋಗ ಅತ್ಯಾಚಾರ ಅಲ್ಲ!

ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಕುರಿತು ನ್ಯಾ. ವರ್ಮಾ ಆಯೋಗ ನೀಡಿದ ವರದಿಯಲ್ಲಿ ಪ್ರಸ್ತಾಪವಾಗಿರುವ ಈ ಅಂಶವನ್ನು ನಾವು ಒಪ್ಪುವುದಿಲ್ಲ ಎಂದು ಈ ಸಂಘಟನೆ ಒತ್ತಿ ಹೇಳಿದೆ. ಗಂಡ ತನ್ನ ಹೆಂಡತಿಯನ್ನು ಆಕೆಯ ಒಪ್ಪಿಗೆ ಇಲ್ಲದಿದ್ದರೂ ಸಂಭೋಗಿಸಿದರೆ ಅದನ್ನು ಅತ್ಯಾಚಾರವೆಂದು ಪರಿಗಣಿಸಬಾರದು ಎಂದು ತನ್ನ ಅಭಿಮತವನ್ನು ಹೇಳಿದೆ.
ಆದರೆ, ನ್ಯಾ. ವರ್ಮಾ ಆಯೋಗದ ವರದಿಯಲ್ಲಿ ಇರುವಂತೆ, ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮವಸ್ತ್ರಧಾರಿ ವ್ಯಕ್ತಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರೆ ಅಂಥವರ ಮೇಲೆ ಕ್ರಮ ಜರುಗಿಸಬೇಕು ಎಂದು ಹೇಳಿದ್ದನ್ನು ಜಮಾತ್-ಇ-ಇಸ್ಲಾಮಿ ಹಿಂದ್ ಸಂಘಟನೆ ಒಪ್ಪುತ್ತದೆ ಎಂದು ಹೇಳಿದೆ.
ರಾಜ್ಯ ಸರಕಾರ ಆರಂಭಿಸಿರುವ ಸಕಲ ಮತ್ತು ವಾಜಪೇಯಿ ಆರೋಗ್ಯಶ್ರೀ ಯೋಜನೆಗಳನ್ನು ಸಂಘಟನೆ ಶ್ಲಾಘಿಸಿದ್ದು, ಭಯೋತ್ಪಾದನೆಗೆ ಸಂಬಂಧಿಸಿದಂತೆ ಮುಸ್ಲಿಂ ಯುವಕರನ್ನು ಅನಗತ್ಯವಾಗಿ ಸರಕಾರ ಕಿರುಕುಳಕ್ಕೆ ಈಡುಮಾಡುತ್ತಿದೆ ಎಂದು ಆಕ್ಷೇಪಿಸಿದೆ. ಭಯೋತ್ಪಾದಕರಿಗೆ ಶಿಕ್ಷೆಯಾದಂತೆ ಅಮಾಯಕ ಮುಸ್ಲಿಂ ಯುವಕರನ್ನು ಹಿಂಸಿಸಿದ ಪೊಲೀಸ್ ಅಧಿಕಾರಿಗಳನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದೆ.
ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಭಾನುವಾರ ನಡೆದ ಸಮ್ಮೇಳನದಲ್ಲಿ ರಾಜ್ಯದ ಅನೇಕ ಕಡೆಗಳಿಂದ ಸಾವಿರಾರು ಮುಸ್ಲಿಂ ನಾಗರಿಕರು ಭಾಗವಹಿಸಿದ್ದರು.












Click it and Unblock the Notifications